ಕರ್ನಾಟಕ

karnataka

ETV Bharat / state

ಶಿಗ್ಗಾಂವಿಯಲ್ಲಿ ಬಿಜೆಪಿ ಓಟಕ್ಕೆ ಬ್ರೇಕ್​ ಹಾಕಿದ ಯಾಸೀರ್​ ಖಾನ್ ಪಠಾಣ್: ಈ ಅಂಶಗಳೇ ಗೆಲುವಿಗೆ ಕಾರಣ! - SHIGGAON BY ELECTION

ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕೈ ಅಭ್ಯರ್ಥಿಗಳ ಗೆಲುವಿಗೆ ಕಾರಣಗಳೇನು ಎಂಬ ಮಾಹಿತಿ ಇಲ್ಲಿದೆ.

ಯಾಸೀರ್​ ಖಾನ್ ಪಠಾಣ್
ಯಾಸೀರ್​ ಖಾನ್ ಪಠಾಣ್ (ETV Bharat)

By ETV Bharat Karnataka Team

Published : Nov 23, 2024, 9:17 PM IST

ಹಾವೇರಿ: ತೀವ್ರ ಕುತೂಹಲ ಕೆರಳಿಸಿದ್ದ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ವಿರುದ್ಧ ಸೋಲುಂಡಿದ್ದ ಯಾಸೀರ್​ ಖಾನ್ ಪಠಾಣ್,​ ಉಪ ಸಮರದಲ್ಲಿ ಭರತ್​ ಬೊಮ್ಮಾಯಿ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡಿದ್ದಾರೆ. ಈ ಮೂಲಕ ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸಲು ಸಜ್ಜಾಗಿದ್ದಾರೆ.

ಮೊದಲ 7 ಸುತ್ತುಗಳಲ್ಲಿ ಬಿಜೆಪಿ ಅಭ್ಯರ್ಥಿ ಭರತ್​ ಮುನ್ನಡೆ ಸಾಧಿಸಿದ್ದರು. ನಂತರ ಸತತ 18 ಸುತ್ತುಗಳಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡು, ಭರತ್​ ಬೊಮ್ಮಾಯಿ ಅವರನ್ನು 13,448 ಮತಗಳ ಅಂತರದಿಂದ ಸೋಲಿಸಿದರು. ಒಟ್ಟಾರೆ ಯಾಸೀರ್​ ಖಾನ್ ಪಠಾಣ್ 1,00,756 ಮತ ಪಡೆದಿದ್ದು, ಭರತ್​ ಬೊಮ್ಮಾಯಿ 87,308 ಮತ ಪಡೆದಿದ್ದಾರೆ.

ಯಾಸೀರ್​ ಖಾನ್ ಪಠಾಣ್ ಗೆಲುವಿಗೆ ಕಾರಣಗಳೇನು?:

  • ಸಚಿವ ಸತೀಶ್ ಜಾರಕಿಹೊಳಿ ಶಿಗ್ಗಾಂವಿಯಲ್ಲೇ ವಾಸ್ತವ್ಯ ಹೂಡಿ ತಮ್ಮದೇ ಚುನಾವಣೆ ಎಂಬಂತೆ ಅಹಿಂದ ಮತದಾರರ ಓಲೈಕೆ ಮಾಡಿದ್ದು.
  • ಬಿಜೆಪಿ ನಂಬಿಕೊಂಡಿದ್ದ ಲಿಂಗಾಯತ ಮತದಾರಲ್ಲಿ ಸ್ವಲ್ಪ ಮತದಾರರು‌‌ ಕೈ ಪರ ಮತ ಚಲಾಯಿಸಿದ್ದು.
  • ಕಾಂಗ್ರೆಸ್ ಪಾಳಯ ಶಿಗ್ಗಾಂವಿಯಲ್ಲಿಯೇ ಬೀಡು ಬಿಟ್ಟು ಭರ್ಜರಿ ಕ್ಯಾಂಪೇನ್ ಮಾಡಿದ್ದು ಪಠಾಣ್​ಗೆ ವರವಾಯಿತು.
  • ಅಜ್ಜಂಪೀರ್ ಖಾದ್ರಿ ಮನವೊಲಿಸಿ ಚುನಾವಣೆ ಎದುರಿಸಿದ ಹಿನ್ನೆಲೆ ಪಠಾಣ್​​​ ಗೆಲುವು ಸುಲಭವಾಯಿತು.
  • ಬಿಜೆಪಿ ಪ್ರಸ್ತಾಪಿಸಿದ್ದ ವಕ್ಪ್ ವಿಚಾರಗಳು ಅವರಿಗೆ ಮತಗಳಾಗಿ ಮಾರ್ಪಡದಿರುವುದು.
  • ಬಸವರಾಜ ಬೊಮ್ಮಾಯಿ ಮೊದಲ ಸಲ ಪ್ರಬಲವಾಗಿ ಪ್ರಯೋಗಿಸಿದ್ದ ಹಿಂದುತ್ವ ಅಸ್ತ್ರ ವಿಫಲವಾಯಿತು.
  • ಪಂಚಮಸಾಲಿ ಮತದಾರರು ಕಾಂಗ್ರೆಸ್​ ಕಡೆ ವಾಲಿದ್ದು.
  • ಪ್ರತಿ ಸಲ ಬಸವರಾಜ ಬೊಮ್ಮಾಯಿ ಪಾಲಾಗ್ತಿದ್ದ ಶೇ 10ರಷ್ಟು ಮುಸ್ಲಿಂ ಮತಗಳೂ ಈ ಬಾರಿ ಕಾಂಗ್ರೆಸ್ ಕೈ ಹಿಡಿದಿದ್ದು.
  • ಕುರುಬ ಸಮುದಾಯದವರು ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ನಿಂತಿರುವುದು ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ:ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ನನ್ನನ್ನು ಗೆಲ್ಲಿಸಿದ್ದಕ್ಕೆ ಧನ್ಯವಾದ : ಯಾಸೀರ್​ ಖಾನ್ ಪಠಾಣ್

ABOUT THE AUTHOR

...view details