ಕರ್ನಾಟಕ

karnataka

ETV Bharat / state

ಹಾವೇರಿ: ಬಸವರಾಜ ಬೊಮ್ಮಾಯಿ ಪರ ಪುತ್ರನಿಂದ ಮತಯಾಚನೆ - Basavaraj Bommai - BASAVARAJ BOMMAI

ಗದಗಿನ ಮೂರು ತಾಲೂಕು ಮತ್ತು ಹಾವೇರಿಯ ಐದು ತಾಲೂಕುಗಳಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಪುತ್ರ ಭರತ ಬೊಮ್ಮಾಯಿ ಮತಪ್ರಚಾರ ನಡೆಸಿದರು.

Bharata Bommai spoke to the media.
ಭರತ ಬೊಮ್ಮಾಯಿ ಮಾಧ್ಯಮದವರೊಂದಿಗೆ ಮಾತನಾಡಿದರು.

By ETV Bharat Karnataka Team

Published : Apr 7, 2024, 6:25 PM IST

ಭರತ ಬೊಮ್ಮಾಯಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಹಾವೇರಿ:ಹಾವೇರಿಲೋಕಸಭಾ ಕ್ಷೇತ್ರದ ಗದಗಿನ ಮೂರು ತಾಲೂಕು ಮತ್ತು ಹಾವೇರಿಯ ಐದು ತಾಲೂಕುಗಳಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಅವರ ಪುತ್ರ ಭರತ ಬೊಮ್ಮಾಯಿ ಇಂದು ಮತ ಪ್ರಚಾರ ಕೈಗೊಂಡರು. ಹಾವೇರಿ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಮತಯಾಚಿಸಿದರು.

ಇದರ ನಡುವೆ, ಹಾವೇರಿ ರಾಕ್ ಸ್ಟಾರ್ ಹೋರಿಯ ಕಳೇಬರದ ಅಂತಿಮ ದರ್ಶನ ಪಡೆದರು. ನಂತರ ಬಿಜೆಪಿ ಜಿಲ್ಲಾ ಕಚೇರಿಗೆ ಆಗಮಿಸಿ ಯುವ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಂದೆ ಪ್ರತಿನಿಧಿಸುವ ಕ್ಷೇತ್ರದ ತುಂಬೆಲ್ಲಾ ಓಡಾಡುತ್ತಿದ್ದೇನೆ.
ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ತಂದೆಯ ಪರ ಜನರ ಒಲವಿದೆ. ಈ ಬಾರಿ ತಂದೆ ಲೋಕಸಭೆಗೆ ಆಯ್ಕೆಯಾಗುತ್ತಾರೆ. ಇದರ ಜತೆಗೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂಓದಿ:'ಸೊಕ್ಕಿನಿಂದ ಮೆರೆಯುವ ಬಿಎಸ್​ವೈ ಮಕ್ಕಳನ್ನು ಸೋಲಿಸಲು ನನಗೆ ಮತ ನೀಡುತ್ತೇವೆ ಅಂತಿದ್ದಾರೆ ಜನ' - K S Eshwarappa

ABOUT THE AUTHOR

...view details