ಮಾಜಿ ಸಚಿವ ಸಾ ರಾ ಮಹೇಶ್ ಮಾಧ್ಯಮದವರೊಂದಿಗೆ ಮಾತನಾಡಿದರು. (ETV Bharat) ಮೈಸೂರು: ಸಂತ್ರಸ್ತೆಯನ್ನು ಇಲ್ಲಿಯವರೆಗೆ ಏಕೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿಲ್ಲ, ಏಕೆ ಇನ್ನೂ ಸ್ಥಳ ಮಹಜರು ಮಾಡಿಲ್ಲ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಸಾರಾ ಮಹೇಶ್ ಪ್ರಶ್ನೆ ಮಾಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪೆನ್ ಡ್ರೈವ್ ಪ್ರಕರಣವನ್ನು ತನಿಖೆ ಮಾಡಲು ನೇಮಕವಾಗಿರುವ SIT ತಂಡದ ಕೆಲವು ಅಧಿಕಾರಿಗಳು ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಕೈ ಗೊಂಬೆಗಳಾಗಿದ್ದು. ಅವರು ಕಾನೂನು ಪ್ರಕಾರ ಕೆಲಸ ಮಾಡುತ್ತಿಲ್ಲ ಎಂಬುವುದು ಗೊತ್ತಾಗಿದೆ.
ಸಂತ್ರಸ್ತೆಯನ್ನು ರಕ್ಷಣೆ ಮಾಡಲಾಗಿದೆ. ಆದರೆ ಇಲ್ಲಿಯವರೆಗೆ ಏಕೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿಲ್ಲ, ಯಾಕೆ ಅವರನ್ನು ಸ್ಥಳ ಮಹಜರಿಗೆ ಕರೆದುಕೊಂಡು ಬಂದಿಲ್ಲ. ಕಾಂಗ್ರೆಸ್ನವರು ಹೇಳಿದಂತೆ ತನಿಖಾಧಿಕಾರಿಗಳು ಕೆಲಸ ಮಾಡುತ್ತಾ ಇದ್ದಾರೆ ಎಂದು ಆರೋಪಿಸಿದರು.
ರಾಜಕೀಯ ದುರುದ್ದೇಶದಿಂದ ನಮ್ಮ ಪಕ್ಷವನ್ನು ಮುಗಿಸುವ ಹುನ್ನಾರವನ್ನು ಸಿಎಂ ಹಾಗೂ ಡಿಸಿಎಂ ನಿರ್ದೇಶನದ ಮೇರೆಗೆ ಮಾಡಲಾಗುತ್ತಿದೆ. ನಾವು ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯದ ಬಗ್ಗೆ ನಾವು ಮಾತಾನಾಡುವುದಿಲ್ಲ. ತಪ್ಪು ಮಾಡಿದ್ದರೆ, ಶಿಕ್ಷೆ ಆಗಲಿ. ಆದರೆ ಪೆನ್ ಡ್ರೈವ್ ಹಂಚಿಕೆ ಮಾಡಿ ನೂರಾರು ಮಹಿಳೆಯರ ಮಾನ ಹರಾಜು ಮಾಡುವುದು ಅಕ್ಷಮ್ಯ ಅಪರಾಧ ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕು. ಪೆನ್ ಡ್ರೈವ್ ತಯಾರು ಆಗಿದ್ದು ಎಲ್ಲಿ ? ಇದನ್ನ ಹಂಚಿಕೆ ಮಾಡಿದವರು ಯಾರು ? ಎಂಬ ಬಗ್ಗೆ ಮೊದಲು ಈ ಪ್ರಕರಣವನ್ನ ಸಿಬಿಐಗೆ ವಹಿಸಿ ತನಿಖೆ ಮಾಡಿಸಬೇಕು ಎಂದು ಸಾರಾ ಮಹೇಶ್ ಒತ್ತಾಯಿಸಿದರು.
ಇದನ್ನೂಓದಿ:ಮೇ 14ರವರೆಗೂ ಹೆಚ್.ಡಿ.ರೇವಣ್ಣಗೆ ನ್ಯಾಯಾಂಗ ಬಂಧನ - H D REVANNA