ಕರ್ನಾಟಕ

karnataka

ETV Bharat / state

ಜೆಡಿಎಸ್, ಬಿಜೆಪಿ ಮೈತ್ರಿ ಸಮನ್ವಯ ಸಭೆಯಲ್ಲಿ ಮುನಿಸಿಕೊಂಡ ಮಾಜಿ ಶಾಸಕ ಸಂಪಂಗಿ - Former MLA Sampangi

ಕೋಲಾರದಲ್ಲಿ ಇಂದು ಜೆಡಿಎಸ್ ಹಾಗೂ ಬಿಜೆಪಿ ಪಕ್ಷದವರು, ಸಮನ್ವಯ ಸಮಿತಿ ಸಭೆಯನ್ನ ನಡೆಸಿದರು.

ಮಾಜಿ ಶಾಸಕ ಸಂಪಂಗಿ
ಮಾಜಿ ಶಾಸಕ ಸಂಪಂಗಿ

By ETV Bharat Karnataka Team

Published : Mar 31, 2024, 6:45 PM IST

ಜೆಡಿಎಸ್, ಬಿಜೆಪಿ ಮೈತ್ರಿ ಸಮನ್ವಯ ಸಭೆಯಲ್ಲಿ ಮುನಿಸಿಕೊಂಡ ಮಾಜಿ ಶಾಸಕ ಸಂಪಂಗಿ

ಕೋಲಾರ :ಇಂದು ಕೋಲಾರದಲ್ಲಿ ನಡೆದ ಜೆಡಿಎಸ್, ಬಿಜೆಪಿ ಮೈತ್ರಿ ಸಮನ್ವಯ ಸಭೆಯಲ್ಲಿ ಕೆಜಿಎಫ್​ನ ಮಾಜಿ ಶಾಸಕ ಸಂಪಂಗಿ ಮುನಿಸಿಕೊಂಡಿದ್ರು. ಇಂದು ಕೋಲಾರ ಹೊರವಲಯದ ನಾರಾಯಣಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್, ಬಿಜೆಪಿ ಸಮನ್ವಯ ಸಭೆ ಹಮ್ಮಿಕೊಂಡಿದ್ರು.

ಈ ವೇಳೆ ಬಿಜೆಪಿ, ಜೆಡಿಎಸ್​ನ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರಿಗೆ ಎರಡು ನಿಮಿಷಗಳ ಕಾಲ ಮಾತನಾಡುವ ಗಡುವು ನೀಡಿದ್ರು. ಈ ವೇಳೆ ಜೆಡಿಎಸ್, ಬಿಜೆಪಿ ಹಾಲಿ ಮಾಜಿ ಶಾಸಕರು ಭಾಷಣ ಮಾಡಿದ್ದು, ಸಂಪಂಗಿ ಭಾಷಣದ ವೇಳೆಗೆ, ಅಧ್ಯಕ್ಷರು ಮಾತ್ರ ಮಾತನಾಡಲಿ ಎಂದು ತಿಳಿಸಿದ್ರು.

ಇದರಿಂದ ಕೋಪಗೊಂಡ ಸಂಪಂಗಿ ಅವರು, ಸಭೆಯ ನಡವಳಿಕೆಯಿಂದ ಅಸಮಾಧಾನಗೊಂಡು, ವೇದಿಕೆಯಿಂದ ಇಳಿದು ಸಭಿಕರೊಂದಿಗೆ ಕುಳಿತುಕೊಂಡರು. ಈ ವೇಳೆ ವೇದಿಕೆ ಮೇಲಿದ್ದವರು ಸಂಪಂಗಿ ಅವರನ್ನ ಭಾಷಣ ಮಾಡುವಂತೆ ಒತ್ತಾಯಿಸಿದ್ರು. ಆದರೂ ಇದಕ್ಕೆ ನಿರಾಕರಿಸಿದ ವೇಳೆ ಸಂಸದ ಮುನಿಸ್ವಾಮಿ ಅವರು ಸಂಪಂಗಿ ಅವರು ಬಿಟ್ಟು ಬೇರೆಯವರು ಮಾತನಾಡಿ ಎಂದು ಹೇಳಿದರು.

ಇದರಿಂದ ಮತ್ತೆ ಕೆರಳಿದ ಮಾಜಿ ಶಾಸಕರು ವೇದಿಕೆಗೆ ಆಗಮಿಸಲಿಲ್ಲ. ಈ ವೇಳೆ ಮಾಜಿ ಶಾಸಕ ಸಂಪಂಗಿ ಅವರನ್ನ ಮನವೊಲಿಸಿ ಭಾಷಣಕ್ಕೆ ಕರೆದೊಯ್ದರು. ಕಳೆದ ವಿಧಾನಸಭೆ ಚುನಾವಣೆ ನಂತರ ಸಂಸದ ಮುನಿಸ್ವಾಮಿ ಹಾಗೂ ಮಾಜಿ ಶಾಸಕ ಸಂಪಂಗಿ ಅವರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಇಂದಿನ ಸಮನ್ವಯ ಸಭೆಯಲ್ಲಿ ಬಹಿರಂಗಗೊಂಡಿತು.

ಜೆಡಿಎಸ್ ಹಾಗೂ ಬಿಜೆಪಿ ಮುಖಂಡರಿಂದ ಒಗ್ಗಟ್ಟು ಪ್ರದರ್ಶನ : ಕೋಲಾರದಲ್ಲಿ ಎನ್.ಡಿ.ಎ ಮೈತ್ರಿ ಕೂಟದಿಂದ ಭರ್ಜರಿ ಚುನಾವಣಾ ತಯಾರಿ ನಡೆಸಿದ್ದಾರೆ. ಅದರಂತೆ ಇವತ್ತು ಕೋಲಾರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದವರು, ಸಮನ್ವಯ ಸಮಿತಿ ಸಭೆಯನ್ನ ನಡೆಸಿದ್ರು. ಈ ವೇಳೆ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಕೈ ಕೈ ಹಿಡಿದು ಮೇಲೆತ್ತುವ ಮೂಲಕ ಒಗ್ಗಟ್ಟನ್ನು ಪ್ರದರ್ಶನ ಮಾಡಿದ್ರು‌.

ಈ ವೇಳೆ ಸಂಸದ ಎಸ್. ಮುನಿಸ್ವಾಮಿ, ಎನ್.ಡಿ.ಎ ಅಭ್ಯರ್ಥಿ ಮಲ್ಲೇಶ್ ಬಾಬು, ಶಾಸಕರಾದ ಸಮೃದ್ದಿ ಮಂಜುನಾಥ್, ವೆಂಕಟಶಿವಾರೆಡ್ಡಿ ಸೇರಿದಂತೆ ಮಾಜಿ ಜೆಡಿಎಸ್, ಬಿಜೆಪಿ ಮಾಜಿ ಶಾಸಕರನ್ನೊಳಗೊಂಡಂತೆ ಸಾವಿರಾರು ಮುಖಂಡರು ಹಾಜರಿದ್ದರು.

ಮುಂದಿನ ಹಂತದ ಚುನಾವಣೆಗಳಲ್ಲೂ ಸಹ ಮೈತ್ರಿ ಮುಂದುವರೆಯಲಿದೆ : ಈ ವೇಳೆ ಮಾತನಾಡಿದ ಎನ್​ಡಿಎ ಮುಖಂಡರು, ಕೋಲಾರ ಲೋಕಸಭಾ ಕ್ಷೇತ್ರದಿಂದ ಮಲ್ಲೇಶ್ ಬಾಬು ಅಭ್ಯರ್ಥಿ ಅಲ್ಲ, ಬದಲಾಗಿ ದೇವೇಗೌಡ ಹಾಗೂ ಮೋದಿ ಅವರು ಅಭ್ಯರ್ಥಿ ಆಗಿದ್ದಾರೆ. ಇವರ ಗೆಲುವಿಗಾಗಿ ನಾವೆಲ್ಲಾ ಒಗ್ಗಟ್ಟಾಗಿ ಶ್ರಮಿಸಬೇಕು. ಜೊತೆಗೆ ಮುಂದಿನ ಹಂತದ ಚುನಾವಣೆಗಳಲ್ಲೂ ಸಹ ಮೈತ್ರಿ ಮುಂದುವರೆಯಲಿದೆ ಎಂದರು. ಕಾರ್ಯಕ್ರಮದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಿಂದ ಸಾವಿರಾರು ಕಾರ್ಯಕರ್ತರು, ಮುಖಂಡರು ಭಾಗವಹಿಸಿದ್ದರು.

ಇದನ್ನೂ ಓದಿ :ಉತ್ತುಂಗದಲ್ಲಿರುವ ಮೋದಿ ಜನಪ್ರಿಯತೆ ಮತವಾಗಿಸಿಕೊಳ್ಳುವಲ್ಲಿ ಯಶವಾಗಬೇಕು : ಬಿ. ವೈ ವಿಜಯೇಂದ್ರ - LOK SABHA ELECTION 2024

ABOUT THE AUTHOR

...view details