ಹುಬ್ಬಳ್ಳಿ :ಸರ್ಕಾರ ಕ್ರಿಮಿನಲ್ಸ್ ಜೊತೆ ನಿಂತಿದೆ. ಹಾನಗಲ್ನಲ್ಲಿ ಗ್ಯಾಂಗ್ ರೇಪ್ ಆಗಿದೆ. ನೈತಿಕ ಪೊಲೀಸ್ ಗಿರಿಯಂತಹ ಪ್ರಕರಣಗಳು ಹೊರಗೆ ಬರುತ್ತಿವೆ. ಇಂತಹ ಗ್ಯಾಂಗ್ ನಿರಂತರವಾಗಿ ಆ್ಯಕ್ಟೀವ್ ಆಗಿದೆ. ಆದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಡಳಿತ ವ್ಯವಸ್ಥೆ ಸಂಪೂರ್ಣ ಅದಗೆಟ್ಟಿದೆ. ಪ್ರಕರವನ್ನು ಎಸ್‌ಐಟಿ ಗೆ ವರ್ಗಾವಣೆ ಮಾಡಿ ಎಂದು ಹೇಳಿದರೂ ಸರ್ಕಾರ ಕೊಡುತ್ತಿಲ್ಲ. ಪೋಕ್ಸೋ ಪ್ರಕರಣದಡಿ ಕೇಸ್ ದಾಖಲು ಮಾಡಿಲ್ಲ. ಸುಳ್ಳು ಮೆಡಿಕಲ್ ಎಕ್ಸಾಮ್ ಆಗಿವೆ. ಇದು ಮೆಡಿಕೋ ಲೀಗಲ್ ಕೇಸ್, ಸರ್ಕಾರ ಸಂತ್ರಸ್ತೆ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಬೇಕು. ಈ ಪ್ರಕರಣ ಸಂಬಂಧ ವಿಚಾರಿಸಲು ಶಾಸಕರಿಗೆ ಹೇಳಿದ್ದೀನಿ ಅಂತಾ ಸಿಎಂ ಹೇಳ್ತಾರೆ. ಅಂದ್ರೆ ಸರ್ಕಾರ ಸತ್ತಿದೆಯಾ? ಆರೋಗ್ಯ ಇಲಾಖೆ ಸತ್ತಿದೆಯಾ? ಎಂದು ಬೊಮ್ಮಾಯಿ ಪ್ರಶ್ನಿಸಿದರು.
ಪೊಲೀಸರೇ ಇಸ್ಪೀಟ್ ಅಡ್ಡೆಗಳನ್ನು ಸೀಜ್ ಮಾಡಿಸಿದ್ದಾರೆ. ಇದಕ್ಕೆಲ್ಲ ಕಾರಣ ಪೋಸ್ಟಿಂಗ್ನಲ್ಲಿ ಹಣ ಕೊಟ್ಟಿರೋದು. ಅಲ್ಪ ಸಂಖ್ಯಾತರಿಗೂ ನ್ಯಾಯ ಕೊಟ್ಟಿಲ್ಲ, ದಲಿತರಿಗೂ ನ್ಯಾಯ ಕೊಟ್ಟಿಲ್ಲ. ಕ್ರಿಮಿನಲ್ಗಳಿಗೆ ಸರ್ಕಾರ ರಕ್ಷಣೆ ಕೊಡುತ್ತಿದೆ. ಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆಯ ಎರಡರ ಕಾಂಬಿನೇಷನ್ ಸರ್ಕಾರ ಎಂದು ಬೊಮ್ಮಾಯಿ ಕಿಡಿಕಾರಿದರು.