ಕರ್ನಾಟಕ

karnataka

ETV Bharat / state

ಬ್ರಿಟಿಷರಿಂದ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ ಎಂದು ಕಾಂಗ್ರೆಸ್​ 70 ವರ್ಷ ಅಧಿಕಾರ ನಡೆಸಿದೆ: ಜಗದೀಶ್ ಶೆಟ್ಟರ್ - congress

70 ವರ್ಷ ಅಧಿಕಾರ ಅವಧಿಯಲ್ಲಿ ಕಾಂಗ್ರೆಸ್ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದು​ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಜಗದೀಶ್​ ಶೆಟ್ಟರ್​
ಮಾಜಿ ಸಿಎಂ ಜಗದೀಶ್​ ಶೆಟ್ಟರ್​

By ETV Bharat Karnataka Team

Published : Feb 20, 2024, 4:49 PM IST

ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಹೇಳಿಕೆ

ಹುಬ್ಬಳ್ಳಿ :ದೇಶಕ್ಕಾಗಿ ಬ್ರಿಟಿಷರಿಂದ ಸ್ವಾತಂತ್ರ್ಯ ತಂದು ಕೊಟ್ಟಿದ್ದೇವೆ ಎಂದು ಕಾಂಗ್ರೆಸ್​ನವರು 70 ವರ್ಷ ಅಧಿಕಾರ ಮಾಡಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಹೇಳಿದರು.

ನಗರದಲ್ಲಿಂದು‌ ಮಾತನಾಡಿದ ಅವರು, ​ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದ 70 ವರ್ಷ ಕಾಂಗ್ರೆಸ್ ಆಡಳಿತ ಮಾಡಿದೆ. ಅವರು ಏನೆಲ್ಲ ಮಾಡಿದ್ದಾರೋ, ಅದೆಲ್ಲ ಜನಕ್ಕೆ ಗೊತ್ತು. ಗರಿಬಿ ಹಠಾವೋ ಎಂದು ಹೇಳಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 10-15 ವರ್ಷ ಅಧಿಕಾರ ಮಾಡಿದ್ದರು ಎಂದರು.

ಇದೀಗ ರಾಮ ಮಂದಿರ ವಿಚಾರ ಬಿಟ್ಟು ಕಾಂಗ್ರೆಸ್ ನವರಿಗೆ ಬೇರೆ ವಿಷಯ ಇಲ್ಲ. ಪದೇ ಪದೇ ರಾಮ ಮಂದಿರದ ಬಗ್ಗೆ ಮಾತನಾಡುವುದನ್ನು ಬಿಟ್ಟು ಉಳಿದ ಇಮೇಜ್ ಉಳಿಸಿಕೊಳ್ಳಲಿ. ಅವರಿಗೆ ರಾಮ ಮಂದಿರ ಕಟ್ಟಲು ಯೋಗ್ಯತೆ ಇಲ್ಲ. ಮಾತಾಡುವುದನ್ನು ಬಿಡುವುದಿಲ್ಲ. ಕಾಂಗ್ರೆಸ್​ನವರ ಗರಿಬಿ ಹಠಾವೋ ದಿಂದ ಎಷ್ಟು ಜನರು ಬಡತನದಿಂದ ಹೊರಗೆ ಬಂದರು ಎಂಬುದನ್ನು ಸಚಿವ ಸಂತೋಷ್​ ಲಾಡ್​ ಹೇಳಬೇಕು ಎಂದರು.

ನಮ್ಮ ಜೊತೆ ಸ್ವಾತಂತ್ರ್ಯ ಪಡೆದ ಜಪಾನ, ಚೀನಾ ಎಷ್ಟು ಮುಂದುವರೆದಿವೆ. ನಾಶವಾದ ದೇಶಗಳು 30 ವರ್ಷಗಳಲ್ಲಿ ಮತ್ತೆ ಎದ್ದು ನಿಂತಿವೆ. ಆದರೇ ಕಾಂಗ್ರೆಸ್ 70 ವರ್ಷ ಏನು ಮಾಡಿದೆ. ನಾವು ಬಂದಾಗಿನಿಂದ ರಾಷ್ಟ್ರೀಯ ರಸ್ತೆಗಳನ್ನು ಮಾಡಿದ್ದೇವೆ. ವಾಜಪೇಯಿ ಅವರು ಇದ್ದಾಗ ಸರ್ಕಾರ ಉತ್ತಮವಾದ ರಸ್ತೆ ನಿರ್ಮಾಣ ಮಾಡಿದೆ. ಆದರೇ ಇವರು ಏನು ಮಾಡಿದ್ದಾರೆ. ಈಗ ಲೋಕಸಭೆಯಲ್ಲಿ 46 ಸೀಟ್ ಬಂದಿವೆ. ಅದನ್ನು ಉಳಿಸಿಕೊಳ್ಳಲು ಮೊದಲು ಪ್ರಯತ್ನ ಮಾಡಲಿ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ರಾಜ್ಯ ಸರ್ಕಾರದಲ್ಲಿ ತಾಳ ಮೇಳವಿಲ್ಲ. ಅಧಿಕಾರಿಗಳು-ಸಚಿವರ ನಡುವೆ ಸಂವಹನದ ಕೊರತೆ ಎದ್ದು ಕಾಣುತ್ತಿದೆ. ಅದರಿಂದಾಗಿಯೇ ಘೋಷವಾಕ್ಯ ವಿವಾದ ಸೃಷ್ಟಿಯಾಗಿದೆ. "ಜ್ಞಾನ ದೇಗುಲವಿದು ಕೈ ಮಗಿದು ಒಳಗೆ ಬಾ" ಘೋಷವಾಕ್ಯದ ಬದಲಾವಣೆ ನೋಡಿದರೆ ಸರ್ಕಾರ ಅತಂತ್ರ ಸ್ಥಿತಿಯಲ್ಲಿದೆ ಅನಿಸುತ್ತದೆ. ವಾಕ್ಯ ಬದಲಾವಣೆ ಮಾಡಲು ಕಾರ್ಯದರ್ಶಿಗಳು ಆದೇಶ ಮಾಡಿದಾರೆ ಎನ್ನುತ್ತಿದ್ದಾರೆ. ಮಂತ್ರಿ ಮಂಡಲದಲ್ಲಿ ಚರ್ಚೆ ಮಾಡಿದ್ದಾರಾ..? ಮಂತ್ರಿಗಳು ಅಧಿಕಾರಿಗಳ ನಡುವೆ ಸಮನ್ವಯವೇ ಇಲ್ಲ. ಏಕೆ ರಾಷ್ಟ್ರಕವಿ ಕುವೆಂಪು ಅವರ ಘೋಷವಾಕ್ಯ ಬದಲಾವಣೆ ಮಾಡಬೇಕು?. ಅಕಸ್ಮಾತ್ ಬದಲಾವಣೆ ಮಾಡವ ಅವಶ್ಯಕತೆ ಇದ್ದರೆ ಚರ್ಚೆ ಮಾಡಿ ಎಂದು ಶೆಟ್ಟರ್​ ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೂರು ಸೀಟ್ ಗೆಲ್ಲಲ್ಲ ಎಂನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ‌ಪ್ರತಿಕ್ರಿಯಿಸಿ, ಐಎನ್​ಡಿಐಎ ಒಕ್ಕೂಟವನ್ನು ಕಾಂಗ್ರೆಸ್ ನಾಯಕತ್ವ ತೆಗೆದುಕೊಂಡಿದೆ. ಮಲ್ಲಿಕಾರ್ಜುನ ಅವರ ಮಾತಿಗೆ ಒಕ್ಕೂಟದಲ್ಲಿ ಕಿಮ್ಮತ್ತಿಲ್ಲ. ನೀವು ನೂರು ಸೀಟು ಗೆಲ್ಲೋದು ಬಿಡಿ. ಕಳೆದ ಬಾರಿ ಎಷ್ಟು ಗೆದ್ದಿದ್ದೀರಿ ಅಷ್ಟನ್ನು ಉಳಸಿಕೊಂಡು ಹೋಗಿ ಸಾಕು ಎಂದು ಶೆಟ್ಟರ್​ ಟಾಂಗ್​ ನೀಡಿದರು.

ನಮ್ಮಲ್ಲಿ ಯಾವುದೇ ಮುಸುಕಿನ ಗುದ್ದಾಟ ಇಲ್ಲ, ಇನ್ನೂ ಐದಾರು ದಿವಸದಲ್ಲಿ ಎಲ್ಲವೂ ಸರಿಯಾಗುತ್ತದೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಇತ್ತು. ಅದಕ್ಕೆ ದೆಹಲಿಗೆ ಹೋಗಿದ್ದೆ. ನಾನು ನಿಗದಿತ ಯಾವುದೇ ಕ್ಷೇತ್ರದಲ್ಲಿ ಚುನಾವಣೆ ನಿಲ್ಲುವ ಬಗ್ಗೆ ನಿರ್ಧಾರ ಮಾಡಿಲ್ಲ. ಆದರೆ ನಮ್ಮ ಪಕ್ಷ ವರಿಷ್ಠರು ಎಲ್ಲಿ ನಿಲ್ಲು ಎನುತ್ತಾರೋ ಅಲ್ಲಿ ನಿಲ್ಲುತ್ತೇನೆ. ಬೇಡ ಎಂದರೆ ಸ್ಪರ್ಧೆ ಮಾಡಲ್ಲ. ಪಕ್ಷದ ಸೇವೆ ಮಾಡಿ ಎಂದರೆ ಅದಕ್ಕೂ ಸಿದ್ಧ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕೆನ್ನುವುದು ಎಲ್ಲರ ಆಸೆ ಎಂದರು.

ಇದನ್ನೂ ಓದಿ :ಮೈಸೂರು: ದೇಶದಲ್ಲಿ ಮತ್ತೊಮ್ಮೆ ಮೋದಿ ಗೋಡೆ ಬರಹಕ್ಕೆ ಜಗದೀಶ್ ಶೆಟ್ಟರ್ ಚಾಲನೆ

ABOUT THE AUTHOR

...view details