ಕರ್ನಾಟಕ

karnataka

ETV Bharat / state

ಕೆಫೆ ಸ್ಫೋಟ; ಸರ್ಕಾರವೇ ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸಲಿದೆ: ಸಿಎಂ ಸಿದ್ದರಾಮಯ್ಯ - CM Siddaramaiah

ಕೆಫೆಯಲ್ಲಿ‌ನ ಸ್ಫೋಟದಿಂದ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

siddaramaiah
ಗಾಯಾಳುಗಳ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿದೆ: ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Mar 2, 2024, 2:36 PM IST

Updated : Mar 2, 2024, 2:45 PM IST

ಸಿಎಂ ಸಿದ್ದರಾಮಯ್ಯ

ಬೆಂಗಳೂರು:ರಾಮೇಶ್ವರಂ ಕೆಫೆಯಲ್ಲಿ‌ ನಡೆದ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡುವುದಕ್ಕೆ ಸೂಚಿಸಿದ್ದೇನೆ. ಸ್ಫೋಟ ಆದಾಗ ಮಹಿಳೆ ಸ್ವರ್ಣಾಂಭ ಎಂಬುವರು ಸ್ಥಳದಲ್ಲೇ ಇದ್ದಿದ್ದರಿಂದ ಹೆಚ್ಚು ಗಾಯವಾಗಿದೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ. ಮೂವರಲ್ಲಿ ಒಬ್ಬರು ಇಂದು ಡಿಚ್ಚಾರ್ಜ್ ಆಗಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣಕ್ಕೂ ಬೆಂಗಳೂರಿನ ಸ್ಫೋಟಕ್ಕೂ ಇರುವ ಸಾಮ್ಯತೆ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಪ್ರಕರಣ ಕುರಿತಂತೆ ತನಿಖೆ ನಡೆಯುತ್ತಿದೆ. ಇಂದು ಮಧ್ಯಾಹ್ನ ಸಭೆ ಕರೆದಿದ್ದೇನೆ ಎಂದರು.

ಇದನ್ನೂ ಓದಿ:ಮಂಗಳೂರು ಕುಕ್ಕರ್ ಬ್ಲಾಸ್ಟ್​ಗೂ ಬೆಂಗಳೂರು ಸ್ಫೋಟಕ್ಕೂ ಸಾಮ್ಯತೆ ಕಾಣುತ್ತಿದೆ: ಡಿ ಕೆ ಶಿವಕುಮಾರ್​

ರಾಜ್ಯದಲ್ಲಿ ಭದ್ರತಾಲೋಪ ಆಗಿದೆ ಎಂಬ ಬಿಜೆಪಿ ಆರೋಪಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಅವರ ಕಾಲದಲ್ಲಿ ಆಗಿರಲಿಲ್ವಾ, ಅವರು ಫೆಲ್ಯೂರ್ ಆಗಿಲ್ವಾ? ಚಿಕಿತ್ಸಾ ಖರ್ಚು ವೆಚ್ಚವನ್ನು ಸರ್ಕಾರ ನೋಡಿ‌ಕೊಳ್ಳಲಿದೆ. ಕುಕ್ಕರ್ ಬ್ಲಾಸ್ಟ್​​ಗೂ ಇದಕ್ಕೂ ಸಂಬಂಧ ಇದೆಯಾ ಎಂಬುದನ್ನು ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ:ರಾಮೇಶ್ವರಂ ಕೆಫೆ ಸ್ಫೋಟ : ಶಂಕಿತನ ಚಹರೆ ಪತ್ತೆ, ಪೊಲೀಸ್​ ತನಿಖೆ ಚುರುಕು

Last Updated : Mar 2, 2024, 2:45 PM IST

ABOUT THE AUTHOR

...view details