ಮಾವಿನ ಫಸಲು ಕುಸಿತದಿಂದ ಹೈರಾಣಾದ ರೈತರು ದಾವಣಗೆರೆ :ರಾಜ್ಯದಲ್ಲಿಮಳೆ ಇಲ್ಲದೆ ಬಿಸಿಲು ಹೆಚ್ಚಾದ ಕಾರಣ ಮಾವಿನ ಫಸಲು ಕುಸಿತ ಕಂಡಿದೆ. ಇಷ್ಟೊತ್ತಿಗೆ ಮಾರುಕಟ್ಟೆಯಲ್ಲಿ ತನ್ನ ದರ್ಬಾರ್ ಆರಂಭಿಸಬೇಕಾಗಿದ್ದ ಮಾವಿನ ಕಡಿಮೆ ಫಸಲು ಮತ್ತು ಬೆಲೆಯಿಂದ ರೈತರು ಹೈರಾಣಾಗಿದ್ದಾರೆ.
ರಾಜ್ಯದಲ್ಲೇ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಮಾವು ಬೆಳೆಯುವುದರಲ್ಲಿ ಕೋಲಾರ ಜಿಲ್ಲೆ ನಂತರ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಸುಮಾರು 5 ಸಾವಿರ ಎಕರೆಯಲ್ಲಿ ಮಾವು ಬೆಳೆಯಲಾಗುತ್ತದೆ. ದುರಂತ ಎಂದರೇ ಈ ಬಾರಿ ಮಳೆ ಬರದಿರುವುದರಿಂದ ಮಾವಿನ ಫಸಲು ಕೈಕೊಟ್ಟಿದೆ. ಇದರ ನಡುವೆ ಬಿಸಿಲು ಹೆಚ್ಚಿರುವ ಕಾರಣ ನೀರಾವರಿ ಮೂಲಕ ಬೆಳೆದ ಮಾವು ಸ್ವಲ್ಪ ಮಾತ್ರ ರೈತರ ಕೈಸೇರಿದೆ. ಮಾವಿನ ತಳಿಗಳಲ್ಲೇ ಎಲ್ಲರಿಗೂ ಪ್ರಿಯವಾದ ಬಾದಾಮಿ ಮಾವಿನ ಹಣ್ಣು ಕಾಣೆಯಾಗಿದೆ. ಬದಲಾಗಿ ತೋತಪುರಿ ಹಣ್ಣು ಅಲ್ಪ ಪ್ರಮಾಣದಲ್ಲಿ ರೈತರಿಗೆ ಸಿಕ್ಕಿದೆ. ಆದರೆ ಈ ಹಣ್ಣಿಗೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಇರುವುದರಿಂದ ರೈತರು ಕಂಗಾಲಾಗಿದ್ದಾರೆ.
ಈ ಕುರಿತು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ರೈತ ಜಾಬೀರ್ ಅವರು, ಸಾಮಾನ್ಯವಾಗಿ ಮಾರ್ಚ್ ಕೊನೆ ಭಾಗದಲ್ಲಿ ಬಿಸಿಲು ಆರಂಭವಾಗುತ್ತಿತ್ತು. ಆದರೆ ಈ ಬಾರಿ ಫೆಬ್ರವರಿ ತಿಂಗಳಿನಿಂದ ಬಿಸಿಲು ಹೆಚ್ಚಾದ ಕಾರಣ ಮಾವಿನ ಬೆಳೆ ಕಮ್ಮಿ ಬಂದಿದೆ. ಬಾದಾಮಿ ಹಣ್ಣು ಕಾಣೆಯಾಗಿದ್ದು, ತೋತಪುರಿ ಹಣ್ಣು ಸ್ವಲ್ಪ ಪ್ರಮಾಣದಲ್ಲಿ ಸಿಕ್ಕಿದೆ. ಕೆಜಿಗೆ 27-28 ಕೆಜಿ ಕಾಯಿ ಇದ್ದು, ಬಾದಾಮಿ 65-66 ರೂಪಾಯಿ ಹಸಿ ಕಾಯಿ ಇದೆ. ಇದೀಗ ಬಾದಾಮಿ ಹಣ್ಣು ಇಲ್ಲದೇ ಇರುವುದು ರೈತರಿಗೆ ಸಂಕಷ್ಟ ಎದುರಾಗಿದೆ. ಕಳೆದ ಬಾರಿ ತೋತಪುರಿ 27-28 ಕೆಜಿಗೆ ಇತ್ತು. ಈ ವರ್ಷ ಬೆಲೆ ಕುಸಿತದ ಜೊತೆಗೆ ಫಸಲು ಕೂಡ ಕಡಿಮೆ ಇದೆ. ಈ ಬಾರಿ ಬಾದಾಮಿ ಹಣ್ಣಿಗೆ 66 ರೂಪಾಯಿ ಕೆಜಿ ಇದ್ದರೂ ಸಿಗುತ್ತಿಲ್ಲ ಎಂದರು ಹೇಳಿದರು.
ಇದೇ ವೇಳೆ ಸ್ಥಳೀಯರಾದ ಪ್ರಕಾಶ್ ಅವರು ಮಾತನಾಡಿ, ರಾಜ್ಯದಲ್ಲಿ ಸಂತೇಬೆನ್ನೂರು ಮಾವು ಬೆಳೆ ಬೆಳೆಯುವಲ್ಲಿ ಎಂಟು ವರ್ಷಗಳ ಹಿಂದೆ ಮೊದಲನೇ ಸ್ಥಾನದಲ್ಲಿತ್ತು. ಎಂಟು ವರ್ಷಗಳ ಬಳಿಕ ಕೋಲಾರ ಮೊದಲ ಸ್ಥಾನ ಪಡೆದಿದೆ. "ಮಳೆ ಇಲ್ಲದ ಕಾರಣ ಬೆಳೆ ಇಲ್ಲ. ಗಿಡಕ್ಕೆ ರೋಗ ರುಜಿನಗಳ ಕಾಟದ ಜೊತೆಗೆ ಹಲವು ವರ್ಷಗಳಿಂದ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ. ಫಸಲು ಕಡಿಮೆ ಬರಲು ಮಳೆ ಕಾರಣ ಎಂದು ಹೇಳಬಹುದು ಎಂದರು.
ಇದನ್ನೂ ಓದಿ :ಸಾಂಪ್ರದಾಯಿಕ ಬೆಳೆಗಳಿಗೆ ಗುಡ್ಬೈ; ಎನ್ಜಿಓ ಮಾರ್ಗದರ್ಶನದಲ್ಲಿ ಹಣ್ಣು ಬೆಳೆದು ಯಶಸ್ವಿಯಾದ ಹಾವೇರಿ ರೈತ