ಕರ್ನಾಟಕ

karnataka

ETV Bharat / state

ಬಿಎಸ್​ವೈ ವಿರುದ್ಧದ ಪ್ರಕರಣ ರಾಜಕೀಯ ಪ್ರೇರಿತ: ಎಂ.ಪಿ.ರೇಣುಕಾಚಾರ್ಯ ಗರಂ - M P Renukacharya - M P RENUKACHARYA

ಬಿ.ಎಸ್.ಯಡಿಯೂರಪ್ಪ ಬಂಧನಕ್ಕೆ ವಾರೆಂಟ್‌ ಜಾರಿಯಾಗಿರುವ ಕುರಿತು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪ್ರತಿಕ್ರಿಯಿಸಿದರು.

m-p-renukacharya
ಎಂ.ಪಿ. ರೇಣುಕಾಚಾರ್ಯ (ETV Bharat)

By ETV Bharat Karnataka Team

Published : Jun 14, 2024, 7:37 PM IST

Updated : Jun 14, 2024, 7:56 PM IST

ಮಾಜಿ ಸಚಿವ ಎಂ. ಪಿ ರೇಣುಕಾಚಾರ್ಯ (ETV Bharat)

ದಾವಣಗೆರೆ:ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ ರಾಜಕೀಯ ಪ್ರೇರಿತ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತ ನಾಯಕ ಯಡಿಯೂರಪ್ಪನವರ ಮೇಲೆ ಪೋಕ್ಸೋ ಪ್ರಕರಣ ದಾಖಲು ಮಾಡಿದ್ದರು. ಅಂದು ಗೃಹ ಸಚಿವರು ದೂರು‌ ನೀಡಿದಾಕೆ ಮಾನಸಿಕ ಅಸ್ವಸ್ಥೆ, 53 ಜನರ ಮೇಲೆ ದೂರು ನೀಡಿದ್ದಾರೆ‌ ಎಂದು ಹೇಳಿದ್ದರು. ಯಡಿಯೂರಪ್ಪನವರನ್ನು ಭೇಟಿಯಾಗಿ ನನ್ನ ಮಗಳಿಗೆ ನ್ಯಾಯ ಕೊಡಿಸಿ ಎಂದು ಅವರ ಬಳಿ ಹೋಗಿದ್ದಳು. ತನ್ನ ಸಹೋದರ ಸಂಬಂಧಿ ನನ್ನ ಮಗಳ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಯಡಿಯೂರಪ್ಪನವರ ಬಳಿ ಹೇಳಿ ಗೋಳಾಡಿದ್ದಳು. ಐದು ಸಾವಿರ ಕೋಟಿ ರೂ ಬಜಾಜ್ ಕಂಪನಿಯವರು ನೀಡಬೇಕು, ಕೊಡಿಸಿ ಎಂದು ಹೇಳಿದ್ದಳು. ಅಂದು ಮಾನಸಿಕ ಅಸ್ವಸ್ಥೆ ಎಂದು ಹೇಳಿ ಈಗ ಯಡಿಯೂರಪ್ಪನವರನ್ನು ಬಂಧಿಸುತ್ತೇವೆ ಎಂದು ಗೃಹ ಸಚಿವರು ಹೇಳಿದ್ದಾರೆ. ಈ ಪ್ರಕರಣ ರಾಜಕೀಯ ಪ್ರೇರಿತ ಎಂದರು.

ದರ್ಶನ್ ವಿರುದ್ದ ಕ್ರಮಕ್ಕೆ ಆಗ್ರಹ:ನಟ ದರ್ಶನ್ ವಿರುದ್ದ ಕ್ರಮಕ್ಕೆ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದರು. ಈ ನೆಲದ ಕಾನೂನನ್ನು ಎಲ್ಲರೂ ಗೌರವಿಸಬೇಕು. ರೇಣುಕಾಸ್ವಾಮಿ ಕುಟುಂಬಕ್ಕೆ ಒಂದು‌ ಕೋಟಿ ಪರಿಹಾರ‌ ನೀಡಬೇಕು. ಅವರ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ‌ ದರ್ಶನ್​ ಅವರ ಎಲ್ಲಾ ಸಿನಿಮಾ‌ ಬ್ಯಾನ್ ಮಾಡ‌ಬೇಕು. ದರ್ಶನ್ ತಪ್ಪು ಮಾಡಿದರೆ ಸೂಕ್ತ ಶಿಕ್ಷೆಯಾಗಲಿ ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಅಂದು ಲೋಕಾಯುಕ್ತ, ಇಂದು ಸಿಐಡಿ: 2ನೇ ಬಾರಿ ಅರೆಸ್ಟ್ ಆಗ್ತಾರಾ ಬಿ.ಎಸ್.ಯಡಿಯೂರಪ್ಪ? - Yediyurappa POCSO Case

Last Updated : Jun 14, 2024, 7:56 PM IST

ABOUT THE AUTHOR

...view details