ಮೈಸೂರು:ರೋಹಿಣಿ ಸಿಂಧೂರಿ ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ, ಸರ್ಕಾರಿ ಅತಿಥಿ ಗೃಹದಲ್ಲಿ ನಾಪತ್ತೆಯಾಗಿದ್ದ ಸಾಮಗ್ರಿಗೆ ತಗಲುವ ಮೊತ್ತವನ್ನು ಅಂದಿನ ಅತಿಥಿ ಗೃಹದ ವ್ಯವಸ್ಥಾಪಕರಾಗಿದ್ದ ವಿಶ್ವಾಸ್ ಪಾವತಿಸಿದ್ದಾರೆ. ಈ ಮೂಲಕ ರೋಹಿಣಿ ಸಿಂಧೂರಿ ಅವರ ಮೇಲಿದ್ದ ಸಾಮಗ್ರಿ ನಾಪತ್ತೆ ಪ್ರಕರಣ ಇತ್ಯರ್ಥವಾಗಿದೆ.
ರೋಹಿಣಿ ಸಿಂಧೂರಿ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ ಆಡಳಿತ ತರಬೇತಿ ಸಂಸ್ಥೆಯ ಅತಿಥಿ ಗೃಹದಲ್ಲಿ ನಾಪತ್ತೆಯಾಗಿದ್ದ ಸಾಮಗ್ರಿಗಳ ಪ್ರಕರಣ ಸಂಬಂಧ ಅವರ ವೇತನದಲ್ಲಿ ಕಡಿತಗೊಳಿಸಿ ಆ ಹಣವನ್ನು ನಮಗೆ ನೀಡುವಂತೆ ಮೈಸೂರು ನಗರದ ಆಡಳಿತ ತರಬೇತಿ ಸಂಸ್ಥೆಯು ಎಟಿಐ ಕಾರ್ಯದರ್ಶಿಗೆ ಪತ್ರ ಬರೆದಿತ್ತು.