ಕರ್ನಾಟಕ

karnataka

ETV Bharat / state

ನಾನು ಸಾಲ ಮಾಡಿದ್ದೇನೆ, ಮಾರಾಟ ಮಾಡಿಲ್ಲ, ಸ್ವಾಮೀಜಿಗಳು ಸಾಲ ಮಾಡಬಾರದಾ? : ಗುರುಸಿದ್ದ ರಾಜಯೋಗಿಂದ್ರ ಸ್ವಾಮೀಜಿ ಪ್ರಶ್ನೆ - Gurusiddharajayogindra Swamiji

ನಾವು ಕೂಡ ಸಾಲ ಮಾಡಿದ್ದೇವೆ ಮತ್ತು ಸಾಲವನ್ನು ಮರುಪಾವತಿ ಮಾಡುತ್ತಿದ್ದೇವೆ ಎಂದು ಮೂರು ಸಾವಿರ ಮಠದ ಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿ ಅವರು ತಿಳಿಸಿದ್ದಾರೆ.

ಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿ
ಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿ

By ETV Bharat Karnataka Team

Published : Mar 20, 2024, 10:42 PM IST

ಮೂರು ಸಾವಿರ ಮಠದ ಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿ

ಹುಬ್ಬಳ್ಳಿ : ಒಬ್ಬ ಮಠಾಧಿಪತಿ ಸಾಲ ತೆಗೆದುಕೊಳ್ಳುವುದು, ಸಾಲವನ್ನು ತುಂಬುವುದು ಸಹಜ. ಅದರಂತೆ ನಾನು ಕೆಲವು ಕಡೆ ಸಾಲ ತೆಗೆದುಕೊಂಡು ತುಂಬಿದ್ದೇನೆ. ಇದೇನು ಬೇಕಾಯ್ದೆಶೀರನಾ ಎಂದು ಮೂರು ಸಾವಿರ ಮಠದ ಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿ ಪ್ರಶ್ನಿಸಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಕೋಟಿ ರೂಪಾಯಿಗೆ ಹಾನಗಲ್ ಮಠದ ಆಸ್ತಿಯನ್ನು ಸ್ವಾಮೀಜಿ ಅಡ ಇಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತಿದೆ. ಇದೇನು ಹೊಸದೇನಲ್ಲ. ಸ್ವಾಮೀಜಿ ಇರಬಹುದು ಹಾಗೂ ಶ್ರೀಮಂತ ಇರಬಹುದು ಸಾಲ‌ ಮಾಡುತ್ತಾರೆ. ಹಾಗೆಯೇ ಸಾಲ ತೀರಿಸುತ್ತಾರೆ. ಅದರಂತೆ ನಾವು ಕೂಡ ಸಾಲ ಮಾಡಿದ್ದೇವೆ ಮತ್ತು ಸಾಲವನ್ನು ಮರುಪಾವತಿ ಮಾಡುತ್ತಿದ್ದೇವೆ ಎಂದರು.

ಮಠಗಳಿಗೆ ಬಡತನ ಬಂದ್ರೆ ಅಷ್ಟೆ ಸಾಲ‌ ಮಾಡುವುದಿಲ್ಲ. ಅಭಿವೃದ್ದಿ ಕಾರ್ಯಗಳಿಗೆ ಸಾಲ ಮಾಡಬಹುದು. ಸಮಾಜದಲ್ಲಿ ಗೌರವ ಕಡಿಮೆ ಮಾಡಲು, ಗೊಂದಲ ಹುಟ್ಟಿಸಲು ಹಾಗೂ ಮಠಕ್ಕೆ ಧಕ್ಕೆ ತರಲು‌‌ ಕೆಲವರು ಮಾಡುತ್ತಿದ್ದಾರೆ. ಮಠಕ್ಕೆ, ಭಕ್ತರಾದವರಿಗೆ ಅನುಮಾನ ಬಂದ್ರೆ ನಮ್ಮ ಕಡೆ ಬಂದು ಇದು ಏನು ಅಂತ ಕೇಳಬಹುದು. ಆದರೆ, ಇದೆಲ್ಲವನ್ನು ಬಿಟ್ಟು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದರಿಂದ ನನ್ನ ಘನತೆ ಗೌರವ ಹೋಗುವುದಿಲ್ಲ. ಮಠದ ಘನತೆ ಹೋಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.

ಸಾಲ ಮಾಡುವುದು ಯಾರು ಮಾಡಲಾರದ ಕೆಲಸವಲ್ಲ. ಆಸ್ತಿ ಮಾರಾಟ ಮಾಡಿದ್ರೆ ಬಂದು ಕೇಳಲಿ. ಆದರೆ ಮಾಡಿದ ಸಾಲ ತೀರಿಸಲು ಮಾಡಿದ್ರೆ ಹೇಗೆ? ಯಾವ ಮಠಗಳು ಸಾಲ ಮಾಡಿಲ್ವಾ? ಮಠದ ಆಸ್ತಿ ಮೇಲೆ ಹಕ್ಕು ಇದೆಯೋ ಇಲ್ಲವೋ ಎಂದು ಪ್ರಶ್ನಿಸಿದರು.

ಹಣವನ್ನು ಶಿಕ್ಷಣಕ್ಕಾಗಿ, ಧಾರ್ಮಿಕ ‌ಕಾರ್ಯಗಳಿಗೆ ಬಳಸಲಾಗಿದೆ. ಆರೋಪ ಮಾಡುವವರಿಗೆ ಕಳೆದ ತಿಂಗಳು ಮಾಡಿದ ಧಾರ್ಮಿಕ ಕಾರ್ಯಗಳು ಗಮನದಲ್ಲಿ‌ ಇಲ್ಲವೇ . ಯಾವ ಉದ್ದೇಶಕ್ಕಾಗಿ ‌ಮಾಡುತ್ತಿದ್ದಾರೋ ಗೊತ್ತಿಲ್ಲ. ವೈಯಕ್ತಿಕ ತೇಜೋವಧೆ ಮಾಡಲು ಮಾಡಲಾಗುತ್ತಿದೆಯೋ ಎಂಬ ಉದ್ದೇಶ ತಿಳಿಯುತ್ತಿಲ್ಲ ಎಂದು ಶ್ರೀಗಳು ಬೇಸರ ಹೊರ ಹಾಕಿದರು.

ಇದನ್ನೂ ಓದಿ :ದಾವಣಗೆರೆ: ಮುಳ್ಳಿನ ಗದ್ದುಗೆಯ ಮೇಲೆ ಸ್ವಾಮೀಜಿ ನರ್ತನ, ಪವಾಡ ಕಣ್ತುಂಬಿಕೊಂಡ ಭಕ್ತರು

ABOUT THE AUTHOR

...view details