ಕರ್ನಾಟಕ

karnataka

ETV Bharat / state

ಹೊಳಲ್ಕೆರೆ ಬಳಿ ಭೀಕರ ರಸ್ತೆ ಅಪಘಾತ; ಬಸ್​ ಪಲ್ಟಿಯಾಗಿ ಮೂವರು ಸಾವು - Bus Accident - BUS ACCIDENT

ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಶನಿವಾರ ಮುಂಜಾನೆ ಖಾಸಗಿ ಬಸ್​ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ.

four-people-died-in-a-private-bus-overturn-in-chitradurga
ಹೊಳಲ್ಕೆರೆ ಬಳಿ ಭೀಕರ ರಸ್ತೆ ಅಪಘಾತ

By PTI

Published : Apr 7, 2024, 9:26 AM IST

Updated : Apr 8, 2024, 6:05 AM IST

ಚಿತ್ರದುರ್ಗ :ಖಾಸಗಿ ಬಸ್ಸೊಂದು ಪಲ್ಟಿಯಾಗಿ ಮೂವರು ಪ್ರಯಾಣಿಕರು ಸ್ಥಳದಲ್ಲೇ‌‌ ದುರ್ಮರಣಕ್ಕೀಡಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪಟ್ಟಣದ ಕಣಿವೆ ಬಳಿ ನಡೆದಿದೆ. ಬೆಂಗಳೂರಿನಿಂದ‌ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಶನಿವಾರ ಬೆಳಗಿನಜಾವ 4.30ರ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಈ ಬಸ್​ನಲ್ಲಿ‌ 50 ಜನ ಪ್ರಯಾಣ‌ ಬೆಳೆಸಿದ್ದು, 38 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಹೊಳಲ್ಕೆರೆ ತಾಲೂಕು ಆಸ್ಪತ್ರೆಯಲ್ಲಿ‌ ನೆಲದ ಮೇಲೆ ‌ಬೆಡ್ ಹಾಕಿ ಚಿಕಿತ್ಸೆ ನೀಡಲಾಗ್ತಿದೆ. ಅಲ್ಲೇ ಮೃತಪಟ್ಟ ಮೂವರು ಪೈಕಿ ಇಬ್ಬರ ಗುರುತು ಪತ್ತೆಯಾಗಿದ್ದು, ಸಾಗರ ಮೂಲದ ಗಣಪತಿ (40), ಹೊನ್ನಾವರ ಮೂಲದ ಜಗದೀಶ್(45) ಎಂದು ಗುರುತಿಸಲಾಗಿದೆ.

ಮತ್ತೋರ್ವ ಮೃತ ವ್ಯಕ್ತಿಯ ಗುರುತು ಈವರೆಗೆ ಪತ್ತೆಯಾಗಿಲ್ಲ. ಮೃತದೇಹಗಳನ್ನು ಶವಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಅವೈಜ್ಞಾನಿಕ ರಸ್ತೆಯಿಂದಾಗಿ ಅಪಘಾತ ನಡೆದಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ಘಟನಾ ಸ್ಥಳಕ್ಕೆ ಹೊಳಲ್ಕೆರೆ ಪಿಎಸ್​ಐ ಸುರೇಶ್ ಭೇಟಿ ‌ನೀಡಿ‌, ಪರಿಶೀಲನೆ ನಡೆಸಿದರು. ಹೊಳಲ್ಕೆರೆ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

ಇದನ್ನೂ ಓದಿ:ಬೆಂಗಳೂರು: ಹಾಲು ತರಲು ಬೈಕ್​ನಲ್ಲಿ ಹೋಗುತ್ತಿದ್ದ ಬಾಲಕ ಬಸ್‌ಗೆ ಸಿಲುಕಿ ಸಾವು - Bike Accident

Last Updated : Apr 8, 2024, 6:05 AM IST

For All Latest Updates

ABOUT THE AUTHOR

...view details