ಕರ್ನಾಟಕ

karnataka

ಶಿಸ್ತಿನಲ್ಲಿರಿಸಲು ಬಾಲಕಿಗೆ ಗೃಹ ಬಂಧನ: ಅಜ್ಜಿ, ತಾತನ ಮನವೊಲಿಸಿ ಪರೀಕ್ಷೆಗೆ ಹಾಜರಾಗಲು ಹೊಯ್ಸಳ ಪೊಲೀಸರ ನೆರವು - Hoysala police helped the girl

By ETV Bharat Karnataka Team

Published : Aug 14, 2024, 11:36 AM IST

ಶಿಸ್ತಿನಲ್ಲಿರಿಸಲು ಬಾಲಕಿಗೆ ಗೃಹ ಬಂಧನದಲ್ಲಿ ಇರಿಸಿದ್ದ ಅಜ್ಜಿ ಮತ್ತು ತಾತನ ಮನವೊಲಿಸಿದ ಹೊಯ್ಸಳ ಪೊಲೀಸರು, ಬಾಲಕಿಗೆ ಪರೀಕ್ಷೆಗೆ ಹಾಜರಾಗಲು ನೆರವುವಾದರು.

Hoysala police  Bengaluru  Hoysala police helped the girl
ಸಾಂದರ್ಭಿಕ ಚಿತ್ರ (ETV Bharat)

ಬೆಂಗಳೂರು:ಸಹಾಯವಾಣಿಗೆ ಬಂದ ಕರೆ ಆಧರಿಸಿ ತ್ವರಿತವಾಗಿ ಕಾರ್ಯಪ್ರವೃತ್ತರಾದ ಹೊಯ್ಸಳ ಸಿಬ್ಬಂದಿ ಗೃಹ ಬಂಧನಕ್ಕೊಳಗಾಗಿದ್ದ ವಿದ್ಯಾರ್ಥಿನಿಗೆ ಪರೀಕ್ಷೆಗೆ ಹಾಜರಾಗಲು ನೆರವಾದ ಘಟನೆ ಆಗಸ್ಟ್ 12 ರಂದು ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಿಯು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ಕರೆಯನ್ವಯ ಕಾರ್ಯಪ್ರವೃತ್ತರಾದ ಸಿದ್ದಾಪುರ ಠಾಣೆಯ ಎಎಸ್ಐ ಅಶೋಕ್ ನೇತೃತ್ವದ ಹೊಯ್ಸಳ ಸಿಬ್ಬಂದಿ, ಮನೆಗೆ ತೆರಳಿ ಆಕೆಯ ಅಜ್ಜಿ- ತಾತನ ಮನವೊಲಿಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದ್ದಾರೆ.

ಪೋಷಕರಿಂದ ದೂರಾಗಿದ್ದ ಬಾಲಕಿ ತನ್ನ ಅಜ್ಜಿ, ತಾತನೊಂದಿಗೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದಳು. ಮನೆಗೆಲಸದಲ್ಲಿ ಸಹಾಯ ಮಾಡುವುದಿಲ್ಲ. ಸದಾ ಮೊಬೈಲ್ ಫೋನ್‌ನಲ್ಲಿ ಮಗ್ನಳಾಗಿರುತ್ತಾಳೆ ಎಂದು ಆಕೆಯನ್ನು ಶಿಸ್ತಿನಲ್ಲಿರಿಸುವ ಉದ್ದೇಶದಿಂದ ಅಜ್ಜಿ, ತಾತ ಆಕೆಯನ್ನು ಮನೆಯಲ್ಲಿ ಕೂಡಿ ಹಾಕಿದ್ದರು ಎನ್ನಲಾಗಿದೆ.

ಸೋಮವಾರ ನಿಗದಿಯಾಗಿದ್ದ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಲು ಸಹ ಅಜ್ಜಿ, ತಾತ ಅನುಮತಿ ನೀಡದಿದ್ದಾಗ ಬೇರೆ ವಿಧಿಯಿರದೆ ಬಾಲಕಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿ, ಲೋಕೇಷನ್ ಶೇರ್ ಮಾಡಿದ್ದಳು. ತಕ್ಷಣ ಸ್ಥಳಕ್ಕೆ ತೆರಳಿದ್ದ ಹೊಯ್ಸಳ ಪೊಲೀಸ್ ಸಿಬ್ಬಂದಿ ಆಕೆಯ ಅಜ್ಜಿ, ತಾತನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟರಲ್ಲಾಗಲೇ ಪರೀಕ್ಷೆಗೆ ವಿಳಂಬವಾಗಿದ್ದರಿಂದ ಬಸವನಗುಡಿಯಲ್ಲಿರುವ ಕಾಲೇಜಿಗೆ ತಾವೇ ಬಾಲಕಿಯನ್ನ ಕರೆದೊಯ್ದ ಹೊಯ್ಸಳ ಸಿಬ್ಬಂದಿ, ಪ್ರಾಂಶುಪಾಲರಿಗೆ ವಿಷಯವನ್ನು ವಿವರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಡಿಸಿದ್ದಾರೆ. ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿ, ವಿದ್ಯಾರ್ಥಿನಿಗೆ ನೆರವಾದ ಹೊಯ್ಸಳ ಸಿಬ್ಬಂದಿಯ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ:ಸುದೀರ್ಘ ರಜೆ ಹಿನ್ನೆಲೆ ಸಂಚಾರ ದಟ್ಟಣೆ ಸಾಧ್ಯತೆ; ಉದ್ಯೋಗಿಗಳಿಗೆ WFH ನೀಡುವಂತೆ ಟ್ರಾಫಿಕ್ ಜಂಟಿ ಆಯುಕ್ತರ ಪತ್ರ - Traffic Joint Commissioner Letter

ABOUT THE AUTHOR

...view details