ಕರ್ನಾಟಕ

karnataka

ETV Bharat / state

ಗಂಗಾವತಿ: ಮಹೀಂದ್ರಾ ಶೋರೂಂಗೆ ಬೆಂಕಿ; 5 ಟ್ರ್ಯಾಕ್ಟರ್​ ಸೇರಿ ಅಪಾರ ಹಾನಿ - Tractors Fire - TRACTORS FIRE

ಮಹೀಂದ್ರಾ ಶೋರೂಂನಲ್ಲಿ ಬೆಂಕಿ ಅವಘಡ ಸಂಭವಿಸಿ, 5 ಟ್ರ್ಯಾಕ್ಟರ್​ಗಳು ಸುಟ್ಟು ಕರಕಲಾಗಿವೆ.

tractors caught fire
ಶೋರೂಂಗೆ ಬೆಂಕಿ (ETV Bharat)

By ETV Bharat Karnataka Team

Published : Jun 10, 2024, 10:43 AM IST

ಮಹೀಂದ್ರಾ ಶೋರೂಂಗೆ ಬೆಂಕಿ (ETV Bharat)

ಗಂಗಾವತಿ (ಕೊಪ್ಪಳ): ನಗರದ ರಾಣಾಪ್ರತಾಪ್ ಸಿಂಗ್ ವೃತ್ತದ ಸಮೀಪ ರಿಲಯನ್ಸ್ ಮಾರ್ಟ್ ಪಕ್ಕದಲ್ಲಿರುವ ಮಹೀಂದ್ರಾ ಶೋರೂಂನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 5 ಟ್ರ್ಯಾಕ್ಟರ್​ಗಳು ಸೇರಿದಂತೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ವಸಂತ ಪಾಟೀಲ್ ಎಂಬುವರಿಗೆ ಸೇರಿದ್ದ ಮಹೀಂದ್ರಾ ಶೋ ರೂಂನಲ್ಲಿ ಅವಘಡ ಸಂಭವಿಸಿದೆ. ಘಟನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ ಕಾರಣ ಎಂದು ಗೊತ್ತಾಗಿದೆ. ಬೆಂಕಿ ಹಿನ್ನೆಲೆಯಲ್ಲಿ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು. ಆದರೆ, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ಹೊತ್ತಿಗಾಗಲೇ ಬೆಂಕಿ ಸಂಪೂರ್ಣ ಆವರಿಸಿಕೊಂಡಿತ್ತು. ಶೋರೂಂನಲ್ಲಿ ಇದ್ದ ವಾಹನಗಳು ಸುಟ್ಟಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಆಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಇದನ್ನೂ ಓದಿ:ಕಾರು ಗ್ಯಾರೇಜ್​ಗೆ ಬೆಂಕಿ: ಎರಡು ಕಾರು, ಅಪಾರ ಟೈರ್​ಗಳು ಸುಟ್ಟು ಕರಕಲು; ತಪ್ಪಿದ ಭಾರಿ ದುರಂತ - Fire Accident in Car Garage

ABOUT THE AUTHOR

...view details