ಕರ್ನಾಟಕ

karnataka

ETV Bharat / state

ಚನ್ನಪಟ್ಟಣ, ರಾಮನಗರಕ್ಕೆ ಏನೂ ಕೊಡದ ಕುಮಾರಸ್ವಾಮಿಗೆ ಚುನಾವಣೆ ಬಂದ್ರೆ ಅಳು ಬರುತ್ತದೆ: ಡಿ ಕೆ ಶಿವಕುಮಾರ್

ಚನ್ನಪಟ್ಟಣಕ್ಕೆ ಯಾವುದಾದರೂ ಒಂದು ಗುರುತಿಸುವ ಕೆಲಸ ಮಾಡಿರೋದನ್ನು ದಯವಿಟ್ಟು ಹೇಳಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್​ ಅವರು ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ ಅವರಿಗೆ ಟಾಂಗ್​ ನೀಡಿದರು.

DCM D.K. Shivakumar
ಡಿಸಿಎಂ ಡಿ.ಕೆ.ಶಿವಕುಮಾರ್​ (ETV Bharat)

By ETV Bharat Karnataka Team

Published : 4 hours ago

Updated : 4 hours ago

ಮಂಗಳೂರು: "ಚನ್ನಪಟ್ಟಣ, ರಾಮನಗರಕ್ಕೆ ಏನೂ ಕೊಡದ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಅಳು ಬರುತ್ತದೆ" ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಟೀಕಿಸಿದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, "ಕನ್ನಡ ಬಾವುಟ ಹಾರಿಸಲೆಂದು ರಾಮನಗರ, ಚನ್ನಪಟ್ಟಣದ ಜನತೆ ತಮ್ಮನ್ನು ಆಯ್ಕೆ ಮಾಡಿ ಕಳಿಸಿಕೊಟ್ಟಿದ್ದರು. ಆದರೆ ತಾವು ಒಂದು ದಿನವೂ ರಾಷ್ಟ್ರಧ್ವಜಕ್ಕೂ, ಕನ್ನಡ ಧ್ವಜಕ್ಕೂ ಗೌರವ ಕೊಟ್ಟಿಲ್ಲ. ಚನ್ನಪಟ್ಟಣಕ್ಕೆ ಯಾವುದಾದರೂ ಒಂದು ಗುರುತಿಸುವ ಕೆಲಸ ಮಾಡಿರೋದನ್ನು ದಯವಿಟ್ಟು ಹೇಳಿ. ಕೆರೆ ಮಾಡಿದ್ದು ಯೋಗೀಶ್ವರ್​, ದುಡ್ಡು ಕೊಟ್ಟಿದ್ದು ನಾನು.‌ ಸಿಎಂ ಆಗಿದ್ದಾಗಲೇ ಮಾಡಿಲ್ಲ. ಎಂಎಲ್ಎ ಆಗಿದ್ದಾಗ ಬಿಜೆಪಿಯೊಂದಿಗೆ ಸಂಪರ್ಕವಿತ್ತು. ಆವಾಗಲಾದರೂ ಗುರುತಿಸುವ ಏನಾದ್ರೂ ಕೆಲಸ ಮಾಡಬೇಕಿತ್ತಲ್ಲ.‌ ಸುಮ್ಮನೆ ಮತಕ್ಕಾಗಿ ಬಂದು ಮಾತನಾಡೋದಲ್ಲ" ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್​ (ETV Bharat)

"ಯೋಗೀಶ್ವರ್ ಪಕ್ಷಾಂತರಿ ಎಂಬುದನ್ನು ಒಪ್ಪುತ್ತೇನೆ. ಕಾಂಗ್ರೆಸ್, ಬಿಜೆಪಿಗೆ ಹೋದರು.‌ ಈಗ ಎನ್‌ಡಿಎ ಸರಿ‌ಯಿಲ್ಲ, ಕುಮಾರಸ್ವಾಮಿ ಸರಿಯಿಲ್ಲ ಎಂದು ಎಂಎಲ್‌ಸಿ ಸ್ಥಾನ ಬಿಟ್ಟು ನಮ್ಮೊಂದಿಗೆ ಬಂದಿದ್ದಾರೆ. ಅವರು ಟಿಕೆಟ್ ಕೊಡ್ತೀನಿ ಅಂಥ ಹೇಳಿದ್ರೂ ಬಿಡ್ತೀನಿ ಅಂದಿರುವುದು ನಂಗೆ ಗೊತ್ತಿಲ್ಲ. ನಾನಿವತ್ತು ಚನ್ನಪಟ್ಟಣ ತಾಲೂಕಿಗೆ ವಿದ್ಯಾವಂತ, ಬುದ್ಧಿವಂತನ‌ ಆಯ್ಕೆ‌ ಮಾಡಿದ್ದೇನೆ.‌ ನೂರಾರು ಕೋಟಿ ರೂ. ಕೆಲಸ ಆಗಲೇ ಶುರು ಮಾಡಿದ್ದೇವೆ. ಸಾವಿರಾರು ಜನ ಬಡವರು ಬಂದು ಅರ್ಜಿ ಕೊಟ್ಟಿದ್ದಾರೆ. ಅವರಿಗೆ ಸ್ಪಂದಿಸುತ್ತೇವೆ" ಎಂದು ಹೇಳಿದರು.

ಜನತಾದಳಕ್ಕೆ ಯಾವುದೇ ಭವಿಷ್ಯ ಇಲ್ಲ. ಭವಿಷ್ಯ ಇರುವ ನಾವು ಗ್ಯಾರಂಟಿಗಳನ್ನು ಕೊಡುತ್ತಿದ್ದೇವೆ.‌ ನಮ್ಮ ಗ್ಯಾರಂಟಿ ಇಡೀ ದೇಶಕ್ಕೆ ಮಾದರಿ. ಮೋದಿ ಚುನಾವಣೆಗೋಸ್ಕರ ಏನು ಬೇಕಾದರೂ ಮಾಡಲಿ. ಜನರು ನಮ್ಮನ್ನು ಮತ ಹಾಕಿ ಗೆಲ್ಲಿಸುತ್ತಾರೆ. ಶಕ್ತಿ ಯೋಜನೆ ನಾವು ಮಂಗಳೂರಿನಲ್ಲೇ ಘೋಷಣೆ ಮಾಡಿದ್ದು. ಯಾವ ಯೋಜನೆಯನ್ನೂ ನಾವು ಮುಂದಿನ ಐದು ವರ್ಷಕ್ಕೂ ನಿಲ್ಲಿಸಲ್ಲ. ವೃದ್ಧಾಪ್ಯ ವೇತನ, ವಿಧವಾ ವೇತನ ಎಲ್ಲವನ್ನೂ ಕೊಡುತ್ತಿದ್ದೇವೆ. ಯಾವುದಾದರೂ ಒಂದನ್ನು ಬಿಜೆಪಿ ಅಧಿಕಾರದಲ್ಲಿದ್ದಾಗಲೂ ನಿಲ್ಲಿಸಲು ಆಗಿಲ್ಲ.‌ ನಾವು ಬದುಕಿನ ಬಗ್ಗೆ ಕಾರ್ಯಕ್ರಮ ಕೊಟ್ಟರೆ, ಬಿಜೆಪಿಯವರು ಭಾವನೆ ಬಗ್ಗೆ ಕಾರ್ಯಕ್ರಮ ಕೊಡುತ್ತಿದ್ದಾರೆ" ಎಂದರು.

"ನಮ್ಮ ಯೋಜನೆಯನ್ನು ‌ಬಿಜೆಪಿ ಆಡಳಿತದಲ್ಲೂ ತರುತ್ತಿದ್ದಾರೆ. ಮಧ್ಯಪ್ರದೇಶ, ಹರಿಯಾಣ, ಮಹಾರಾಷ್ಟ್ರದಲ್ಲೂ ಆರಂಭ ಮಾಡಿದ್ದಾರೆ‌. ನಮ್ಮನ್ನು ಕಾಪಿ‌ ಮಾಡೋದು ಮೋದಿಯವರಿಗೆ ಮುಜುಗರ ಆಗ್ತಿದೆ. ನಮ್ಮ‌ ಆರ್ಥಿಕ ಬಲ ದೇಶದ ಆರ್ಥಿಕ ಬಲಕ್ಕಿಂತಲೂ ಗಟ್ಟಿಯಾಗಿದೆ. ಯತ್ನಾಳ್ ಒಬ್ಬ ಮೆಂಟಲ್ ಗಿರಾಕಿ, ಅವರ ಬಗ್ಗೆ ಮಾತನಾಡಲ್ಲ. ವಕ್ಫ್ ನೋಟಿಸ್ ಕೊಟ್ಟಿದ್ದು ಬಿಜೆಪಿ ಸರ್ಕಾರ. ನಾವು ರೈತರ ಜಮೀನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ.‌ ಅಧಿಕಾರಿಗಳು ತಪ್ಪು ಮಾಡಿದ್ರೆ ನಾವು ಕ್ರಮ ಕೈಗೊಳ್ಳುತ್ತೇವೆ"ಎಂದು ಡಿಕೆಶಿ ಹೇಳಿದರು.

ಇದನ್ನೂ ಓದಿ:ಮುಡಾ ಪ್ರಕರಣದಿಂದ ಸಿದ್ದರಾಮಯ್ಯನವರಿಗೆ ದೇವರ ಮೇಲೆ ಭಕ್ತಿ ಹೆಚ್ಚಾಗಿದೆ: ಹೆಚ್.ಡಿ‌ ಕುಮಾರಸ್ವಾಮಿ

Last Updated : 4 hours ago

ABOUT THE AUTHOR

...view details