ಬೆಂಗಳೂರು :ಕಿರುತೆರೆಯ ಹಾಸ್ಯ ನಟ ಹಾಗೂ ರಿಯಾಲಿಟಿ ಶೋಗಳ ಖ್ಯಾತಿಯ ಕಾರ್ತಿಕ್ ವಿರುದ್ಧ ಜಾತಿನಿಂದನೆ ಆರೋಪ ಕೇಳಿ ಬಂದಿದ್ದು, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಭೋವಿ ಜನಾಂಗದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಲೋಕೇಶ್ ಎಂಬುವರು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದರು.
ಜಾತಿನಿಂದನೆ ಆರೋಪ: ಕಿರುತೆರೆ ಹಾಸ್ಯ ನಟ ಕಾರ್ತಿಕ್ ವಿರುದ್ಧ ಎಫ್ಐಆರ್
ಜಾತಿನಿಂದನೆ ಆರೋಪದಡಿ ಕಿರುತೆರೆ ಹಾಸ್ಯ ನಟ ಕಾರ್ತಿಕ್ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
Published : Oct 8, 2024, 10:39 AM IST
ಕಾರ್ಯಕ್ರಮದಲ್ಲಿ ಕಾರ್ತಿಕ್ ಬಳಸಿರುವ ಪದ ಭೋವಿ ಜನಾಂಗಕ್ಕೆ ನೋವುಂಟು ಮಾಡಿದೆ. ಆದ್ದರಿಂದ ಕಾರ್ತಿಕ್ ಮಾತ್ರವಲ್ಲದೆ ಸಂಭಾಷಣೆಕಾರ, ಕಾರ್ಯಕ್ರಮದ ನಿರ್ಮಾಪಕರು, ನಿರ್ದೇಶಕರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ತಮ್ಮ ದೂರಿನಲ್ಲಿ ಲೋಕೇಶ್ ಮನವಿ ಮಾಡಿದ್ದರು. ದೂರಿನನ್ವಯ ಕಾರ್ತಿಕ್ ಹಾಗೂ ಕಾರ್ಯಕ್ರಮದ ಆಯೋಜಕರ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಸಾವರ್ಕರ್ ಕುರಿತು ವಿವಾದಿತ ಹೇಳಿಕೆ ಆರೋಪ: ದಿನೇಶ್ ಗುಂಡೂರಾವ್ ವಿರುದ್ಧ ದೂರು