ಕರ್ನಾಟಕ

karnataka

ETV Bharat / state

75 ವರ್ಷಗಳಿಂದ ಜೋಪಡಿಯಲ್ಲೇ ಸಂದಿಗ್ಧ ಬದುಕು: ಮೂಲ ಸೌಲಭ್ಯಗಳಿಲ್ಲದೆ ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ಕುಟುಂಬಗಳ ನಿರ್ಧಾರ - boycott Lok Sabha poll - BOYCOTT LOK SABHA POLL

ನಂಜನಗೂಡು ತಾಲೂಕಿನ ಕುಟುಂಬಗಳೆರಡು 75 ವರ್ಷಗಳಿಂದ ಯಾವುದೇ ಮೂಲ ಸೌಕರ್ಯಗಳಿಲ್ಲದೆ ಜೋಪಡಿಯಲ್ಲೇ ಜೀವನ ಸಾಗಿಸುತ್ತಿವೆ.

ಜೋಪಡಿ
ಜೋಪಡಿ

By ETV Bharat Karnataka Team

Published : Mar 27, 2024, 12:53 PM IST

Updated : Mar 27, 2024, 2:50 PM IST

75 ವರ್ಷಗಳಿಂದ ಜೋಪಡಿಯಲ್ಲೇ ಸಂದಿಗ್ಧ ಬದುಕು

ಮೈಸೂರು:ಮೂರು ತಲೆಮಾರುಗಳಿಂದ ಜೋಪಡಿಯಲ್ಲೇ ಸಂಕಷ್ಟದ ಬದುಕು ಸಾಗಿಸುತ್ತಿರುವ ಕುಟುಂಬಗಳು, ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿವೆ.

ವಿದ್ಯುತ್​ ಸಂಪರ್ಕ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ತಲೆ ಮೇಲೆ ಸೂರಿಲ್ಲ, ಇಡೀ ಗ್ರಾಮದ ಚರಂಡಿ ನೀರು ಮನೆ ಮುಂದೆ ಬಂದು ನಿಲ್ಲುತ್ತೆ, ಮಕ್ಕಳಿಗೆ ಶಿಕ್ಷಣ ಕೊಡಿಸಲು ಸೌಲಭ್ಯಗಳೂ ಸಹ ಇಲ್ಲ. ಇದು ಕಳೆದ ಏಳು ದಶಕ ಹಾಗೂ ಮೂರು ತಲೆಮಾರುಗಳಿಂದ ಹೀನಾಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಪುಟ್ಟಮ್ಮ ಮತ್ತು ಎಲ್ಲಮ್ಮ ಎಂಬುವರ ಎರಡು ಕುಟುಂಬಗಳ ದುಃಸ್ಥಿತಿ.

ಶೆಡ್​ ಮನೆಯಲ್ಲಿ ವಾಸಿಸುತ್ತಿರುವ ಕುಟುಂಬಗಳು

ನಂಜನಗೂಡು ತಾಲೂಕಿನ ಹೊರಳವಾಡಿ ಹೊಸೂರು ಗ್ರಾಮದಲ್ಲಿ ವಾಸವಿರುವ ಹಂದಿಜೋಗಿ ಕುಟುಂಬಗಳ ಸಂಕಷ್ಟಕ್ಕೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಸುಮಾರು 75 ವರ್ಷಗಳಿಂದ ಜೋಪಡಿಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಬದುಕು ಸಾಗಿಸುತ್ತಿರುವ ಈ ಕುಟುಂಬಗಳು ಚುನಾವಣೆ ಬಂದರೆ ಮತದ ಹಕ್ಕು ಚಲಾಯಿಸುತ್ತಾರೆ. ಆದರೆ, ಮೂಲಭೂತ ಸೌಕರ್ಯಗಳಿಲ್ಲದೆ ನಿರಂತರವಾಗಿ ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ. ಚುನಾವಣೆ ಬಂದರೆ ಮತಕ್ಕಾಗಿ ಜೋಪಡಿ ಬಾಗಿಲು ಬಡಿಯುವ ಜನಪ್ರತಿನಿಧಿಗಳಿಗೆ ಇವರ ಬವಣೆ ಮಾತ್ರ ಕಾಣಿಸುತ್ತಿಲ್ಲ.

ಮನೆ ಮುಂದೆಯೇ ಚರಂಡಿ ನೀರು ನಿಂತಿರುವುದು

ನಮಗೆ ಮನೆ ಮತ್ತು ಮೂಲಭೂತ ಸೌಕರ್ಯಗಳನ್ನು ನೀಡಿ ಎಂದು ಸಾಕಷ್ಟು ಬಾರಿ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಈ ಬಾರಿ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ವಿದ್ಯುತ್​ ಸಂಪರ್ಕ ಇಲ್ಲದ ಕಾರಣ ಮನೆಯಲ್ಲಿ ಓದು, ಬರಹ ಸಾಧ್ಯವಿಲ್ಲವೆಂದು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಗ್ರಾಮದ ಚರಂಡಿ ನೀರೆಲ್ಲಾ ಜೋಪಡಿಗಳ ಮುಂದೆ ಸಂಗ್ರಹವಾಗಿ ದುರ್ವಾಸನೆ ಬರುತ್ತಿದ್ದರೂ ಅದನ್ನು ಸಹಿಸಿಕೊಂಡೇ ಜೀವನ ಸಾಗಿಸುವಂತಹ ದುಸ್ಥಿತಿ ಇದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇವರ ಸಂಕಷ್ಟಕ್ಕೆ ಸ್ಪಂದಿಸಿ ಮೂಲಸೌಕರ್ಯ ಒದಗಿಸಬೇಕಿದೆ.

ಇದನ್ನೂ ಓದಿ:ಬೆಂಗಳೂರು: ಅನುಮತಿ ಪಡೆಯದೆ 20 ಕೊಳವೆಬಾವಿ ಕೊರೆದವರ ವಿರುದ್ಧ ಕ್ರಮಕ್ಕೆ ಮುಂದಾದ ಜಲಮಂಡಳಿ - Illegal Borewells

Last Updated : Mar 27, 2024, 2:50 PM IST

ABOUT THE AUTHOR

...view details