ಬೆಂಗಳೂರು: ರಾತ್ರಿ 8 ರಿಂದ 10 ರವರೆಗೆ ಮಾತ್ರ ಪಟಾಕಿ ಸಿಡಿಸಬೇಕು ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಮಾತನಾಡಿದ ಅವರು, ಈ ಬಗ್ಗೆ ಸುಪ್ರಿಂಕೋರ್ಟ್ ನಿರ್ದೇಶನ ಕೂಡ ಇದೆ. ಪಟಾಕಿ ಸಿಡಿಸುವುದರಿಂದ ಮಕ್ಕಳು ಕಣ್ಣು ಕಳೆದುಕೊಂಡಿದ್ದಾರೆ. ಕೆಲವೆಡೆ ಜೀವ ಕಳೆದುಕೊಂಡಿದ್ದಾರೆ. ದೊಡ್ಡ ಮಟ್ಟದ ಪರಿಸರ ಹಾನಿಯಾಗುತ್ತೆ ಎಂದರು.
ಪರಿಸರ ಪ್ರಕೃತಿ ಸಂರಕ್ಷಣೆ ಮಾಡಬೇಕು. ಕತ್ತಲೆಯಿಂದ ಬೆಳಕಿನತ್ತ ಹೋಗುವಾಗ ಪರಿಸರ ಮಾಲಿನ್ಯ ಬೇಡ. ರಾಸಾಯನಿಕವಲ್ಲದ ಹಸಿರು ಪಟಾಕಿಗಳನ್ನ ಬಳಸಬೇಕು. ಪಟಾಕಿ ಮಾರಾಟ ಮಾಡುವವರು ಹಸಿರು ಪಟಾಕಿ ಮಾತ್ರ ಮಾರಾಟ ಮಾಡಬೇಕು. ಈ ಬಗ್ಗೆ ಪಟಾಕಿ ಮಾರಾಟಗಾರರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಚಿವ ಈಶ್ವರ ಖಂಡ್ರೆ (ETV Bharat) ರಾಜೀನಾಮೆ ನೀಡಬೇಕು:ಪ್ರಲ್ಹಾದ್ ಜೋಶಿ ಸಹೋದರನ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಲ್ಹಾದ್ ಜೋಶಿ ರಾಜೀನಾಮೆ ನೀಡಬೇಕು. ಬಿಜೆಪಿ ಬ್ರಹ್ಮಾಂಡ ಭ್ರಷ್ಟಾಚಾರ ಒಂದೊಂದೆಜಗಜ್ಜಾಹೀರಾಗಿದೆ. ಪ್ರಲ್ಹಾದ್ ಜೋಶಿ ಸಹೋದರನನ್ನ ಬಂಧಿಸಲಾಗಿದೆ. ಯಾಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳು ಒಂದೊಂದೆ ಹೊರಗೆ ಬರುತ್ತಿವೆ. ನಮ್ಮ ಮೇಲೆ ಆರೋಪ ಕೇಳಿಬಂದ್ರೆ ರಾಜೀನಾಮೆ ಅಂತಾರೆ. ಅವರ ಮೇಲೆ ಆರೋಪ ಬಂದ್ರೆ ರಾಜಕೀಯ ದ್ವೇಷ ಅಂತಾರೆ. ಇನ್ನೂ ಬಗೆದಷ್ಟು ಹಗರಣಗಲು ಹೊರಗೆ ಬರಲಿವೆ ಎಂದರು.
ಇದನ್ನೂ ಓದಿ:ವಂಚನೆ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪಾತ್ರ ಇಲ್ಲ: ದೂರುದಾರೆ ಸುನೀತಾ ಚೌಹಾಣ್