ಕರ್ನಾಟಕ

karnataka

ETV Bharat / state

ಧಾರವಾಡ: ಅಬಕಾರಿ ಇಲಾಖೆ ಅಧಿಕಾರಿಗಳಿಂದ 25 ಲಕ್ಷ ರೂ. ಮೌಲ್ಯದ ಅಕ್ರಮ ಸ್ಪಿರಿಟ್ ಟ್ಯಾಂಕರ್ ವಶ

ಧಾರವಾಡದಲ್ಲಿ 25 ಲಕ್ಷ ರೂ. ಮೌಲ್ಯದ ಅಕ್ರಮ ಸ್ಪಿರಿಟ್​​​ ಟ್ಯಾಂಕರ್​​ ವಶಕ್ಕೆ ಪಡೆಯುವ ಮೂಲಕ ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

Seizure of illegal spirit tanker
ಅಕ್ರಮ ಸ್ಪಿರಿಟ್ ಟ್ಯಾಂಕರ್ ವಶ

By ETV Bharat Karnataka Team

Published : Feb 29, 2024, 12:11 PM IST

Updated : Feb 29, 2024, 12:42 PM IST

ಅಬಕಾರಿ ಡಿಸಿ ಕೆ. ಅರುಣಕುಮಾರ ಮಾಹಿತಿ

ಧಾರವಾಡ:ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ 25 ಲಕ್ಷ ರೂ. ಮೌಲ್ಯದ ಅಕ್ರಮ ಸ್ಪಿರಿಟ್​​​ ಟ್ಯಾಂಕರ್​​ ವಶಕ್ಕೆ ಪಡೆದುಕೊಂಡಿದ್ದಾರೆ. ಸುಮಾರು 25 ಸಾವಿರ ಲೀಟರ್ ಸ್ಪಿರಿಟ್​ ತುಂಬಿದ್ದ ಟ್ಯಾಂಕರ್​ನ್ನು ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ಬಳಿ ವಶಕ್ಕೆ ಪಡೆಯಲಾಗಿದೆ.

ಧಾರವಾಡದಿಂದ ಅಂಕೋಲಾ ಮಾರ್ಗವಾಗಿ ಗೋವಾಕ್ಕೆ ಟ್ಯಾಂಕರ್​​ ಹೋಗುತ್ತಿತ್ತು. ಅನುಮಾನಗೊಂಡು ಕಲಘಟಗಿ ನಿರೀಕ್ಷಕರು ವಾಹನ ತಪಾಸಣೆ ನಡೆಸಿದಾಗ ಅಕ್ರಮ ಸ್ಪಿರಿಟ್​​ ಇರುವುದು ಖಚಿತವಾಗಿದೆ. ಸ್ಪಿರಿಟ್​ಗೆ ದಾಖಲೆ ಇಲ್ಲದ ಕಾರಣಕ್ಕೆ ವಾಹನ ಹಾಗೂ ಚಾಲಕನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡುತ್ತಿದ್ದಾರೆ.

ಒಂದೇ ವಾಹನಕ್ಕೆ ಎರಡು ನಂಬರ್ ಪ್ಲೇಟ್ ಅಳವಡಿಕೆ ಮಾಡಿದ್ದಾರೆ. KA28-AB 0142 ಹಾಗೂ MH 50 8888 ನಂಬರ್ ಇರುವ ವಾಹನ ಇದಾಗಿದೆ. ಮಾಲೀಕರ ಬಗ್ಗೆ ವಿಚಾರಣೆ ನಡೆಸಿದಾಗ ಸ್ಪಿರಿಟ್​ಗೆ ಯಾವುದೇ ದಾಖಲೆ ಇಲ್ಲ. ಸ್ಪಿರಿಟ್ ಸಾಗಾಣಿಕೆಗೆ ಇಲಾಖೆಯಿಂದ ಪರವಾನಿಗೆ ಬೇಕು. ಆದರೆ, ಯಾವುದೇ ಪರವಾನಗಿ ದಾಖಲೆ ಇರಲಿಲ್ಲ. ಗೋವಾ ಮೂಲದ ರಾಜು ಸಿಂಗ್​ ಎಂಬ ಮಾಲೀಕರಿಗೆ ಸೇರಿದ್ದು ಎಂದು ಗೊತ್ತಾಗಿದೆ. ಅಧಿಕೃತವಾಗಿ ಮಾಹಿತಿ ಪಡೆಯಲು ಒಂದು ತಂಡ ರಚನೆ ಮಾಡಿ ಗೋವಾಗೆ ಕಳುಹಿಸಲಾಗುತ್ತಿದೆ. ಮುಂದಿನ ವಿಚಾರಣೆ ಬಗ್ಗೆ ಎರಡು ದಿನದಲ್ಲಿ ತಿಳಿಸುವುದಾಗಿ ಅಬಕಾರಿ ಡಿಸಿ ಕೆ. ಅರುಣಕುಮಾರ ಮಾಹಿತಿ ನೀಡಿದ್ದಾರೆ‌.

ಇದನ್ನೂ ಓದಿ:ಸರಣಿ ಮನೆಗಳ್ಳತನ ಮಾಡುತ್ತಿದ್ದ ಖತರ್ನಾಕ್​ ಕಳ್ಳನ ಬಂಧನ: 25 ಲಕ್ಷ ಮೌಲ್ಯದ 531 ಗ್ರಾಂ ಚಿನ್ನಾಭರಣ ಜಪ್ತಿ

Last Updated : Feb 29, 2024, 12:42 PM IST

ABOUT THE AUTHOR

...view details