ಬೆಳಗಾವಿ:ಪಶ್ಚಿಮಘಟ್ಟ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಖಾನಾಪೂರ ತಾಲೂಕಿನ ಹಬ್ಬಾನಹಟ್ಟಿ ಗ್ರಾಮದಲ್ಲಿರುವ ಸ್ವಯಂಭೋ ಮಾರುತಿ ದೇವಸ್ಥಾನ ಮಲಪ್ರಭಾ ನದಿ ನೀರಿನಲ್ಲಿ ಮುಳುಗಡೆಯಾಗಿದೆ.
ಈ ದೇವಸ್ಥಾನಕ್ಕೆ ನಿತ್ಯ ನೂರಾರು ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. ಆದರೆ, ಕಳೆದ ಮೂರು ದಿನಗಳಿಂದ ಘಟ್ಟ ಪ್ರದೇಶದಲ್ಲಿ ಅಬ್ಬರಿಸುತ್ತಿರುವ ಮಳೆಯಿಂದಾಗಿ ಮಲಪ್ರಭಾ ನದಿ ಉಕ್ಕಿ ರಭಸವಾಗಿ ಹರಿಯುತ್ತಿದೆ. ನದಿ ತಟದಲ್ಲೇ ಇರುವ ಹನುಮಾನ್, ಈಶ್ವರ ಮಂದಿರಗಳು ಸಂಪೂರ್ಣವಾಗಿ ಮುಳುಗಿವೆ.
ಈ ಹಿನ್ನೆಲೆಯಲ್ಲಿ ಪೂಜಾ ಕೈಂಕರ್ಯಗಳು ಸ್ಥಗಿತಗೊಂಡಿವೆ. ದೇವರ ದರ್ಶನ ಸಿಗದೆ ಭಕ್ತರಿಗೆ ನಿರಾಸೆಯಾಗಿದೆ. ಭಕ್ತರು ದೂರದಲ್ಲೇ ನಿಂತು ದರ್ಶನ ಪಡೆಯುತ್ತಿದ್ದಾರೆ. ಅರ್ಚಕರು ಮೇಲ್ಭಾಗದಲ್ಲೇ ನಿಂತು ಪೂಜೆ ಸಲ್ಲಿಸುತ್ತಿದ್ದಾರೆ.