ಕರ್ನಾಟಕ

karnataka

ETV Bharat / state

ಬೆಂಗಳೂರು: 2 ವರ್ಷದ ಮಗುವಿನ ಮೇಲೆ ಪಿಟ್‌ಬುಲ್ ನಾಯಿ ದಾಳಿ: ಮಾಲೀಕನ ವಿರುದ್ಧ ಎಫ್ಐಆರ್ - PITBULL DOG ATTACK ON CHILD

ಮಗುವಿನ ಮೇಲೆ ಪಿಟ್‌ಬುಲ್ ನಾಯಿ ದಾಳಿ ಮಾಡಿ ಗಾಯಗೊಳಿಸಿದ ಸಂಬಂಧ ಶ್ವಾನದ ಮಾಲೀಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.

pitbull dog FIR AGAINST PITBULL DOG OWNER  BENGALURU  ಮಗುವಿನ ಮೇಲೆ ಪಿಟ್‌ಬುಲ್ ನಾಯಿ ದಾಳಿ  DOG ATTACK CASE
ಪಿಟ್‌ಬುಲ್ ನಾಯಿ (ETV Bharat)

By ETV Bharat Karnataka Team

Published : Dec 26, 2024, 11:43 AM IST

ಬೆಂಗಳೂರು:ಎರಡು ವರ್ಷದ ಮಗುವಿನ ಮೇಲೆ‌ ಪಿಟ್‌ಬುಲ್ ನಾಯಿ ದಾಳಿ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಡಿಸೆಂಬರ್ 23ರಂದು ಬಾಣಸವಾಡಿಯ ವೆಂಕಟಸ್ವಾಮಿ ಲೇಔಟ್‌ನಲ್ಲಿ ಘಟನೆ ನಡೆದಿದ್ದು, ನಾಯಿಯ ಮಾಲೀಕರ ವಿರುದ್ಧ ಬಾಣಸವಾಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಯಿ ದಾಳಿಯಿಂದ 2 ವರ್ಷದ ಹೆಣ್ಣು ಮಗುವಿನ ಭುಜಕ್ಕೆ ಗಂಭೀರವಾಗಿ ಗಾಯಗಳಾಗಿವೆ ಎಂದು ತಂದೆ ನಬ್ರಾಜ್ ದಮಾಲ್, ಶ್ವಾನದ ಮಾಲೀಕರ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನ ವಿವರ:ಗಾಯಾಳು ಮಗುವಿನ ಪೋಷಕರು ನೇಪಾಳ ಮೂಲದವರಾಗಿದ್ದು, ಬಾಣಸವಾಡಿಯ ವೆಂಕಟಸ್ವಾಮಿ ಲೇಔಟ್‌ನಲ್ಲಿ ವಾಸವಿದ್ದರು. ಅದೇ ಮನೆಯ ಪಕ್ಕದಲ್ಲೇ ವಾಸವಿರುವವರು ಪಿಟ್‌ಬುಲ್ ಹಾಗೂ ರಾಟ್‌ವೀಲ್ ತಳಿಯ ನಾಯಿಗಳನ್ನು ಸಾಕಿದ್ದರು. ಡಿಸೆಂಬರ್ 23ರಂದು ಸಂಜೆ 5.30ರ ವೇಳೆ ಮಗು ಎತ್ತಿಕೊಂಡಿದ್ದ ತಾಯಿ ಮನೆ ಬಳಿ ನಿಂತಿದ್ದಾಗ ಈ ವೇಳೆ ಏಕಾಏಕಿ ಪಕ್ಕದ ಮನೆಯಲ್ಲಿ ಸಾಕಿದ್ದ ಪಿಟ್ ಬುಲ್ ನಾಯಿ ದಾಳಿ ಮಾಡಿದೆ. ಮಗುವನ್ನು ನಾಯಿಯಿಂದ ರಕ್ಷಿಸಲು ತಾಯಿ ಯತ್ನಿಸಿದ್ದರಾದರೂ ಸಾಧ್ಯವಾಗಿಲ್ಲ. ಮಗುವಿನ ಭುಜಕ್ಕೆ ಕಚ್ಚಿ ನಾಯಿ ಗಾಯಗೊಳಿಸಿದೆ ಎಂದು ದೂರು ನೀಡಲಾಗಿದೆ.

ಇದನ್ನೂ ಓದಿ:ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನನ್ನು ಎಳೆದೊಯ್ದು ಕೊಂದು ತಿಂದ ಹುಲಿ

ಸದ್ಯ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, 80 ಸಾವಿರ ರೂ. ಬಿಲ್ ಆಗಿದೆ. ನಾಯಿ ಮಾಲೀಕನ ನಿರ್ಲಕ್ಷ್ಯ ದಿಂದ ಘಟನೆ ನಡೆದಿದೆ ಎಂದು ಗಾಯಾಳು ಮಗುವಿನ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ:ಬೆಳಗಾವಿ: ಅಲಖನೂರ ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ಆನೆ ತುಳಿದು ಮಾವುತ ಸಾವು

ABOUT THE AUTHOR

...view details