ಕಾರವಾರ: ಕುಮಟಾ-ಸಿದ್ದಾಪುರ ರಸ್ತೆಯ ಉಳ್ಳೂರು ಮಠ ಹಾಗೂ ಸೊಪ್ಪಿನ ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊರ್ಸೆ ಎಂಬಲ್ಲಿಯೂ ಭಾರಿ ಪ್ರಮಾಣದ ಗುಡ್ಡ ಕುಸಿದಿದೆ. ಉಳ್ಳೂರು ಮಠದ ಬಳಿ ಗುಡ್ಡ ಕುಸಿದ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆತಂಕ ಹುಟ್ಟಿಸುವಂತಿದೆ.
ಉಳ್ಳೂರು ಮಠ ಸಮೀಪದ ಅರಣ್ಯ ಪ್ರದೇಶದಲ್ಲಿ ಸುಮಾರು ಒಂದು ಎಕರೆಯಷ್ಟು ಗುಡ್ಡ ಕುಸಿದಿದೆ. ಸುಮಾರು 50 ಮೀಟರ್ ದೂರ ಮರ, ಮಣ್ಣು ಜಾರಿ ರಸ್ತೆಗೆ ಬಿದ್ದಂತಿದೆ. ಎರಡು ದಿನದಿಂದ ಕಾರ್ಯಾಚರಣೆ ನಡೆಸಿ ರಸ್ತೆ ಮೇಲಿನ ಮಣ್ಣು ತೆರವುಗೊಳಿಸಲಾಗಿದೆ. ಇದೀಗ ಕುಮಟಾ-ಸಿದ್ದಾಪುರ ನಡುವೆ ವಾಹನ ಸಂಚಾರ ಪುನಾರಂಭವಾಗಿದೆ.