ಕರ್ನಾಟಕ

karnataka

ETV Bharat / state

ರಾಮನಗರ: ಮಹಿಳಾ ಕಾನ್ಸ್​ಟೇಬಲ್​​​ ಆತ್ಮಹತ್ಯೆ - ಮೈಕೋ ಲೇಔಟ್ ಠಾಣೆ

ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮಂಜುಳಾ ಅವರು ತಮ್ಮ ಗ್ರಾಮಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Lady Constable commits suicide
ಮಹಿಳಾ ಕಾನ್​ಸ್ಟೇಬಲ್​ ಮಂಜುಶ್ರೀ

By ETV Bharat Karnataka Team

Published : Feb 17, 2024, 10:55 AM IST

Updated : Feb 17, 2024, 3:08 PM IST

ರಾಮನಗರ:ಮಹಿಳಾ ಕಾನ್ಸ್​ಟೇಬಲ್​ ಒಬ್ಬರು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರದ ಹಾರೋಹಳ್ಳಿ ದ್ಯಾವಸಂದ್ರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. 29 ವರ್ಷದ ಮಹಿಳಾ ಕಾನ್ಸ್​​ಟೇಬಲ್​​​ ಮಂಜುಶ್ರೀ​ ಆತ್ಮಹತ್ಯೆ ಮಾಡಿಕೊಂಡಿದ್ದು , ಅವರು ಬೆಂಗಳೂರಿನ ಮೈಕೋ ಲೇಔಟ್ ಪೊಲೀಸ್​ ಠಾಣೆಯಲ್ಲಿ ಕಾನ್ಸ್​ಟೇಬಲ್​​​ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ನಿಯೋಜನೆಯಡಿ ಶಿವಾಜಿನಗರ ಪೋಲಿಸ್ ಠಾಣೆಗೆ ವರ್ಗಾವಣೆಗೊಂಡಿದ್ದರು.

ತಮ್ಮ ಗ್ರಾಮಕ್ಕೆ ಬಂದಿದ್ದ ಅವರು ಶುಕ್ರವಾರ ತಡರಾತ್ರಿ ತಮ್ಮ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಹಾರೋಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಸಿಂಧನೂರು: ಹಾಸ್ಟೆಲ್​ನಲ್ಲಿ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ, ವಾರ್ಡನ್ ಮತ್ತು ಅಧಿಕಾರಿ ವಿರುದ್ಧ ದೂರು ದಾಖಲು

Last Updated : Feb 17, 2024, 3:08 PM IST

ABOUT THE AUTHOR

...view details