ಕರ್ನಾಟಕ

karnataka

ETV Bharat / state

ಸಾಂಸ್ಕೃತಿಕ ನಗರಿಯಲ್ಲಿ ಗೌರಿ – ಗಣೇಶ ಹಬ್ಬಕ್ಕೆ ಸಿದ್ಧತೆ ಜೋರು: ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಭರಾಟೆ - Gowri Ganesha festival - GOWRI GANESHA FESTIVAL

ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಹಣ್ಣು-ತರಕಾರಿ‌, ಹೂ ,ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದರೂ ಖರೀದಿ ಮಾತ್ರ ಜೋರಾಗಿಯೇ ಇದೆ. ಮೈಸೂರು ನಗರದ ವಿವಿಧ ಮಾರುಕಟ್ಟೆಗಳಲ್ಲಿ ಜನ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದಾರೆ.

ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಭರಾಟೆ
ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಭರಾಟೆ (ETV Bharat)

By ETV Bharat Karnataka Team

Published : Sep 6, 2024, 7:33 PM IST

Updated : Sep 6, 2024, 8:12 PM IST

ಮೈಸೂರು ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಭರಾಟೆ (ETV Bharat)

ಮೈಸೂರು:ಗೌರಿ ಗಣೇಶ ಹಬ್ಬವನ್ನು ಸಂಭ್ರಮ – ಸಡಗರದಿಂದ ಆಚರಿಸಲು ನಗರದ ಜನತೆ ಸಜ್ಜಾಗುತ್ತಿದ್ದು, ಹಬ್ಬಕ್ಕೆ ಬೇಕಾಗಿರುವ ವಿಗ್ರಹ, ಹೂವು, ಹಣ್ಣು, ಪೂಜಾ ಸಾಮಗ್ರಿಗಳು, ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ.

ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ದೇವರಾಜ ಮಾರುಕಟ್ಟೆ, ಚಿಕ್ಕಗಡಿಯಾರ, ಅಗ್ರಹಾರ ಮಾರುಕಟ್ಟೆ, ಎಂಜಿ ರಸ್ತೆ, ಶಿವರಾಂಪೇಟೆ ಸೇರಿದಂತೆ ಸಗಟು ಮಾರುಕಟ್ಟೆಯಾದ ಆರ್​ಎಂಸಿ ಮಾರುಕಟ್ಟೆಗಳಲ್ಲಿಂದು ಜನ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ಮಗ್ನರಾಗಿರುವುದು ಕಂಡು ಬಂತು.

ಹಣ್ಣು- ತರಕಾರಿ‌, ಹೂ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದರೂ ಗ್ರಾಹಕರು ಖರೀದಿಗೆ ಮುಗಿ ಬಿದ್ದಿದ್ದಾರೆ. ಕನಕಾಂಬರ, ಮಲ್ಲಿಗೆ, ಕಾಕಡ, ಸೇವಂತಿಗೆ ಮತ್ತು ಚೆಂಡು ಹೂ ದರ ತುಸು ಹೆಚ್ಚಾಗಿದೆ. ಮತ್ತೊಂದೆಡೆ, ಜನರು ಪರಿಸರ ಸ್ನೇಹಿ ಗಣಪತಿ ಖರೀದಿಗೆ ಒಲವು ತೋರಿಸುತ್ತಿದ್ದಾರೆ.

ಗ್ರಾಹಕರಾದ ಕುಸುಮಾ ಮಾತನಾಡಿ, ಹೂ -ಹಣ್ಣು, ತರಕಾರಿ ಬೆಲೆ ಹೆಚ್ಚಾಗಿದೆ. ಹಬ್ಬ ಮಾಡಬೇಕು ಎಂದು ಬೆಲೆ ಹೆಚ್ಚಿದ್ದರೂ ಅಗತ್ಯ ವಸ್ತುಗಳನ್ನು ಕಡಿಮೆ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಗಣೇಶಮೂರ್ತಿ ವ್ಯಾಪಾರಿ ಪವನ್‌ ಮಾತನಾಡಿ, ಈ ಬಾರಿ ಮಣ್ಣಿನಿಂದ ಮಾಡಿರುವ ಗಣಪತಿಮೂರ್ತಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದೇವೆ. ಪಿಒಪಿ ಗಣೇಶಮೂರ್ತಿಗಳನ್ನು ನಾವು ಮಾರಾಟ ಮಾಡುವುದಿಲ್ಲ. 50 ರೂ. ನಿಂದ ಒಂದು ಸಾವಿರ ರೂ ವರೆಗೆ ಗಣೇಶಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ದಾವಣಗೆರೆಯಲ್ಲೂ ಖರೀದಿ ಭರಾಟೆ ಜೋರು: ಮತ್ತೊಂದೆಡೆ, ದಾವಣಗೆರೆ ನಗರದ ಕೆಆರ್ ಮಾರುಕಟ್ಟೆ ಹಾಗೂ ಇತರ ಮಾರುಕಟ್ಟೆಗಳಲ್ಲಿ ಗೌರಿ ಗಣೇಶ ಹಬ್ಬಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳ ಖರೀದಿಯಲ್ಲಿ ಜನರು ತೊಡಗಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಎಲ್ಲ ಹಣ್ಣುಗಳ ಮಿಕ್ಸ್ ಒಂದು ಕೆ.ಜಿ.ಗೆ 150 ರೂ ಇದೆ. ಸೇಬು ಒಂದು ಕೆ.ಜಿ.ಗೆ 150 ರೂ, ದಾಳಿಂಬೆ 70 ರೂ, ದ್ರಾಕ್ಷಿ 80 ರೂ, ಬಾಳೆ ಹಣ್ಣು ಒಂದು ಡಜನ್​ಗೆ 130 ರೂ, ಬಾಳೆ ಕಂದು ಜೋಡಿಗೆ 50 ರಿಂದ 60 ರೂ, ಚೆಂಡು ಹೂ ಒಂದು ಮೊಳಕ್ಕೆ 60 ರಿಂದ 70 ರೂ, ಸೇವಂತಿಗೆ ಹೂವು 60 ರೂ ಗೆ ಮಾರಾಟವಾಗುತ್ತಿದೆ. ಇನ್ನೂ ಇದೇ ವೇಳೆ ಜನ ಗಣೇಶಮೂರ್ತಿ ಖರೀದಿಗೆ ಮುಗಿ ಬಿದ್ದಿರುವುದು ಕಂಡಬಂತು.

ಇದನ್ನೂ ಓದಿ:ಶಿವಮೊಗ್ಗ: ಬಾಗಿನ ನೀಡಿ ಸಂಭ್ರಮದಿಂದ ಗೌರಿ ಗಣೇಶ ಹಬ್ಬ ಆಚರಿಸಿದ ಮುತ್ತೈದೆಯರು - Gowri Ganesha festival

Last Updated : Sep 6, 2024, 8:12 PM IST

ABOUT THE AUTHOR

...view details