ದೇವನಹಳ್ಳಿ (ಬೆಂ.ಗ್ರಾಮಾಂತರ):ದಟ್ಟ ಮಂಜು ಆವರಿಸಿದ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. ಇಂದು ಆರು ವಿಮಾನಗಳು ವಿಳಂಬವಾಗಿದ್ದು, ಒಂದು ವಿಮಾನವನ್ನು ಬೇರೆಡೆಗೆ ಮಾರ್ಗ ಬದಲಿಸಲಾಗಿದೆ.
ನಿಧಾನಕ್ಕೆ ಚಳಿಗಾಲ ಆರಂಭವಾಗುತ್ತಿದೆ. ಮುಂದಿನ ದಿನಗಳಲ್ಲಿ ಮುಂಜಾನೆ ಹೊತ್ತು ದಟ್ಟ ಮಂಜಿನಿಂದಾಗಿ ಮತ್ತಷ್ಟು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ ಮಂಜಿನಿಂದ 15 ವಿಮಾನ ಹಾರಾಟ ವಿಳಂಬವಾಗಿದ್ದು, 6 ವಿಮಾನಗಳನ್ನು ಬೇರೆ ಏಪೋರ್ಟ್ಗೆ ಡೈವರ್ಟ್ ಮಾಡಲಾಗಿದೆ.
ಕೆಇಎಎಲ್‌ನಲ್ಲಿ ದಟ್ಟ ಮಂಜಿನಿಂದಾಗಿ ವಿಮಾನ ಹಾರಾಟದಲ್ಲಿ ವ್ಯತ್ಯಯ (ETV Bharat) ಬೆಳಗ್ಗೆ 05:08ರಿಂದ 07:25ರವರೆಗೂ ರನ್ವೇನಲ್ಲಿ ಮಂದ ಬೆಳಕಿದ್ದು, ವಿಮಾನಗಳ ಲ್ಯಾಂಡಿಂಗ್ ಸಾಧ್ಯವಿರಲಿಲ್ಲ. ಈ ಕಾರಣದಿಂದ 15 ವಿಮಾನಗಳ ಹಾರಾಟ ವಿಳಂಬವಾಗಿದೆ ಮತ್ತು 6 ವಿಮಾನಗಳನ್ನು ಚೆನ್ನೈ ಮತ್ತು ಹೈದರಾಬಾದ್‌ಗೆ ಕಳುಹಿಸಲಾಗಿದೆ.
ಮುಂಬೈನಿಂದ ಬಂದ ಆಕಾಶ ಏರ್, ದೆಹಲಿಯಿಂದ ಬಂದ ಸ್ಪೈಸ್ ಜೆಟ್, ಮುಂಬೈ ಹಾಗೂ ಅಬು ಧಾಬಿಯಿಂದ ಆಗಮಿಸಿದ ಏರ್ ಇಂಡಿಯಾ ವಿಮಾನಗಳನ್ನು ಚೆನ್ನೈ ವಿಮಾನ ನಿಲ್ದಾಣಕ್ಕೆ, ಹೈದರಾಬಾದ್‌ನಿಂದ ಬಂದ ಇಂಡಿಗೋ, ದೆಹಲಿಯಿಂದ ಬಂದ ಕಾರ್ಗೋ ವಿಮಾನಗಳನ್ನು ಹೈದರಾಬಾದ್ ಏರ್ಪೋರ್ಟ್ಗೆ ಡೈವರ್ಟ್ ಮಾಡಿರುವುದಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಒಂದೇ ದಿನ 7,637 ಪ್ರಯಾಣಿಕರ ನಿರ್ವಹಣೆ: ಮಂಗಳೂರು ವಿಮಾನ ನಿಲ್ದಾಣದಲ್ಲಿ ದಾಖಲೆ