ಕರ್ನಾಟಕ

karnataka

ETV Bharat / state

ಫಾರ್ಮ್ ಹೌಸ್​ನಲ್ಲಿ ರೇವ್ ಪಾರ್ಟಿ ಪ್ರಕರಣದಲ್ಲಿ ಐವರ ಬಂಧನ: ಹೆಚ್ಚುವರಿ ಆಯುಕ್ತ ಡಾ.ಚಂದ್ರಗುಪ್ತ - Bengaluru rave party case - BENGALURU RAVE PARTY CASE

ಬೆಂಗಳೂರು ನಗರದ ಹೊರವಲಯದಲ್ಲಿರುವ ಫಾರ್ಮ್ ಹೌಸ್​ನಲ್ಲಿ ರೇವ್ ಪಾರ್ಟಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ'' ಎಂದು ಹೆಚ್ಚುವರಿ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದರು.

rave party  Bengaluru  Electronic City Police
ಹೆಚ್ಚುವರಿ ಆಯುಕ್ತ ಡಾ.ಚಂದ್ರಗುಪ್ತ (ETV Bharat)

By ETV Bharat Karnataka Team

Published : May 20, 2024, 2:45 PM IST

ಹೆಚ್ಚುವರಿ ಆಯುಕ್ತ ಡಾ.ಚಂದ್ರಗುಪ್ತ ಮಾತನಾಡಿದರು (ETV Bharat)

ಬೆಂಗಳೂರು:''ನಗರದ ಹೊರವಲಯದ ಫಾರ್ಮ್ ಹೌಸ್​ನಲ್ಲಿ ರೇವ್ ಪಾರ್ಟಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಈ ಕುರಿತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳಿದಂತೆ ಪಾರ್ಟಿಯಲ್ಲಿ ಭಾಗಿಯಾಗಿದ್ದವರನ್ನ ವಶಕ್ಕೆ ಪಡೆಯಲಾಗಿದ್ದು, ವೈದ್ಯಕೀಯ ತಪಾಸಣೆಗೊಳಪಡಿಸಲಾಗುತ್ತಿದೆ'' ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ತಿಳಿಸಿದ್ದಾರೆ‌.

ಕಾರ್ಯಾಚರಣೆ ಕುರಿತು ಪ್ರತಿಕ್ರಿಯಿಸಿದ ಅವರು, ''ಫಾರ್ಮ್ ಹೌಸ್​ನಲ್ಲಿ ರೇವ್ ಪಾರ್ಟಿ ಮಾಡುತ್ತಿದ್ದ ಮಾಹಿತಿ ಅನ್ವಯ ಸಿಸಿಬಿ ಪೊಲೀಸರು, ಸ್ಥಳಿಯ ಪೊಲೀಸರ ಸಹಯೋಗದೊಂದಿಗೆ ದಾಳಿ ನಡೆಸಲಾಗಿದೆ. ಸ್ಥಳದಲ್ಲಿ ಸುಮಾರು ನೂರು ಜನರು ಸೇರಿ ರೇವ್ ಪಾರ್ಟಿ ನಡೆಸಿರುವುದು ತಿಳಿದು ಬಂದಿದೆ. ಕೆಲವು ಮಾದಕ ವಸ್ತುಗಳು‌ ಸಹ ಪತ್ತೆಯಾಗಿವೆ. ಬಳಿಕ ಶ್ವಾನದಳವನ್ನು ಸ್ಥಳಕ್ಕೆ ಕರೆಸಿಕೊಂಡು ತಪಾಸಣೆ ಕೈಗೊಂಡಾಗಲೂ ಸಹ ಕೆಲವು ಮಾದಕ ವಸ್ತುಗಳು ಪತ್ತೆಯಾಗಿವೆ. ಆಯೋಜಕರು ಹಾಗೂ ಮಾದಕ ಪದಾರ್ಥಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದವರು ಸೇರಿದಂತೆ ಒಟ್ಟು ಐವರ ವಿರುದ್ಧ ತಕ್ಷಣಕ್ಕೆ ಕ್ರಮ ಕೈಗೊಳ್ಳಾಗಿದೆ'' ಎಂದು ಮಾಹಿತಿ ನೀಡಿದ್ದಾರೆ.

''ಜಿ.ಆರ್. ಫಾರ್ಮ್ ಹೌಸ್ ಹೆಸರಿನ ಸ್ಥಳ, ಅದರ ಮಾಲೀಕರ ಮಾಹಿತಿಯನ್ನು ಕಲೆ ಹಾಕಲಾಗಿದ್ದು, ವಿಚಾರಣೆ ನಡೆಸಲಾಗುತ್ತದೆ. ಭಾನುವಾರ ಬರ್ತ್ ಡೇ ಪಾರ್ಟಿ ಎಂದು ಆಯೋಜಿಸಲಾಗಿತ್ತು. ಅದೇನೆ ಇರಲಿ‌ ಮಾದಕ ವಸ್ತುಗಳ ಬಳಕೆ ಕಾನೂನು ಬಾಹಿರ. ಪಾರ್ಟಿಯಲ್ಲಿದ್ದವರಲ್ಲಿ ಬಹುತೇಕರು ಹೊರ ರಾಜ್ಯದವರಿದ್ದಾರೆ. ಅವರು ಯಾರ್ಯಾರು, ಏನು ಎಂಬುದರ ಕುರಿತು ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಸ್ಥಳೀಯ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಸ್ಥಳದಲ್ಲಿ ವಶಪಡಿಸಿಕೊಂಡ ಮಾದಕಗಳ ಪೈಕಿ ಕೊಕೇನ್, ಹೈಡ್ರೋ ಗಾಂಜಾ, ಎಂಡಿಎಂಎ ಸಹ ಇದ್ದು, ಅದರ ಮೌಲ್ಯಮಾಪನ ಮಾಡಲಾಗುತ್ತಿದೆ'' ಎಂದು ಅವರು ತಿಳಿಸಿದರು.

ಇದನ್ನೂ ಓದಿ:ರೇವ್ ಪಾರ್ಟಿ ನಡೆಯುತ್ತಿದ್ದ ಫಾರ್ಮ್​​​ ಹೌಸ್ ಮೇಲೆ ಸಿಸಿಬಿ ದಾಳಿ: ತೆಲುಗು ಕಿರುತೆರೆ ನಟ, ನಟಿಯರು ಸೇರಿ 78 ಜನ ವಶಕ್ಕೆ - BENGALURU RAVE PARTY

ABOUT THE AUTHOR

...view details