ಶಾಸಕ ಎಸ್.ಆರ್.ಶ್ರೀನಿವಾಸ್ (ETV Bharat) ತುಮಕೂರು: "ಡಿಸಿಎಂ ಡಿ.ಕೆ.ಶಿವಕುಮಾರ್ ಮೇಲೆ ಬಂದಿರೋದು ಸುಳ್ಳು ಆಪಾದನೆ. ಜನತಾದಳದ ಮೇಲೆ ಬಂದಿರುವ ಆಪಾದನೆಯಿಂದ ತಪ್ಪಿಸಿಕೊಳ್ಳಲು ಈ ರೀತಿಯ ಡ್ರಾಮಾ ಸೃಷ್ಟಿಸಿದ್ದಾರೆ" ಎಂದು ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಆರೋಪಿಸಿದರು.
ತುಮಕೂರಿನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಡಿ.ಕೆ.ಶಿವಕುಮಾರ್ ಯಾವ ಆ್ಯಂಗಲ್ನಲ್ಲಿ ಹಂಚಿಕೆ ಮಾಡಿದ್ದಾರೆಂದು ಹೇಳ್ತಾರೆ?. ದೇವರಾಜೇಗೌಡರು ಆರು ತಿಂಗಳ ಹಿಂದೆಯೇ ಕುಮಾರಸ್ವಾಮಿ, ದೇವೇಗೌಡರನ್ನು ಭೇಟಿ ಮಾಡಿದ್ದಾಗಿ ಹಾಗೂ ಅಮಿತ್ ಶಾ ಸೇರಿ ಎಲ್ಲರಿಗೂ ಕಳಿಸಿರುವುದಾಗಿ ಹೇಳಿದ್ದಾರೆ. ಅದೇ ಮನುಷ್ಯ ಈಗ ಡಿ.ಕೆ.ಶಿವಕುಮಾರ್ ಹೆಸರು ಹೇಳುತ್ತಿದ್ದಾರೆ" ಎಂದರು.
"ಇವೆಲ್ಲವೂ ಪ್ರಕರಣವನ್ನು ಡೈವರ್ಟ್ ಮಾಡುವ ನಾಟಕ. ಕುಮಾರಸ್ವಾಮಿ ಸೃಷ್ಟಿಸಿರುವ ಬಯಲು ನಾಟಕ. ಕುಮಾರಸ್ವಾಮಿ ಅವರು ಮಗ ಮಾಡಿರುವ ಕೃತ್ಯ ಖಂಡಿಸಿ ಪಕ್ಷದಿಂದ ಅಮಾನತು ಮಾಡಬೇಕಿತ್ತು. ಒಂದು ಬಾರಿ ಹೇಳ್ತಾರೆ ಅವರು ಕುಟುಂಬಕ್ಕೂ, ನಮಗೂ ಸಂಬಂಧ ಇಲ್ಲ ಅಂತಾ, ರೇವಣ್ಣ ಅವರಪ್ಪನ ಮಗ ಅಲ್ವೇ" ಎಂದು ಪ್ರಶ್ನಿಸಿದರು.
"ರೇವಣ್ಣ ಅವರಣ್ಣ ಅಲ್ವಾ?. ರೇವಣ್ಣನಿಗೂ ನಮಗೂ ಸಂಬಂಧ ಇಲ್ಲ. ನಾನು, ನಮ್ಮ ಅಪ್ಪ ಅಷ್ಟೇ ಅಂತಿದ್ದಾರೆ. ಅದೇ, ಒಳ್ಳೆಯದಾದ್ರೆ ರೇವಣ್ಣ ಇರಲಿ. ಹಾಸನ ಅಂದ್ರೆ ರೇವಣ್ಣ. ರೇವಣ್ಣ ಅಂದ್ರೆ ಹಾಸನ ಅಂತಾ ಹೇಳಿಕೊಂಡು ತಿರುಗಾಡುತ್ತಿದ್ದರು. ಅಪಾದನೆ ಬಂದ ತಕ್ಷಣಕ್ಕೆ ರೇವಣ್ಣ ಈ ಕುಟುಂಬದಿಂದ ಆಚೆ ಹೋಗಿಬಿಟ್ಟರಾ" ಎಂದು ಟೀಕಿಸಿದರು.
"ಎಂತೆಂಥಾ ಡ್ರಾಮಾ ಸೃಷ್ಟಿ ಮಾಡ್ತಾರೆ. ರಾಜ್ಯದ ಜನರು ಅಷ್ಟೊಂದು ಮೂರ್ಖರಾ? ತಿಳುವಳಿಕೆ ಇಲ್ಲವೇ?. ಯಾರು ವಿಡಿಯೋ ರಿಲೀಸ್ ಮಾಡಿದ್ದಾರೋ ಅವರನ್ನು ಬಂಧಿಸಲು ನಿನ್ನೆ ಪ್ರತಿಭಟನೆ ಮಾಡಿದ್ದಾರೆ. ಡಿಕೆಶಿ ವಿರುದ್ಧ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ. ಇವರ ಮೇಲೆ ಬಂದ ಅಪಾದನೆ ತಪ್ಪಿಸಿಕೊಳ್ಳಲು, ಪಕ್ಷಕ್ಕೆ ಆಗುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಡಿಕೆಶಿ ಅವರನ್ನು ಎಳೆದು ತಂದಿದ್ದಾರೆ" ಎಂದರು.
ಇದನ್ನೂ ಓದಿ:ಮೈಸೂರು ಅರಮನೆ ಮುಂಭಾಗ ಪಾರಿವಾಳಗಳಿಗೆ ಧಾನ್ಯ ಚೆಲ್ಲುವುದನ್ನು ನಿಷೇಧಿಸಲು ಡಿಸಿಗೆ ಪತ್ರ - Grain To Pigeons
"ನಮ್ಮ ಅಸ್ತಿತ್ವ ಎಲ್ಲಿ ಹೋಗಿಬಿಡುತ್ತೋ. ನಮ್ಮ ಜನಾಂಗ ಎಲ್ಲಿ ಕೈ ಬಿಟ್ಟುಬಿಡುತ್ತೋ ಎಂದು ಅದೇ ಜನಾಂಗದ ಇನ್ನೊಬ್ಬ ಮುಖಂಡರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಜನಾಂಗದಲ್ಲಿ ಯಾರು ಪ್ರಬಲರಾಗಿ ಬೆಳೆಯುತ್ತಾರೋ ಅವರ ಮೇಲೆ ಅಪಾದನೆ ಮಾಡೋದು, ಮುಗಿಸುವ ಕೆಲಸ, ತುಳಿಯುವ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಇದು ದೇವರು ಕೊಟ್ಟ ಶಿಕ್ಷೆ" ಎಂದು ಹೇಳಿದರು.
ಇದನ್ನೂ ಓದಿ:ಹಾಸನ ವಿಡಿಯೋ ಹಗರಣದಲ್ಲಿ ಡಿ.ಕೆ.ಶಿವಕುಮಾರ್ ಪಾತ್ರವಿಲ್ಲ: ಸಚಿವ ಚೆಲುವರಾಯಸ್ವಾಮಿ - Chaluvarayaswamy
"ನಮ್ಮ ಸಮಾಜದಲ್ಲಿ ಯಾರೂ ತಲೆ ಎತ್ತಬಾರದೆಂದು ಎಲ್ಲಾ ಮುಖಂಡರನ್ನು ತುಳಿಯುತ್ತಾ ಬಂದಿದ್ದಾರೆ. ಇವರ ಪಾಪದ ಕೊಡ ತುಂಬಿದೆ. ಪ್ರಜ್ವಲ್ ಪ್ರಕರಣ ಇವರ ಅಂತ್ಯಕ್ಕೆ ನಾಂದಿ ಹಾಡಿದೆ. ಕುಮಾರಸ್ವಾಮಿ ಇನ್ನಾದರೂ ಈ ಆಟ, ನಾಟಕಗಳನ್ನು ಬಿಟ್ಟು ಸರಿಯಾಗಿ ನಡೆದುಕೊಳ್ಳಲಿ" ಎಂದು ಕಿವಿಮಾತು ಹೇಳಿದರು.