ತುಮಕೂರು:ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಂದು 73ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಸಚಿವರಿಗೆ ಕೊಬ್ಬರಿ ಹಾರ ಹಾಕಿ, ಬೆಳ್ಳಿ ಕಿರೀಟ ತೊಡಿಸಿ, ಬೆಳ್ಳಿ ಖಡ್ಗ ಕೊಟ್ಟು ಶುಭ ಕೋರಿದ್ದಾರೆ. ಹೆಗ್ಗೆರೆ ಗ್ರಾಮದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಿತು.
ಸಚಿವ ಪರಮೇಶ್ವರ್ ಬೃಹತ್ ಕೇಕ್ ಕತ್ತರಿಸಿದರು. ಸಚಿವರ ನಿವಾಸದೆದುರು ಹೆಚ್ಚಿವನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ತಂದೆ ದಿವಂಗತ ಗಂಗಾಧರಯ್ಯ ಪುತ್ಥಳಿಗೆ ಪರಮೇಶ್ವರ್ ಮಾಲಾರ್ಪಣೆ ಮಾಡಿದರು.