ಕರ್ನಾಟಕ

karnataka

ETV Bharat / state

ಫಸಲಿನ ಮಧ್ಯೆ ಗಾಂಜಾ ಘಮಲು ; 26 ಕೆಜಿ ಗಾಂಜಾ ಜೊತೆ ವ್ಯಕ್ತಿ ಅರೆಸ್ಟ್ - GANJA PLANT SEIZE - GANJA PLANT SEIZE

ಚಾಮರಾಜನಗರ ತಾಲೂಕಿನ ಕುಂಟಗುಡಿ ಕಾಲೋನಿಯ ಜಮೀನಿನ ಫಸಲಿನ ಮಧ್ಯೆ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಬೆಳೆಯನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದು, ಆರೋಪಿಯನ್ನ ಬಂಧಿಸಿದ್ದಾರೆ.

Ganja plant
26 ಕೆಜಿ ಗಾಂಜಾ ಜೊತೆ ವ್ಯಕ್ತಿ ಅರೆಸ್ಟ್ (ETV Bharat)

By ETV Bharat Karnataka Team

Published : Oct 6, 2024, 4:43 PM IST

ಚಾಮರಾಜನಗರ :ಜಮೀನಿನಲ್ಲಿ ಫಸಲಿನ ಮಧ್ಯೆ ಅಕ್ರಮವಾಗಿ ಗಾಂಜಾ ಬೆಳೆದಿದ್ದನ್ನು ಅಬಕಾರಿ ಪೊಲೀಸರು ಪತ್ತೆಹಚ್ಚಿ, ಆರೋಪಿಯನ್ನ ಬಂಧಿಸಿರುವ ಘಟನೆ ತಾಲೂಕಿನ ಕುಂಟಗುಡಿ ಕಾಲೋನಿಯಲ್ಲಿ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ಆಯುಕ್ತ ನಾಗಶಯನ ಮಾರ್ಗದರ್ಶನದಲ್ಲಿ ಅಬಕಾರಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಹನುಮೇಗೌಡ ಎಂಬಾತ ತನ್ನ ಜಮೀನಿನಲ್ಲಿ ಬೆಳೆದಿದ್ದ ತಲಾ ಎಂಟು ಅಡಿಗೂ ಹೆಚ್ಚು ಎತ್ತರದ ಒಟ್ಟು 18 ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳ ತೂಕ 26 ಕೆಜಿಯಷ್ಟಿದೆ.

ಟೊಮೆಟೊ ಬೆಳೆ ನಾಶವಾಗಿರುವುದು (ETV Bharat)

ಬಂಧಿತನ ವಿರುದ್ಧ ಅಬಕಾರಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಹಿಂದೆಯೂ ಕೂಡ ಹನುಮೇಗೌಡ ಗಾಂಜಾ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದರು ಎಂದು ಅಬಕಾರಿ ಪೊಲೀಸರು ತಿಳಿಸಿದ್ದಾರೆ.

ಒಂಟಿ ಸಲಗ ದಾಳಿಗೆ ಫಸಲು‌ ನಾಶ :ಆಹಾರ ಅರಸಿ ಬಂದ ಒಂಟಿ ಸಲಗವೊಂದು ಜಮೀನಿಗೆ ಲಗ್ಗೆ ಇಟ್ಟು ತೆಂಗು, ಟೊಮೆಟೊ ಫಸಲನ್ನು ತುಳಿದು,‌ ತಿಂದು ನಾಶಪಡಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿಯಲ್ಲಿ ನಡೆದಿದೆ.

ಆನೆ ದಾಳಿಗೆ ತೆಂಗಿನಮರ ನಾಶವಾಗಿರುವುದು (ETV Bharat)

ಯಡವನಹಳ್ಳಿ ಗ್ರಾಮದ ಜವರನಾಯಕ ಎಂಬುವರಿಗೆ ಸೇರಿದ ಜಮೀನಿಗೆ ಒಂಟಿ ಸಲಗ ದಾಳಿ ಮಾಡಿ, 14 ತೆಂಗಿನ ಮರಗಳು, 1 ಎಕರೆ ಟೊಮೆಟೊ ಫಸಲನ್ನು ನಾಶಮಾಡಿದ್ದು, ಮಾಲೀಕರಿಗೆ ಅಪಾರ ನಷ್ಟ ಉಂಟಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯದಲ್ಲಿ ಈ ದಾಳಿ ನಡೆದಿದೆ.

ಇದನ್ನೂ ಓದಿ :ಚಿಕ್ಕಬಳ್ಳಾಪುರ: ಟೊಮ್ಯಾಟೊ ತೋಟದಲ್ಲಿ ಗಾಂಜಾ ಬೆಳೆದ ಆರೋಪಿ ಬಂಧನ, 17 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ - ganja plants

ABOUT THE AUTHOR

...view details