ಕರ್ನಾಟಕ

karnataka

ETV Bharat / state

ಮಂಗಳೂರು: ವಿದೇಶಿ ಉದ್ಯೋಗಗಳಿಗೆ ಅನಧಿಕೃತ ನೇಮಕಾತಿ, ಪ್ರಕರಣ ದಾಖಲು - FIR AGAINST AN OVERSEAS AGENCY

ಓವರ್‌ಸೀಸ್ ಇಂಟರ್‌ನ್ಯಾಶನಲ್ ಏಜೆನ್ಸಿಯೊಂದು ವಿದೇಶಾಂಗ ಸಚಿವಾಲಯದಲ್ಲಿ ನೋಂದಣಿಯಾಗದೇ ಅನಧಿಕೃತವಾಗಿ ಸಾಗರೋತ್ತರ ಉದ್ಯೋಗಗಳಿಗೆ ಜಾಹೀರಾತು ನೀಡುತ್ತಿದ್ದು, ಎಫ್‌ಐಆರ್ ದಾಖಲಾಗಿದೆ.

OVERSEAS INTERNATIONAL AGENCY  HIREGLO ELEGANT OVERSEAS  DAKSHINA KANNADA  ಓವರ್‌ಸೀಸ್ ಇಂಟರ್‌ನ್ಯಾಶನಲ್ ಏಜೆನ್ಸಿ CASE AGAINST AN OVERSEAS AGENCY
ಮಂಗಳೂರು ನಗರ (ಸಂಗ್ರಹ ಚಿತ್ರ) (ETV Bharat)

By ETV Bharat Karnataka Team

Published : Jan 3, 2025, 9:32 AM IST

ಮಂಗಳೂರು:ವಿದೇಶಾಂಗ ಸಚಿವಾಲಯದಲ್ಲಿ ನೋಂದಣಿಯಾಗದೇ ಅನಧಿಕೃತವಾಗಿ ಸಾಗರೋತ್ತರ ಉದ್ಯೋಗಗಳಿಗೆ ಜಾಹೀರಾತು ನೀಡುವ ಮೂಲಕ ಸಾಗರೋತ್ತರ ನೇಮಕಾತಿಯಲ್ಲಿ ತೊಡಗಿಸಿಕೊಂಡ ನಗರದ ಎಸ್ಸೆಲ್ ವಿಲ್ಕನ್ ಎಂಬ ಸಂಸ್ಥೆಯ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಈ ಕುರಿತು ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ವಲಸಿಗರ ರಕ್ಷಕ ಕಚೇರಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬೆಂಗಳೂರಿನಿಂದ ದೂರು‌ ಬಂದಿತ್ತು. ಮಂಗಳೂರಿನ ಬೆಂದೂರುವೆಲ್​ನ ಎಸ್ಸೆಲ್ ವಿಲ್ಕಾನ್​ ಎಂಬ ಕಚೇರಿಯಲ್ಲಿ ಶ ಮಸಿಯುಲ್ಲಾ ಅತಿಯುಲ್ಲಾ ಖಾನ್ ಎಂಬವರು ನಿರ್ದೇಶಕರಾಗಿ ನಡೆಸುತ್ತಿರುವ M/S ಹಿರೆಗ್ಲೋ ಎಲಿಗಂಟ್ ಓವರ್‌ಸೀಸ್ ಇಂಟರ್‌ನ್ಯಾಶನಲ್ (OPC) ಪ್ರೈವೇಟ್​​ ಎಂಬ ಏಜೆನ್ಸಿಯ ಈ ಕೃತ್ಯ ಎಸಗಿದೆ.

ಎಮಿಗ್ರೇಷನ್ ಆ್ಯಕ್ಟ್ 1983ರಡಿಯಲ್ಲಿ ವಿದೇಶಾಂಗ ಸಚಿವಾಲಯದಲ್ಲಿ ನೋಂದಣಿಯಾಗದೇ, ಅನಧಿಕೃತವಾಗಿ ಸಾಗರೋತ್ತರ ಉದ್ಯೋಗಗಳಿಗೆ ಜಾಹೀರಾತು ನೀಡುವ ಮೂಲಕ ಸಾಗರೋತ್ತರ ನೇಮಕಾತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ದೂರಲಾಗಿತ್ತು. ನೇಮಕಗೊಂಡ ಅಭ್ಯರ್ಥಿಗಳಿಂದ ಅನಧಿಕೃತವಾಗಿ ನಿಯಮಬಾಹಿರವಾಗಿ ಪಾಸ್​​ಪೋರ್ಟ್​ಗಳನ್ನು ಸಂಗ್ರಹಿಸಿಕೊಂಡಿರುತ್ತಾರೆ. ಆದ್ದರಿಂದ ಈ ಏಜೆನ್ಸಿ ವಿದೇಶಾಂಗ ಸಚಿವಾಲಯದಲ್ಲಿ ನಿಯಮದ ಪ್ರಕಾರ ನೋಂದಣಿಯಾಗಿಲ್ಲದ ಕಾರಣ ಎಮಿಗ್ರೇಷನ್ ಆ್ಯಕ್ಟ್ 1983ಯನ್ನು ಉಲ್ಲಂಘಿಸಿರುತ್ತಾರೆ ಎಂದು ದೂರು ನೀಡಲಾಗಿದೆ.

ಇದನ್ನೂ ಓದಿ:ಎರಡು ಪ್ರಮುಖ ಆನ್‌ಲೈನ್ ಆಹಾರ ವಿತರಣಾ ಕಂಪನಿಗಳಿಗೆ ₹40 ಸಾವಿರ ದಂಡ

ABOUT THE AUTHOR

...view details