ಕರ್ನಾಟಕ

karnataka

ETV Bharat / state

ಖರ್ಚು ಕಡಿಮೆ, ಸ್ವಂತ ಉದ್ಯಮಕ್ಕೆ 'ಬೇಕಿಂಗ್​​'​ ಬೆಸ್ಟ್​: ಜಿಕೆವಿಕೆ ಕೃಷಿ ಮೇಳದಲ್ಲಿ ಗಮನ ಸೆಳೆದ ಬೇಕಿಂಗ್ ಪ್ರಪಂಚ​ - KRISHI MELA BENGALURU

ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿಮೇಳದಲ್ಲಿ ಕೇಕ್, ಪಿಜ್ಜಾ, ಬರ್ಗರ್, ಬಿಸ್ಕತ್ ಹಾಗೂ ಬೇಕಿಂಗ್ ಉತ್ಪನ್ನಗಳನ್ನು ತಯಾರಿಸಿ ಗ್ರಾಹಕರಿಗೆ ನೀಡಲಾಯಿತು. ಈ ಕುರಿತು 'ಈಟಿವಿ ಭಾರತ' ಪ್ರತಿನಿಧಿ ಭರತ್​ ರಾವ್​ ನೀಡಿರುವ ವಿಶೇಷ ವರದಿ ಇಲ್ಲಿದೆ.

ಕೃಷಿಮೇಳ 2024
ಬೆಂಗಳೂರಿನ ಜಿಕೆವಿಕೆಯಲ್ಲಿ ಕೃಷಿಮೇಳ (ETV Bharat)

By ETV Bharat Karnataka Team

Published : Nov 17, 2024, 7:17 AM IST

ಬೆಂಗಳೂರು:ನಗರದಹೆಬ್ಬಾಳದಲ್ಲಿರುವ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಲ್ಲಿ ನಡೆಯುತ್ತಿರುವ 'ಕೃಷಿಮೇಳ'ದಲ್ಲಿ ಬೇಕಿಂಗ್ ತಂತ್ರಜ್ಞಾನ ಹಾಗೂ ಮೌಲ್ಯವರ್ಧನಾ ಸಂಸ್ಥೆಯಿಂದ ತಯಾರಿಸಲಾದ ಕೇಕ್, ಪಿಜ್ಜಾ, ಬರ್ಗರ್, ಬಿಸ್ಕತ್ ಸೇರಿದಂತೆ ಇನ್ನಿತರ ಬೇಕಿಂಗ್ ಉತ್ಪನ್ನಗಳನ್ನು ಖರೀದಿಸಿದ ಜನರು ಸವಿದು ಸಂಭ್ರಮಿಸಿದರು.

ಗುಣಮಟ್ಟದ ಹಾಗೂ ಉತ್ಕೃಷ್ಟ ಬೇಕಿಂಗ್​​ ತಿನಿಸುಗಳನ್ನು ಸಂಸ್ಥೆಯಿಂದ ತರಬೇತಿ ಪಡೆದ ಸಿಬ್ಬಂದಿ ಮೇಳದಲ್ಲಿಯೇ ತಯಾರಿಸಿ ಜನರ ಗಮನ ಸೆಳೆದರು. ಕೇಕ್ ತಯಾರಿಕೆಯ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ಜನರು ಖುದ್ದು ತಾವೇ ಕೇಕ್ ತಯಾರಿಸಿ ಸಂತಸಪಟ್ಟರು.

ಬೇಕಿಂಗ್​ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆಯ ಸಂಯೋಜಕಿ ಹಾಗೂ ಮುಖ್ಯಸ್ಥೆ ಡಾ.ಸವಿತಾ ಎಸ್​.ಮಂಗಮ್ಮನವರ್​ ಮಾಹಿತಿ. (ETV Bharat)

ಬೇಕಿಂಗ್ ತಿನಿಸು ಹಾಗೂ ಅದರ ತಂತ್ರಜ್ಞಾನ ಬಳಕೆ ಸಾರ್ವಜನಿಕರಿಗೆ ಮಾಹಿತಿ ಮೇಳದಲ್ಲಿ ಮಾಹಿತಿ ನೀಡಲಾಯಿತು. 4 ಹಾಗೂ 14 ವಾರಗಳ ಪ್ರತ್ಯೇಕ ತರಬೇತಿ ನೀಡುವುದರ ಬಗ್ಗೆ ತಿಳುವಳಿಕೆ ಮೂಡಿಸಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ನೋಂದಣಿ ಮಾಡಿಕೊಳ್ಳುತ್ತಿರುವುದು ಕಂಡುಬಂತು.

ಬೆಂಗಳೂರಿನ ಜಿಕೆವಿಕೆಯಲ್ಲಿ ಕೃಷಿಮೇಳ (ETV Bharat)

ಸಾಫ್ಟ್‌ವೇರ್​ ಉದ್ಯೋಗ ಬಿಟ್ಟು ಬೇಕಿಂಗ್​​ ವ್ಯವಹಾರ:"ಮನಸ್ಸಿದ್ದರೆ ಮಾರ್ಗ ಎಂಬಂತೆ ಸ್ವಂತ ಉದ್ಯಮ ಮಾಡಬೇಕೆಂಬ ಹಂಬಲವಿದ್ದವರಿಗೆ ಕಡಿಮೆ ಬಂಡವಾಳದಲ್ಲಿ ಹೆಚ್ಚು ಹಣ ಸಂಪಾದಿಸುವ ಉದ್ಯಮವಿದು. ನಿರುದ್ಯೋಗಿಗಳಿಗೆ ಆಸರೆಯಾದರೆ ಐಟಿಬಿಟಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಾಸ್ ಕೆಳಗೆ ಕೆಲಸ ಮಾಡುತ್ತಿರುವವರೂ ಸಹ ತಾವೇ ಯಾಜಮಾನವಾಗಲೂ ಈ ಉದ್ಯಮ ನೆರವಿಗೆ ಬರುತ್ತದೆ. ಉತ್ಸಾಹದ ಜೊತೆಗೆ ಬೇಕಿಂಗ್ ತರಬೇತಿ ಪಡೆದರೆ ಭವಿಷ್ಯದಲ್ಲಿ ನೀವೇ ಹತ್ತಾರು ಜನರಿಗೆ ಬಾಸ್ ಆಗಬಹುದು. ಕೇಕ್ ತಯಾರಿಕೆ ಹಾಗೂ ಅಲಂಕಾರ, ಪಿಜ್ಜಾ, ಬರ್ಗರ್, ವಿವಿಧ ಬಿಸ್ಕತ್​ಗಳು, ಪಪ್ಸ್, ದಿಲ್​ ಪಸಂದ್​ ಹಾಗೂ ಚಾಕಲೇಟ್ ತಯಾರಿಕೆ ಸೇರಿ ವಿವಿಧ ತಿನಿಸುಗಳು ಬಗ್ಗೆ ಹೇಳಿಕೊಡಲಾಗುತ್ತದೆ. ಅಲ್ಲದೇ ಮೌಲ್ಯವರ್ಧಿತ ಆಹಾರಗಳಾದ ರಾಗಿ ತಯಾರಿಸಬಹುದಾದ ಉತ್ಪನ್ನ, ಪುಷ್ಠಿದಾಯಕ ಬ್ರೆಡ್​ ಮತ್ತು ಬನ್​ಗಳು, ಜೇನುತುಪ್ಪ ಆಧರಿತ ಬೇಕರಿ ವಸ್ತುಗಳೂ ಸೇರಿದಂತೆ 100ಕ್ಕೂ ಹೆಚ್ಚು ಉತ್ಪನ್ನಗಳ ಬಗ್ಗೆ ತರಬೇತಿ ನೀಡಲಾಗುತ್ತದೆ‌. ಅಲ್ಪಾವಧಿ ತರಬೇತಿಗೆ 3 ಸಾವಿರ ಹಾಗೂ ದೀರ್ಘಾವದಿ ತರಬೇತಿಗೆ 10 ಸಾವಿರ ಶುಲ್ಕ ವಿಧಿಸಲಾಗಿದೆ" ಎಂದು ಬೇಕಿಂಗ್​ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆಯ ಸಂಯೋಜಕಿ ಹಾಗೂ ಮುಖ್ಯಸ್ಥೆ ಡಾ.ಸವಿತಾ ಎಸ್​.ಮಂಗಮ್ಮನವರ್​ ಈಟಿವಿ ಭಾರತ್​​ಗೆ ಮಾಹಿತಿ ನೀಡಿದರು.

ಬೆಂಗಳೂರಿನ ಜಿಕೆವಿಕೆಯಲ್ಲಿ ಕೃಷಿಮೇಳ (ETV Bharat)

ಬೇಕರಿ ಯಂತ್ರೋಪಕರಣಗಳಿಗೆ ಸಬ್ಸಿಡಿ ಪಡೆಯಲು ನೆರವು:"ತರಬೇತಿ ಪಡೆದ ಬಳಿಕ ಉದ್ಯಮ ಆರಂಭಿಸುವವರಿಗೆ ಕೇಂದ್ರ ಸರ್ಕಾರದ ವಿವಿಧ ಯೋಜನೆಯಡಿಯಲ್ಲಿ ಯಂತ್ರ ಖರೀದಿಗೆ ಶೇ.50ರಷ್ಟು ಸಬ್ಸಿಡಿ ಪಡೆಯಲು‌ ಮೌಲ್ಯವರ್ಧನಾ ಸಂಸ್ಥೆ ನೆರವು ನೀಡಲಿದೆ‌.‌ ಉದ್ಯಮದಾರರ ಹಾಗೂ ಯಂತ್ರೋಪಕರಣಗಳ ಕಂಪೆನಿಗಳ ನಡುವೆ ಸೇತುವೆಯಾಗಿ ಕೆಲಸ ಮಾಡಲಿದೆ. ಕನಿಷ್ಠ 50 ಸಾವಿರ ರೂಪಾಯಿ ಇದ್ದರೆ ಸಣ್ಣ ಮಟ್ಟದಿಂದ ಉದ್ಯಮ ಆರಂಭಿಸಬಹುದು. ಕುಶಲತೆಯ ಜೊತೆ ಬ್ರ್ಯಾಂಡಿಂಗ್​​ ಮಾಡುವ ಕಲೆಯನ್ನು ಹೇಳಿಕೊಡಲಾಗುವುದು‌‌.‌ ಇದುವರೆಗೂ 40 ಸಾವಿರಕ್ಕೂ ಹೆಚ್ಚು ಮಂದಿಗೆ ತರಬೇತಿ ನೀಡಿದ್ದು, 20 ಸಾವಿರ ಮಂದಿಯನ್ನು ಉದ್ಯಮಶೀಲರನ್ನಾಗಿ ಮಾಡಿದ್ದೇವೆ" ಎಂದು ಸವಿತಾ ತಿಳಿಸಿದರು.

ಬೆಂಗಳೂರಿನ ಜಿಕೆವಿಕೆಯಲ್ಲಿ ಕೃಷಿಮೇಳ (ETV Bharat)

ಇದನ್ನೂ ಓದಿ:ಕೃಷಿಮೇಳ: ಸಮುದ್ರದಲ್ಲಿ ಮಾತ್ರವಲ್ಲ- ನಿಮ್ಮ ಮನೆಯ ತೊಟ್ಟಿಯಲ್ಲಿ ಮುತ್ತು ಉತ್ಪಾದಿಸಿ, ಲಾಭ ಗಳಿಸಿ

ಇದನ್ನೂ ಓದಿ:ಮಧ್ಯವರ್ತಿಗಳ ಕಮಿಷನ್​​, ಚೌಕಾಶಿಯಿಂದ ರೈತರಿಗೆ ಮುಕ್ತಿ: ಬಿತ್ತನೆ ಬೀಜಗಳು ಆನ್​ಲೈನ್ ಮೂಲಕ ಮನೆ ಬಾಗಿಲಿಗೆ!

ABOUT THE AUTHOR

...view details