ಕರ್ನಾಟಕ

karnataka

ETV Bharat / state

ಅಮೆರಿಕದಿಂದ ಆಗಮಿಸಿ ಇದೇ ಮೊದಲ ಬಾರಿಗೆ ವೋಟ್‌ ಹಾಕಿದ ಸಂಸದ ಜಿ.ಎಂ.ಸಿದ್ದೇಶ್ವರ್​ ಮೊಮ್ಮಕ್ಕಳು - GM Siddeshwars Grandchildren

ಲೋಕಸಭೆ ಚುನಾವಣೆಗೆ ಜಿ.ಎಂ.ಸಿದ್ದೇಶ್ವರ್​ ಅವರ ಮೊಮ್ಮಕ್ಕಳು ಅಮೆರಿಕದಿಂದ ದಾವಣಗೆರೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಸಂಸದ ಜಿ.ಎಂ.ಸಿದ್ದೇಶ್ವರ್​ ಮೊಮ್ಮಕ್ಕಳಿಂದ ಮತದಾನ
ಸಂಸದ ಜಿ.ಎಂ.ಸಿದ್ದೇಶ್ವರ್​ ಮೊಮ್ಮಕ್ಕಳಿಂದ ಮತದಾನ (ETV Bharat)

By ETV Bharat Karnataka Team

Published : May 7, 2024, 10:14 AM IST

Updated : May 7, 2024, 12:35 PM IST

ಸಂಸದ ಜಿ.ಎಂ.ಸಿದ್ದೇಶ್ವರ್​ ಮೊಮ್ಮಕ್ಕಳಿಂದ ಮತದಾನ (ETV Bharat)

ದಾವಣಗೆರೆ: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಇಂದು ಮತದಾನ ನಡೆಯುತ್ತಿದೆ‌. ಯುವ ಹಾಗು ವೃದ್ಧ ಮತದಾರರು ಮತಗಟ್ಟೆಗೆ ಆಗಮಿಸಿ ಉತ್ಸಾಹದಿಂದ ವೋಟ್ ಹಾಕುತ್ತಿದ್ದಾರೆ. ಏತನ್ಮಧ್ಯೆ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಮೊಮ್ಮಕ್ಕಳು ಅಮೆರಿಕದಿಂದ ತವರಿಗೆ ಆಗಮಿಸಿ ಮತ ಚಲಾಯಿಸಿದ್ದಾರೆ.

ಸಿದ್ದೇಶ್ವರ್ ಮೊಮ್ಮಗ ಅತ್ರವ್​ ಅಮೆರಿಕದಲ್ಲಿ ಏರೋಸ್ಪೆಸ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಮತದಾನಕ್ಕಾಗಿ ದಾವಣಗೆರೆಗೆ ಬಂದಿದ್ದು, ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಮತ ಚಲಾಯಿಸಿದರು. ಮೊಮ್ಮಗಳು ತ್ರಿಶಾ ಕೂಡ ಮೊದಲ ಬಾರಿ ಮತದಾನ ಮಾಡಿ ಹರ್ಷ ವ್ಯಕ್ತಪಡಿಸಿದರು.

'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿದ ಅತ್ರವ್, "ಅಮೆರಿಕದಿಂದ ಬಂದು ಇದೇ ಮೊದಲ ಬಾರಿಗೆ ಮತದಾನ ಮಾಡಿದ್ದೇನೆ. ಎಲ್ಲರೂ ತಪ್ಪದೇ ಮತದಾನ ಮಾಡಿ. ಈ ಮೂಲಕ ಸಮರ್ಥ ನಾಯಕನನ್ನು ಆಯ್ಕೆ ಮಾಡಿ" ಎಂದರು. ‌

ಬಳಿಕ ಮಾತನಾಡಿದ ತ್ರಿಶಾ, "ಮೊದಲ ಬಾರಿ ಮತದಾನ ಮಾಡಿರುವುದಕ್ಕೆ ಹೆಮ್ಮೆ ಇದೆ. ಭಾರತೀಯ ನಾಗರಿಕರು ಎಲ್ಲರೂ ಮತ ಹಾಕಬೇಕು. ದೇಶದಲ್ಲಿ ಒಳ್ಳೆಯ ನಾಯಕನನ್ನು ಆಯ್ಕೆ ಮಾಡಲು ನಮಗೂ ಹಕ್ಕಿದೆ. ನನ್ನ ಮೊದಲ ಮತದಾನ ಖುಷಿ ತಂದಿತು" ಎಂದು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಶಿವಮೊಗ್ಗ: ಕುಟುಂಬಸಮೇತರಾಗಿ ಆಗಮಿಸಿ ಮತ ಚಲಾಯಿಸಿದ ಬಿ.ಎಸ್‌.ಯಡಿಯೂರಪ್ಪ - Yediyurappa Casts Vote

Last Updated : May 7, 2024, 12:35 PM IST

ABOUT THE AUTHOR

...view details