ದೇವನಹಳ್ಳಿ: ಒಳ ಉಡುಪಿನಲ್ಲಿ ಮರೆಮಾಚಿ ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನಿಸಿದ ಪ್ರಯಾಣಿಕ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯಿಂದ 1.06 ಕೋಟಿ ಮೌಲ್ಯದ 1.49 ಕೆ.ಜಿ ತೂಕದ ಗೋಲ್ಡ್ ಬಾರ್ ಅನ್ನು ವಶಕ್ಕೆ ಪಡೆಯಲಾಗಿದೆ.
ಆಗಸ್ಟ್ 17 ರಂದು ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರೊಫೈಲಿಂಗ್ ಆಧಾರದ ಮೇಲೆ ಸಂಶಯಾಸ್ಪದ ವ್ಯಕ್ತಿಗಳನ್ನು ತಪಾಸಣೆ ನಡೆಸುವ ವೇಳೆ ಪ್ರಯಾಣಿಕನೊಬ್ಬ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ.
ಕೌಲಾಲಂಪುರದಿಂದ ಬಂದಿದ್ದ ಪ್ರಯಾಣಿಕ ತನ್ನ ಒಳ ಉಡುಪಿನಲ್ಲಿ ಮರೆಮಾಚಿ ಗೋಲ್ಡ್ ಬಾರ್ ಅನ್ನು ಇಟ್ಟಿರುವುದು ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಆರೋಪಿಯಿಂದ 1.06 ಕೋಟಿ ಮೌಲ್ಯದ 1499.64 ಗ್ರಾಂ ತೂಕದ ಗೋಲ್ಡ್ ಬಾರ್ ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ.
ಇದನ್ನೂ ಓದಿ:ದುಬೈನಿಂದ ಬೆಂಗಳೂರಿಗೆ 25 ಐ-ಫೋನ್ಗಳ ಕಳ್ಳಸಾಗಣೆ: ಉಡುಪಿ ಮೂಲದ ವ್ಯಕ್ತಿಯಿಂದ 30 ಲಕ್ಷ ಮೌಲ್ಯದ ವಸ್ತುಗಳು ವಶ - Smuggling of 25 iPhones