ಕರ್ನಾಟಕ

karnataka

ETV Bharat / state

ಹಾವೇರಿ: ಭೂಸ್ವಾಧೀನಕ್ಕೆ ಬಂದ ಅಧಿಕಾರಿಗಳೆದುರು ಆತ್ಮಹತ್ಯೆಗೆ ಯತ್ನಿಸಿದ ರೈತ - ಹಾವೇರಿ

ರಾಜ್ಯ ಹೆದ್ದಾರಿಗೆ ತನ್ನ ಜಮೀನು ನೀಡುವುದಿಲ್ಲ ಎಂದು ಗೋಗರೆದ ರೈತ ಅಧಿಕಾರಿಗಳೆದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

Farmer attempt to commits suicide in front of land acquisition officials Haveri
ಹಾವೇರಿ: ಭೂಸ್ವಾಧೀನಕ್ಕೆ ಬಂದ ಅಧಿಕಾರಿಗಳ ಮುಂದೆ ರೈತ ಆತ್ಮಹತ್ಯೆಗೆ ಯತ್ನ

By ETV Bharat Karnataka Team

Published : Feb 9, 2024, 9:58 PM IST

ಹಾವೇರಿ:ಗದಗ-ಹೊನ್ನಾಳಿರಾಜ್ಯ ಹೆದ್ದಾರಿ ಕಾಮಗಾರಿಗೆ ಜಮೀನು ಭೂಸ್ವಾಧೀನಕ್ಕೆ ಬಂದ ಅಧಿಕಾರಿಗಳ ಮುಂದೆ ರೈತನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ನಡೆಯಿತು. ರಾಣೆಬೆನ್ನೂರು ತಾಲೂಕು ತಿಮ್ಮೇನಹಳ್ಳಿ ಗ್ರಾಮದ ಚಂದ್ರಪ್ಪ ಅಡವಿ ಆತ್ಮಹತ್ಯೆಗೆ ಯತ್ನಿಸಿದವರು. ರಾಜ್ಯ ಹೆದ್ದಾರಿ ಉಪವಿಭಾಗದ ರಾಣೆಬೆನ್ನೂರು ಎಇಇ ವಾಸುದೇವ ಅವರ ಎದುರು ಘಟನೆ ನಡೆಯಿತು.

ವಿವರ: ನ್ಯಾಯಾಲಯದ ನಿರ್ದೇಶನದಂತೆ ಅಧಿಕಾರಿಗಳು ರೈತನ ಜಮೀನು ಭೂಸ್ವಾಧೀನಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಹೆದ್ದಾರಿಗೆ ಜಾಗ ಕೊಡುವುದಿಲ್ಲ ಎಂದು ರೈತ ನೆಲಕ್ಕೆ ಬಿದ್ದು ಗೋಗರೆದರು. ಅಧಿಕಾರಿಗಳು ಧನಾತ್ಮಕವಾಗಿ ಪ್ರತಿಕ್ರಿಯಿಸದ ಕಾರಣ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ರಾಣೆಬೆನ್ನೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details