ಕರ್ನಾಟಕ

karnataka

ETV Bharat / state

ಭಾರತೀಯ ವಿಜ್ಞಾನ ಸಂಸ್ಥೆಯ ಶ್ರೇಷ್ಠತಾ ಕೇಂದ್ರಕ್ಕೆ ಭೇಟಿ: ಅತ್ಯಾಧುನಿಕ ಡ್ರೋನ್ ಹಾರಿಸಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ ಹೆಚ್​ಡಿಕೆ - Kumaraswamy Visits IISc

ಭಾರತೀಯ ವಿಜ್ಞಾನ ಸಂಸ್ಥೆಯ ಶ್ರೇಷ್ಠತಾ ಕೇಂದ್ರಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ತರುಣ ವಿಜ್ಞಾನಿಗಳ ಜತೆ ಸಂವಾದ ನಡೆಸಿದರು.

ಅತ್ಯಾಧುನಿಕ ಡ್ರೋನ್ ಹಾರಿಸಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ ಕ್ಷಣ
ಅತ್ಯಾಧುನಿಕ ಡ್ರೋನ್ ಹಾರಿಸಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ ಕ್ಷಣ (ETV Bharat)

By ETV Bharat Karnataka Team

Published : Oct 2, 2024, 8:15 PM IST

ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಂದು ಬೆಂಗಳೂರಿನ ಹೆಚ್​ಎಂಟಿ ಕ್ಯಾಂಪಸ್ಸಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯ ಶ್ರೇಷ್ಠತಾ ಕೇಂದ್ರಕ್ಕೆ ಭೇಟಿ ನೀಡಿದರು. ಈ ಕೇಂದ್ರವು ಭಾರಿ ಕೈಗಾರಿಕೆ ಸಚಿವಾಲಯದ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಭಾರತೀಯ ವಿಜ್ಞಾನ ಸಂಸ್ಥೆಯ ನೆರವಿನೊಂದಿಗೆ ನಡೆಯುತ್ತಿದೆ. ಹೆಚ್​ಎಂಟಿ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕೊಹ್ಲಿ, ಸಚಿವಾಲಯದ ಉನ್ನತ ಅಧಿಕಾರಿಗಳೊಂದಿಗೆ ಸಚಿವರು ಇಲ್ಲಿಗೆ ಭೇಟಿ ಕೊಟ್ಟರು.

ರೋಬೋಟಿಕ್ಸ್, ಡ್ರೋನ್, ಅತ್ಯಾಧುನಿಕ ಕೃಷಿ ಸಲಕರಣೆ, ಸೇನಾ ಉಪಕರಣ ಸೇರಿದಂತೆ ಹತ್ತು ಹಲವು ಉತ್ಪನ್ನಗಳನ್ನು ತಯಾರಿಕೆಗೆ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಈ ಕೇಂದ್ರದಲ್ಲಿ ಕೇಂದ್ರ ಸಚಿವರು ಬಹಳ ಹೊತ್ತು ಕಳೆದರು. ಶ್ರೇಷ್ಠತಾ ಕೇಂದ್ರದಲ್ಲಿರುವ ಆರ್ಟ್ ಪಾರ್ಕ್ (Art park)ಗೆ ಭೇಟಿ ನೀಡಿ ತರುಣ ವಿಜ್ಞಾನಿಗಳ ಜತೆ ಸಂವಾದ ನಡೆಸಿದ ಸಚಿವರು; ಇಲ್ಲಿ ಅಭಿವೃದ್ಧಿಪಡಿಸಲಾಗಿರುವ ಅತ್ಯಾಧುನಿಕ ಕೃಷಿ ತಂತ್ರಜ್ಞಾನ ಸಲಕರಣೆಗಳನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ಶ್ರೇಷ್ಠತಾ ಕೇಂದ್ರಕ್ಕೆ ಭೇಟಿ ನೀಡಿದ ಕ್ಷಣ (ETV Bharat)

ಅತ್ಯಾಧುನಿಕ ವಾಹನ ವೀಕ್ಷಿಸಿದ ಸಚಿವರು:ಪ್ರಮುಖವಾಗಿ ಅತ್ಯಾಧುನಿಕ ATV (all terrain vehicle) ವಾಹನವನ್ನು ವೀಕ್ಷಿಸಿದ ಸಚಿವರು, ಕೆಲ ಹೊತ್ತು ಅದರ ಮೇಲೆ ಸವಾರಿ ನಡೆಸಿದರು. ಕೃಷಿ ಉದ್ದೇಶಕ್ಕೆ ಬಳಸಬಹುದಾದ ಈ ವಾಹನವನ್ನು ಎಂತಹುದೇ ದುರ್ಗಮ ಪ್ರದೇಶದಲ್ಲಿಯೂ ಬಳಕೆ ಮಾಡಬಹುದಾಗಿದೆ. ಪ್ರಮುಖವಾಗಿ ಅಡಿಕೆ, ಕಾಫಿ, ಚಹಾ, ತೆಂಗು ಸೇರಿದಂತೆ ನಾನಾ ವಾಣಿಜ್ಯ ಬೆಳಗಳನ್ನು ಬೆಳೆಯುವ ರೈತರಿಗೆ ಈ ವಾಹನ ಅನುಕೂಲವಾಗುತ್ತದೆ. ಎತ್ತರದ, ಕಡಿದಾದ ಪ್ರದೇಶಗಳಲ್ಲಿ ಈ ವಾಹನ ಬಳಕೆ ಮಾಡಬಹುದು ಎಂದು ವಿಜ್ಞಾನಿಗಳು ಸಚಿವರಿಗೆ ವಿವರಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ಶ್ರೇಷ್ಠತಾ ಕೇಂದ್ರಕ್ಕೆ ಭೇಟಿ ನೀಡಿದ ಕ್ಷಣ (ETV Bharat)

ಬಳಿಕ ಸಚಿವರು ಡ್ರೋನ್​ಗಳ ಆವಿಷ್ಕಾರದಲ್ಲಿ ವಿಜ್ಞಾನಿಗಳ ಸಾಧನೆ ಕಂಡು ಚಕಿತರಾದರು. ಅಲ್ಲದೇ, ತಾವೂ ಕುತೂಹಲದಿಂದ ಹೊಸ ತಲೆಮಾರಿನ ಅತ್ಯಾಧುನಿಕ ಡ್ರೋನ್ ಅನ್ನು ಹಾರಿಸಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದರು. ಅಲ್ಲದೆ; ವಿವಿಧ ನಮೂನೆಯ, ವಿವಿಧ ಉದ್ದೇಶಗಳಿಗೆ ಬಳಕೆಯಾಗುವ ಡ್ರೋನ್​ಗಳನ್ನು ವೀಕ್ಷಿಸಿ ತರುಣ ವಿಜ್ಞಾನಿಗಳ ಬೆನ್ನು ತಟ್ಟಿದರು. ರೋಬೋಟಿಕ್ ವಿಭಾಗದಲ್ಲಿ ಕೃಷಿಗೂ ಬಳಕೆ ಮಾಡಲಾಗುವ ರೋಬೋಟ್ ಗಳನ್ನು ಸಚಿವರು ವೀಕ್ಷಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ಶ್ರೇಷ್ಠತಾ ಕೇಂದ್ರಕ್ಕೆ ಭೇಟಿ ನೀಡಿದ ಕ್ಷಣ (ETV Bharat)

ವಿಜ್ಞಾನಿಗಳು ಅಸ್ತಿಯಷ್ಟೇ ಅಲ್ಲ; ದೇಶದ ಹೆಮ್ಮೆ: ತರುಣ ವಿಜ್ಞಾನಿಗಳ ಜತೆ ಸಂವಾದ ನಡೆಸಿದ ಕುಮಾರಸ್ವಾಮಿ, ನಿಮ್ಮ ಸಂಶೋಧನೆ, ಆವಿಷ್ಕಾರಗಳನ್ನು ಕಂಡು ಚಕಿತನಾಗಿದ್ದೇನೆ. ನಿಮ್ಮೆಲ್ಲರ ಸಾಧನೆಯನ್ನು ಕಂಡು ನನಗೆ ಹೆಮ್ಮೆ ಎನಿಸಿದೆ. ವಿಜ್ಞಾನಿಗಳು ನೀವು ದೇಶದ ಆಸ್ತಿ ಮತ್ತು ನಮ್ಮ ಪಾಲಿನ ಹೆಮ್ಮೆ ಎಂದು ಸಂತೋಷ ವ್ಯಕ್ತಪಡಿಸಿದರು.

ತರುಣ ವಿಜ್ಞಾನಿಗಳ ಜತೆ ಸಂವಾದ (ETV Bharat)

ಗಾಂಧಿ ಜಯಂತಿ, ಸ್ವಚ್ಛತಾ ದಿವಸ ಆಚರಣೆ:ಶ್ರೇಷ್ಠತಾ ಕೇಂದ್ರ (Center for Excellence)ದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜನ್ಮದಿನ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಸ್ವಚ್ಛತಾ ದಿನ ನಿಮಿತ್ತ ಪೌರ ಕಾರ್ಮಿಕರೊಂದಿಗೆ ಸ್ವಚ್ಛತಾ ಅಭಿಯಾನದಲ್ಲಿ ಸಚಿವರು ಭಾಗವಹಿಸಿದರು.

ಇದನ್ನೂ ಓದಿ:ಸಿಎಂ ಪತ್ನಿಯ 14 ನಿವೇಶನ ವಾಪಸ್ ಪ್ರಕರಣಕ್ಕೆ ತಿರುವು: ಕೋರ್ಟ್​ ಆದೇಶದ ಉಲ್ಲಂಘನೆ ಎಂದ ಹೆಚ್​ಡಿಕೆ - H D Kumaraswamy

ABOUT THE AUTHOR

...view details