ಬೆಂಗಳೂರು: ಪ್ರತಿ ವರ್ಷದಂತೆ ಈ ಬಾರಿಯೂ ಜೆ.ಪಿ ನಗರದ ಪುಟ್ಟೇನಹಳ್ಳಿ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯನ್ನು ವಿನೂತನ ಮತ್ತು ವೈಭವದಿಂದ ಆಚರಿಸಲಾಯಿತು. ಈ ಬಾರಿ ನಾಡಿನೆಲ್ಲೆಡೆ ಸಮೃದ್ಧವಾಗಿ ಮಳೆಯಾಗಿರುವ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳ ಮೂಲಕ ದೇವಸ್ಥಾನ ಅಲಂಕರಿಸಲಾಗಿದ್ದು, ವಿಶೇಷವಾಗಿ ರೈತ ಗಣೇಶೋತ್ಸವ ನಡೆಯಿತು.
ಕೃಷಿ ಉತ್ಪನ್ನಗಳಲ್ಲಿ ಕಂಗೊಳಿಸುತ್ತಿರುವ ಗಣಪ (ETV Bharat) ದೇವಸ್ಥಾನದ ಟ್ರಸ್ಟಿ ರಾಮ್ ಮೋಹನ ರಾಜ್ ಈ ಕುರಿತು ಮಾಹಿತಿ ನೀಡಿ, ಜೋಳ, ತೆಂಗಿಕಾಯಿ, ಬೆಲ್ಲದ ಕಾಯಿ ಮೂಲಕ ಗಣೇಶಮೂರ್ತಿಯನ್ನು ಸಿಂಗರಿಸಲಾಗಿದೆ. ಗಣಪತಿಗೆ ಪ್ರಿಯವಾದ ವಸ್ತುಗಳನ್ನು ಬಳಸಲಾಗಿದೆ. ಬಳಸಿದ ಪ್ರತಿಯೊಂದು ಹಣ್ಣು, ತರಕಾರಿ, ವಸ್ತುಗಳನ್ನು ನಂತರ ಪ್ರಸಾದದ ಸ್ವರೂಪದಲ್ಲಿ ಭಕ್ತಾದಿಗಳಿಗೆ ವಿತರಿಸಲಾಗುವುದು ಎಂದು ತಿಳಿಸಿದರು.
ಸತ್ಯಗಣಪತಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ (ETV Bharat) ಪ್ರತಿವರ್ಷ ಹೊಸದೊಂದು ಥೀಮ್ನಲ್ಲಿ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸುವ ಹಾಗೂ ವಿಶೇಷ ಆಲಂಕಾರವನ್ನು ಮಾಡುವ ಮೂಲಕ ದೇಶದ ಗಮನ ಸೆಳೆಯುತ್ತಿದ್ದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲಿ ಈ ಬಾರಿ 36ಕ್ಕೂ ಹೆಚ್ಚು ವಿಧದ ಹಣ್ಣು ಹಾಗೂ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ. ಬೆಳಗ್ಗೆಯಿಂದ ವಿಶೇಷ ಪೂಜಾಕಾರ್ಯಕ್ರಮ ಆರಂಭವಾಗಿದೆ. ಹೂವು ಹಣ್ಣುಗಳಿಂದ ಸಿಂಗರಿಸಲಾಗಿರುವ ದೇವಸ್ಥಾನ ಕಣ್ಣಿಗೆ ಹಬ್ಬವಾಗಿದೆ. ವಿಶೇಷ ಪೂಜೆಯ ಜೊತೆಗೆ ಪ್ರಸಾದ ವಿತರಣೆಯು ನಡೆಯುತ್ತಿದೆ ಎಂದು ಹೇಳಿದರು.
ಸತ್ಯಗಣಪತಿ ದೇವಸ್ಥಾನ (ETV Bharat) ಇದನ್ನೂ ಓದಿ:ಹುಬ್ಬಳ್ಳಿ: ಅದ್ಧೂರಿ ಮೆರವಣಿಗೆಯೊಂದಿಗೆ ಈದ್ಗಾ ಮೈದಾನಕ್ಕೆ ಬಂದ ಶ್ರೀರಾಮನ ಅವತಾರದ ಗಣಪತಿ - idgah maidan ganesha