ಕರ್ನಾಟಕ

karnataka

ETV Bharat / state

ಪಹಣಿಗೆ ಆಧಾರ್ ಲಿಂಕ್ ಮಾಡಿಸಿ ಆಸ್ತಿ ಉಳಿಸಿಕೊಳ್ಳಿ: ಮೊದಲ ಸ್ಥಾನದಲ್ಲಿದೆ ದಾವಣಗೆರೆ - Aadhaar Link To Pahani

ಪಹಣಿಗೆ ಆಧಾರ್ ಲಿಂಕ್ ಮಾಡಿಸುವುರದಲ್ಲಿ ದಾವಣಗೆರೆಗೆ ರಾಜ್ಯದಲ್ಲೇ ಪ್ರಥಮ ಸ್ಥಾನವಿದೆ.

By ETV Bharat Karnataka Team

Published : Jun 25, 2024, 9:35 PM IST

Agricultural Produce Marketing Committee
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (Davanagere)

ದಾವಣಗೆರೆ ತಹಶೀಲ್ದಾರ್ ಡಾ.ಅಶ್ವಥ್ ಪ್ರತಿಕ್ರಿಯೆ (ETV Bharat)

ದಾವಣಗೆರೆ:ಪ್ರಸ್ತುತ ದಿನಗಳಲ್ಲಿ ಕೃಷಿ ಅಕ್ರಮ ಪ್ರಕರಣಗಳು, ನೋಂದಣಿಗಳು ಹೆಚ್ಚಾಗುತ್ತಿವೆ. ಇದನ್ನು ತಪ್ಪಿಸಲು ರಾಜ್ಯ ಸರ್ಕಾರ ಉಪಾಯ ಕಂಡುಕೊಂಡಿದೆ. ರೈತರು ಪಹಣಿಗೆ ಆಧಾರ್ ಲಿಂಕ್ ಮಾಡಿಸಿ ತಮ್ಮ ಆಸ್ತಿ ಇತರರ ಪಾಲಾಗುವುದನ್ನು ತಪ್ಪಿಸಬಹುದು. ವಿಶೇಷವೆಂದರೆ ಪಹಣಿಗೆ ಆಧಾರ್ ಲಿಂಕ್ ಮಾಡಿಸುವಲ್ಲಿ ಬೆಣ್ಣೆನಗರಿ ದಾವಣಗೆರೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.

ಸಾಕಷ್ಟು ರೈತರು ಇತ್ತೀಚೆಗೆ ತಮ್ಮ ಕೃಷಿ ಭೂಮಿಯ ಅಕ್ರಮ ನೋಂದಣಿಗೆ ಬಲಿಯಾಗುತ್ತಿದ್ದರು. ಇದನ್ನು ಗಮನಿಸಿದ ರಾಜ್ಯ ಸರ್ಕಾರ, ಕೃಷಿ ಭೂಮಿಯ ಅಕ್ರಮ ನೋಂದಣಿಯನ್ನು ತಪ್ಪಿಸಲು ಮತ್ತು ರೈತರ ಜಮೀನುಗಳಿಗೆ ರಕ್ಷಣೆ ನೀಡಲು ರೈತರು ತಮ್ಮ ಪಹಣಿಗಳಿಗೆ ಆಧಾರ್​ (ಆರ್‌ಟಿಸಿ) ಜೋಡಣೆ ಮಾಡುವ ಪ್ರಕ್ರಿಯೆಯನ್ನು ಜಾರಿಗೆ ತಂದಿದೆ. ದಾವಣಗೆರೆ ಜಿಲ್ಲೆಯಲ್ಲಿ ಶೇ.70ರಷ್ಟು ಪಹಣಿಗಳು ಆಧಾರ್‌ಗೆ ಲಿಂಕ್ ಆಗಿವೆ. ಒಟ್ಟು 8.27 ಲಕ್ಷ ಪಹಣಿಗಳಲ್ಲಿ 4.54 ಲಕ್ಷ ಪಹಣಿಗಳು ಆಧಾರ್‌ಗೆ ಜೋಡಣೆಯಾಗಿವೆ.

ಪ್ರಯೋಜನಗಳಿವು: ರೈತರು ಆರಂಭದಲ್ಲಿ ಇದಕ್ಕೆ ಹೆಚ್ಚು ಸ್ಪಂದಿಸಲಿಲ್ಲ. ಬಳಿಕ ಉಪಯೋಗಗಳನ್ನು ಅರಿತು ಜಮೀನಿನ ಪಹಣಿಗೆ ಆಧಾರ್ ಲಿಂಕ್ ಮಾಡಿಸಿದ್ದಾರೆ. ಪಹಣಿಗೆ ಆಧಾರ್ ಲಿಂಕ್ ಮಾಡಿಸಿದ್ರೆ ಕೃಷಿ ಭೂಮಿಯ ಅಕ್ರಮ ನೋಂದಣಿಯನ್ನು ತಪ್ಪಿಸಬಹುದು. ರೈತರು ವಂಚನೆಗೆ ಒಳಗಾಗುವುದಿಲ್ಲ. ಕಂದಾಯ ಇಲಾಖೆಗೆ ಪದೇ ಪದೇ ದಾಖಲೆಗಳನ್ನು ಸಲ್ಲಿಸುವ ಅವಶ್ಯಕತೆ ಇಲ್ಲ. ಇದರಲ್ಲಿ ಯಾರು ದೊಡ್ಡ ರೈತ, ಸಣ್ಣ ರೈತ ಎಂದು ತಿಳಿದುಕೊಳ್ಳಬಹುದು. ಪರಿಹಾರ ಪ್ರಯೋಜನ ಪಡೆಯಲು, ಬರ ಪರಿಹಾರ ಬೇರೆಯವರ ಖಾತೆಗೆ ಹೋಗುವುದಿಲ್ಲ, ನೇರವಾಗಿ ಪರಿಹಾರ ಪಡೆಯಬಹುದು.

"ಶೇ.70ರಷ್ಟು ಪಹಣಿಗೆ ಆಧಾರ್ ಲಿಂಕ್ ಮಾಡಿಸಲಾಗಿದೆ. ಉಳಿದ ಶೇ.30 ರಷ್ಟು ರೈತರು ಆಧಾರ್ ಲಿಂಕ್ ಮಾಡಿಸಬೇಕಾಗಿದೆ.‌ ಇವುಗಳನ್ನು 15 ದಿನಗಳಲ್ಲಿ ಪೂರ್ಣಗೊಳಿಸಲಿದ್ದೇವೆ. ಈ ಸಾಧನೆಗೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಅವರ ಪ್ರೋತ್ಸಾಹ, ಸಲಹೆ ಕಾರಣ" ಎಂದು ತಹಶೀಲ್ದಾರ್ ಡಾ.ಅಶ್ವಥ್ ತಿಳಿಸಿದರು.

ಇದನ್ನೂ ಓದಿ:ಆಧಾರ್​ ಪ್ಯಾನ್​ ಲಿಂಕ್​ಗೆ ನಾಳೆಯೇ ಕೊನೆಯ ದಿನ.. ಜೋಡಣೆ ಮಾಡದಿದ್ದಲ್ಲಿ ಪ್ಯಾನ್​ ನಿಷ್ಕ್ರಿಯ, ಹಲವು ಸಮಸ್ಯೆಗಳು ಉಲ್ಬಣ

ABOUT THE AUTHOR

...view details