ಕರ್ನಾಟಕ

karnataka

ETV Bharat / state

ದಾವಣಗೆರೆ: ದೇವರ ಗೂಳಿಯನ್ನೂ ಬಿಡದ ಕಳ್ಳರು; ರಾತ್ರಿ ವೇಳೆ ದುಷ್ಕೃತ್ಯ - Bull Theft - BULL THEFT

ದೇವರ ಗೂಳಿಯನ್ನೇ ಕಳ್ಳರು ಕದ್ದೊಯ್ದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

bull
ದೇವರ ಗೂಳಿ (ETV Bharat)

By ETV Bharat Karnataka Team

Published : Oct 4, 2024, 1:30 PM IST

ದಾವಣಗೆರೆ: ಕಳ್ಳರು ಚಿನ್ನಾಭರಣ, ಬೆಳ್ಳಿ,‌ ಅಮೂಲ್ಯವಾದ ವಸ್ತುಗಳ ಕಳ್ಳತನ ಮಾಡುವ ಪ್ರಕರಣಗಳನ್ನು ನೋಡಿದ್ದೇವೆ.‌ ಅದರೆ, ಖದೀಮರು ಒಂದು ಹೆಜ್ಜೆ ಮುಂದೆ ಹೋಗಿ, ದೇವರ ಗೂಳಿಯನ್ನೇ ಕದ್ದೊಯ್ದಿದ್ದಾರೆ. ಜಿಲ್ಲೆಯ ಹರಿಹರ ತಾಲೂಕಿನ ಸಂಕ್ಲಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ತಡರಾತ್ರಿ ಗ್ರಾಮಕ್ಕೆ ನುಗ್ಗಿದ ಕಳ್ಳರು, ದೇವರ ಗೂಳಿಯನ್ನು ಕದ್ದುಕೊಂಡು ಹೋಗಿದ್ದಾರೆ.‌ ಗ್ರಾಮದ ಜನರೇ ದೇವರ ಗೂಳಿಯನ್ನು ಭಕ್ತಿಯಿಂದ ಸಾಕಿದ್ದರು.‌ ಕಳ್ಳರು ಬೆಳಗ್ಗಿನ ಜಾವದಲ್ಲಿ ಬೊಲೆರೋ ಗೂಡ್ಸ್ ವಾಹನ ತಂದು, ಗೂಳಿಯನ್ನು ಕದ್ದುಕೊಂಡು ಹೋಗಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಸಂಕ್ಲಿಪುರ ಗ್ರಾಮಸ್ಥರು ದೇವರ ಗೂಳಿಯನ್ನು ಬಹಳ ಪ್ರೀತಿಯಿಂದ ಸಾಕಿದ್ದರು. ಗೂಳಿ ಕದ್ದಿರುವುದರಲ್ಲಿ ನಾಲ್ಕು ಜನ ಯುವಕರ ಕೈವಾಡ ಶಂಕೆ ಇದೆ ಎಂದು ಆರೋಪಿಸಿ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಗೂಳಿ ಕಳ್ಳರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಮೆಡಿಕಲ್ ಸೀಟು ಕೊಡಿಸುವುದಾಗಿ ಉದ್ಯಮಿಗೆ ₹1.5 ಕೋಟಿ ವಂಚನೆ ಆರೋಪ: ಇಬ್ಬರ ಬಂಧನ - Fraud Case

ABOUT THE AUTHOR

...view details