ಕರ್ನಾಟಕ

karnataka

ETV Bharat / state

ಆಸ್ತಿ ದಾಖಲೆ ಡಿಜಿಟಲ್ ಸ್ಕ್ಯಾನಿಂಗ್​ ವೇಳೆ ಅಕ್ರಮ: ಎಫ್ಐಆರ್ ದಾಖಲು - bengalore

ಆಸ್ತಿ ದಾಖಲೆ ಡಿಜಿಟಲ್ ಸ್ಕ್ಯಾನಿಂಗ್ ವೇಳೆ ಅಕ್ರಮ ಮಾಡಲು ಮುಂದಾದ ಆರೋಪದಡಿ ಅಧಿಕಾರಿ ಮತ್ತು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ.

ಆಸ್ತಿ ದಾಖಲೆ ಡಿಜಿಟಲ್ ಸ್ಕ್ಯಾನಿಂಗ್​ ವೇಳೆ ಅಕ್ರಮ
ಆಸ್ತಿ ದಾಖಲೆ ಡಿಜಿಟಲ್ ಸ್ಕ್ಯಾನಿಂಗ್​ ವೇಳೆ ಅಕ್ರಮ

By ETV Bharat Karnataka Team

Published : Feb 18, 2024, 10:46 PM IST

ಬೆಂಗಳೂರು: ಬಿಬಿಎಂಪಿಯ ಆರ್.ಆರ್ ನಗರ ವ್ಯಾಪ್ತಿಯಲ್ಲಿ ಆಸ್ತಿ ದಾಖಲೆ ಡಿಜಿಟಲ್ ಸ್ಕ್ಯಾನಿಂಗ್ ವೇಳೆ ಅಕ್ರಮ ಮಾಡಲು ಮುಂದಾದ ಅಧಿಕಾರಿ ಹಾಗೂ ಅಕ್ರಮ ಆಸ್ತಿ ಮಾಲೀಕನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಆರ್.ಆರ್ ನಗರ ವಲಯದಲ್ಲಿನ ಉಪ ವಿಭಾಗದ ಸಹ ಕಂದಾಯ ಅಧಿಕಾರಿ ಕಚೇರಿಯಲ್ಲಿ ಎಫ್.ಡಿ.ಎ ನೌಕರ ವಾರ್ಡ್ ನಂ.160ರಲ್ಲಿನ ಹಲಗೆವಡೇರಹಳ್ಳಿಯಲ್ಲಿ 'ಎ'ರಿಜಿಸ್ಟರ್ ಪುಸ್ತಕ ಡಿಜಿಟಲ್ ಸ್ಕ್ಯಾನಿಂಗ್ ಮಾಡುವ ಸಂದರ್ಭದಲ್ಲಿ ಅಕ್ರಮವಾಗಿ ವ್ಯಕ್ತಿಯೊಬ್ಬರ ಆಸ್ತಿ ವಿವರವನ್ನು ನಮೂದು ಮಾಡಿದ ಆರೋಪ ಕೇಳಿ ಬಂದಿದೆ. ಅಕ್ರಮದ ಬಗ್ಗೆ ಪಾಲಿಕೆ ಅಧಿಕಾರಿಗಳ ಗಮನಕ್ಕೆ ಬಂದ ನಂತರ ಅವರ ವಿರುದ್ಧ ಫೆ.14ರಂದು ಎ.ಆ‌ರ್.ಒ ಅರುಣ್ ಕುಮಾ‌ರ್ ಎಂಬುವರು ಆರ್.ಆರ್. ನಗರ ಪೊಲೀಸ್‌ ಠಾಣೆಗೆ ದೂರು‌ ನೀಡಿದ್ದು, ಅದರನ್ವಯ ಎಫ್.ಡಿ.ಎ ಹಾಗೂ ಅಕ್ರಮ ನಮೂದಾದ ಆಸ್ತಿ ಮಾಲೀಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.

2023ರ ನವೆಂಬ‌ರ್ ತಿಂಗಳಿನಿಂದ ಆ‌ರ್.ಆ‌ರ್.ನಗರ ಕಚೇರಿಯಲ್ಲಿ, ಆಸ್ತಿ ವಹಿಗಳನ್ನು ಕಂಪ್ಯೂಟರೈಸ್ ಮಾಡುವ ಸಲುವಾಗಿ ಎಲ್ಲಾ ವಹಿಗಳನ್ನು ಕಂಪ್ಯೂಟರ್ನಲ್ಲಿ ಸ್ಕ್ಯಾನ್ ಮಾಡುವ ಕಾರ್ಯ ಪ್ರಾರಂಭ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹಲಗೆವಡೇರಹಳ್ಳಿ, ಗ್ರಾಮಕ್ಕೆ ಸಂಬಂಧಿಸಿದ 'ಎ' ಖಾತಾ ವಹಿ ಪುಸ್ತಕವನ್ನು ಸ್ಕ್ಯಾನ್ ಮಾಡಲಾಗಿತ್ತು. ಆ ಸಮಯದಲ್ಲಿ, ವ್ಯಾಲ್ಯೂಮ್ ನಂ.38ರ 'ಎ' ಖಾತಾ ಪುಸ್ತಕ ವಹಿಯಲ್ಲಿ ಪುಟ ಸಂಖ್ಯೆ 122ನ್ನು ಸ್ಕ್ಯಾನ್ ಮಾಡಿದಾಗ ಅದರಲ್ಲಿ ಕ್ರ.ಸಂ. 7361 ರಲ್ಲಿ, ಕಿರಣ್ ರಾಜ್ ಹೆಸರು ಇದ್ದು, ಕ್ರ.ಸಂ. 7362 ರಲ್ಲಿ, ಯಾವುದೇ ಹೆಸರು ದಾಖಲಾಗಿರಲಿಲ್ಲ. ಆದರೆ ಅದರ ಕೆಳಭಾಗ ಕ್ರ.ಸಂ. 7363 ರಲ್ಲಿ, ಆದಿ ನಾರಾಯಣಶೆಟ್ಟಿ, ನಟರಾಜ್ ಎಂಬ ಹೆಸರು ನಮೂದಾಗಿರುತ್ತದೆ.

ಕ್ರ.ಸಂ. 7362 ರಲ್ಲಿ, ಯಾವುದೇ ಹೆಸರು ದಾಖಲಾಗಿರದ ಕಾರಣ ಇದನ್ನೇ ಬಂಡವಾಳ ಮಾಡಿಕೊಂಡ ಪ್ರಥಮ ದರ್ಜೆ ಸಹಾಯಕ ಹಾಗೂ ವಾರ್ಡ್ ನಂ.160ರ ವಿಷಯ ನಿರ್ವಾಹಕ, ಕ್ರ.ಸಂ.7362ರಲ್ಲಿ ಖಾಲಿ ಇದ್ದ ಸ್ಥಳದಲ್ಲಿ 66/1 ಹಾಗೂ 9/5 ಎಂಬ, 40x60 ಅಳತೆಯ ನಿವೇಶನದ ವಿವರ ಹಾಗೂ ಅಕ್ರಮವಾಗಿ ಆಸ್ತಿ ಮಾಲೀಕನ ಹೆಸರನ್ನು ನಮೂದಿಸಿದ್ದರು. ಫೆ.12ರಂದು ಎ.ಆ‌ರ್.ಒ ಅರುಣ್ ಕುಮಾರ್ ಪರಿಶೀಲನೆ ನಡೆಸಿದಾಗ ಈ ಅಕ್ರಮ ಗಮನಕ್ಕೆ ಬಂದಿದೆ.

ಹೀಗಾಗಿ ಎ.ಆರ್.ಓ ಅರುಣ್ ಕುಮಾರ್, "ಸರ್ಕಾರಿ ಕಡತವನ್ನು ಅಕ್ರಮವಾಗಿ ತಿದ್ದುಪಡಿ ಮಾಡಿ ಯಾವುದೇ ನಿಯಮಗಳನ್ನು ಪಾಲಿಸದೆ ಅಕ್ರಮ ನಮೂದಾದ ಆಸ್ತಿ ಮಾಲೀಕನ ಜೊತೆ ಸೇರಿಕೊಂಡು ಪ್ರಥಮ ದರ್ಜೆ ಸಹಾಯಕ ಸರ್ಕಾರಿ ಕಡತದಲ್ಲಿ, ಆತನ ಹೆಸರನ್ನು ಅಕ್ರಮವಾಗಿ ಉಲ್ಲೇಖಿಸಿ ಯಾವುದೇ ದಾಖಲಾತಿಗಳನ್ನು ಪಡೆದು ಕಡತದಲ್ಲಿ ಇಟ್ಟುಕೊಳ್ಳದೇ ವಂಚನೆ ಮತ್ತು ಮೋಸ ಮಾಡಿ ಕರ್ತವ್ಯಲೋಪ ಎಸಗಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ:35 ಸಾವಿರ ಕೋಟಿ ರೂ. ಬೆಳೆ ನಷ್ಟ ಆಗಿದ್ದು, ಕೇಂದ್ರದಿಂದ ಬರ ಪರಿಹಾರ ಒಂದು ರೂಪಾಯಿ ಸಹ ಬಿಡುಗಡೆ ಇಲ್ಲ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details