ಕರ್ನಾಟಕ

karnataka

ETV Bharat / state

ಚಿಕ್ಕೋಡಿ: ಗ್ಯಾಸ್​ ಸಿಲಿಂಡರ್ ಸೋರಿಕೆ, ಕರೆಂಟ್ ಸ್ವಿಚ್ ಆನ್ ಮಾಡುತ್ತಿದ್ದಂತೆ ಸ್ಫೋಟಗೊಂಡು ಓರ್ವ ಸಾವು - Gas cylinder exploded - GAS CYLINDER EXPLODED

ಚಿಕ್ಕೋಡಿ ತಾಲೂಕಿನಲ್ಲಿ ಇಂದು ಬೆಳಗ್ಗೆ ಗ್ಯಾಸ್ ಸಿಲಿಂಡರ್​ ಸ್ಫೋಟಗೊಂಡು ಓರ್ವ ಸಾವನ್ನಪ್ಪಿದ್ದಾನೆ.

ಗ್ಯಾಸ್​ ಸಿಲಿಂಡರ್ ಸ್ಫೋಟ
ಗ್ಯಾಸ್​ ಸಿಲಿಂಡರ್ ಸ್ಫೋಟದಿಂದ ಮನೆಗೆ ಹಾನಿಯಾಗಿರುವುದು. (ETV Bharat)

By ETV Bharat Karnataka Team

Published : Aug 22, 2024, 12:12 PM IST

ಸಿಲಿಂಡರ್​ ಗ್ಯಾಸ್​ ಸ್ಫೋಟ (ETV Bharat)

ಚಿಕ್ಕೋಡಿ: ಮನೆಯಲ್ಲಿನ ಸಿಲಿಂಡರ್​ ಗ್ಯಾಸ್​ ಸೋರಿಕೆಯಿಂದ ಸ್ಫೋಟಗೊಂಡು ಓರ್ವ ಸಾವನ್ನಪ್ಪಿ, ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣಕ್ಕೆ ಕೂಲಿ ಕೆಲಸಕ್ಕೆ ಬಂದಿದ್ದ ಮಹಾರಾಷ್ಟ್ರದ ಬೀಡ್ ಮೂಲದ ಸೂರ್ಯಕಾಂತ ಸಳಕೆ(55) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮತ್ತೋರ್ವ ಕಾರ್ಮಿಕ ಜ್ಞಾನೋದಯಗೆ ಗಂಭೀರವಾಗಿ ಗಾಯವಾಗಿದ್ದು, ಅವರು ಚಿಕ್ಕೋಡಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಿಲಿಂಡರ್ ಗ್ಯಾಸ್​ ಪೈಪ್​ ಕಟ್ಟಾಗಿ ರಾತ್ರಿಯಿಡೀ ಸೋರಿಕೆಯಾಗಿದ್ದರಿಂದ ಬೆಳಗಿನ ಜಾವ ವಿದ್ಯುತ್ ಲೈಟ್​ ಆನ್ ಮಾಡಿದಾಗ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯ ಗೋಡೆ ಕುಸಿದಿದೆ. ಪಕ್ಕದ ಮನೆಯ ಗೋಡೆಗೂ ಸಹ ಹಾನಿಯಾಗಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ:ಚಿಕ್ಕಮಗಳೂರು: ನಿರ್ಲಕ್ಷ್ಯದ ಸ್ಕೂಟಿ ಚಾಲನೆ, 3 ಅಡಿ ತೂರಿ ರಸ್ತೆಗೆ ಬಿದ್ದ! - two wheeler accident

ABOUT THE AUTHOR

...view details