ಕರ್ನಾಟಕ

karnataka

ETV Bharat / state

ಎಲಿಫೆಂಟ್ ಕಾರಿಡಾರ್ ಅನುಕೂಲಗಳೇನು?: ತಜ್ಞರೊಂದಿಗೆ ಈಟಿವಿ ಭಾರತ್​ ಸಂದರ್ಶನ - Dr McCauley Karge

ಎಲಿಫೆಂಟ್ ಕಾರಿಡಾರ್ ಹಾಗೂ ಕಾಡಾನೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಆನೆ ತಜ್ಞೆ ಡಾ ಮೆಕಾಲೆ ಕಾರ್ಗೆ ಮಾಹಿತಿ ನೀಡಿದ್ದಾರೆ.

etv-bharat-interview-with-experts-on-elephant-corridor
ಎಲಿಫೆಂಟ್ ಕಾರಿಡಾರ್ ಅನುಕೂಲಗಳೇನು?: ತಜ್ಞರೊಂದಿಗೆ ಈಟಿವಿ ಭಾರತ್​ ಸಂದರ್ಶನ

By ETV Bharat Karnataka Team

Published : Feb 3, 2024, 3:59 PM IST

Updated : Feb 3, 2024, 4:42 PM IST

ತಜ್ಞೆ ಡಾ ಮೆಕಾಲೆ ಕಾರ್ಗೆ ಅವರೊಂದಿಗೆ ಸಂದರ್ಶನ

ಮೈಸೂರು: ಇತ್ತೀಚೆಗೆ ಆನೆಗಳು ಕಾಡಿನಿಂದ ನಾಡಿಗೆ ಲಗ್ಗೆ ಇಡುತ್ತಿವೆ. ಇದಕ್ಕೆ ಕಾರಣ, ಪರಿಹಾರ, ಎಲಿಫೆಂಟ್ ಕಾರಿಡಾರ್ ಎಂದರೇನು, ಅದರ ಅನುಕೂಲಗಳೇನು ಹಾಗೂ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಉದ್ದೇಶವೇನು ಹಾಗೂ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಕೇರಳಕ್ಕೆ ರೈಲ್ವೆ ಟ್ರ್ಯಾಕ್ ಅಳವಡಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ, ಇದರ ಅನುಕೂಲಗಳೇನು ಹಾಗೂ ತೊಂದರೆಗಳೇನು, ಜೊತೆಗೆ ಆನೆಗಳ ಜೀವನ ಶೈಲಿ ಹೇಗಿರುತ್ತದೆ. ಒಂಟಿ ಸಲಗ ಏಕೆ ಗುಂಪಿನಿಂದ ಹೊರಬರುತ್ತದೆ ಎಂಬ ಬಗ್ಗೆ ಸಂಶೋಧನೆ ನಡೆಸಿರುವ ತಜ್ಞೆ ಡಾ ಮೆಕಾಲೆ ಕಾರ್ಗೆ ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಆನೆಗಳು ಏಕೆ ಕಾಡಿನಿಂದ ಹೊರ ಬರುತ್ತವೆ?:ಇತ್ತೀಚೆಗೆ ಆನೆಗಳು ಕಾಡಿನಿಂದ ಹೊರಗೆ ಬರುತ್ತಿವೆ ಎಂದರೆ ತಪ್ಪಾಗುತ್ತದೆ. ಕಾಡು ಕಡಿಮೆ ಆಗುತ್ತಿರುವುದರಿಂದ ಆಹಾರ ಅರಸಿ, ಇನ್ನಿತರ ಕಾರಣಗಳಿಗೆ ಹೊರಗೆ ಬರುತ್ತವೆ. ಹಳ್ಳಿಗಳು ಸಹ ದೊಡ್ಡವಾಗುತ್ತಿವೆ. ಅಲ್ಲಿ ಏನು ಫೆನ್ಸ್ ಮತ್ತು ಟ್ರಂಚ್ ಗಳನ್ನು ಮಾಡುತ್ತಿದ್ದಾರೆಯೋ ಅವು ಆನೆಗಳಿಗೆ ಕಿರಿಕಿರಿ ಉಂಟುಮಾಡುತ್ತಿವೆ. ಕೃಷಿ ಪ್ರದೇಶಗಳು ಹೆಚ್ಚುತ್ತಿರುವುದು, ಜೊತೆಗೆ ಕಮರ್ಷಿಯಲ್ ಬೆಳೆಗಳನ್ನು ಬೆಳೆಯುತ್ತಿರುವುದು ಅವುಗಳಿಗೆ ಹೆಚ್ಚು ಕೆರಳಿಸುವಂತೆ ಮಾಡಿವೆ. ಹೀಗಾಗಿ ಸಾಮಾನ್ಯ ಆಹಾರ ಬೆಳೆಗಳನ್ನು ತಿನ್ನಲು ಅವು ಬರುವುದಿಲ್ಲ. ಅವು ಬರುವುದು ವಾಣಿಜ್ಯ ಬೆಳೆಗಳಾದ ಕಬ್ಬು, ಬಾಳೆ ಇಂತಹುಗಳನ್ನ ಅರಸಿ. ಯಾಕೆಂದರೆ ಅವು ತುಂಬಾ ರುಚಿಕರವಾಗಿರುತ್ತವೆ. ಅವುಗಳಿಗೆ ರುಚಿ ಗೊತ್ತಾದ ಮೇಲೆ ಪದೇ ಪದೆ ಬರುತ್ತವೆ. ಅದನ್ನು ತಡೆಯಲು ಪ್ರಯತ್ನ ಮಾಡಿದಾಗ ಮಾನವ ಮತ್ತು ಪ್ರಾಣಿ ಸಂಘರ್ಷ ಏರ್ಪಡುತ್ತದೆ ಎಂದು ತಜ್ಞರು ವಿವರಿಸಿದರು.

ಎಲಿಫೆಂಟ್ ಕಾರಿಡಾರ್ ಎಂದರೇನು?:ಎಲಿಫೆಂಟ್ ಕಾರಿಡಾರ್ ಎಂದರೆ ಆನೆಗಳ ಟೆರಿಟರಿ ಮುಂಚೆ ಹೆಚ್ಚಿತ್ತು. ಅವುಗಳಿಗೆ ಕಿರಿಕಿರಿ ಕಡಿಮೆ ಇತ್ತು, ಸಿಟಿ ಲಿಮಿಟ್ಸ್ ಕಡಿಮೆ ಇತ್ತು. ಈಗ ರೋಡ್​ಗಳು, ಹೈವೇ ಗಳಾಗಿ ಈ ಟೆರಿಟರಿಗೆ ತೊಂದರೆ ಆಗುತ್ತಿದೆ. ಆನೆಗಳು ಸೀಸನ್ ನಿಂದ ಸೀಸನ್ ಅದೇ ಟೆರಿಟರಿಯನ್ನ ನ್ಯಾವಿಗೇಟ್ ಮಾಡಿಕೊಂಡು ಓಡಾಡುತ್ತಿವೆ. ಆಗ ತೊಂದರೆ ಆಗುತ್ತದೆ. ಈಗ ಆ ಕಾರಿಡಾರ್ ಗಳನ್ನು ಮತ್ತೆ ಸೇರಿಸಿ, ಆನೆಗಳ ಚಲನವಲನ​ ಸುಲಭವಾಗಿಸಲು ಪ್ರಯತ್ನ ಮಾಡಲಾಗುತ್ತಿದೆ. ಅದೇ ಎಲಿಫೆಂಟ್ ಕಾರಿಡಾರ್. ಕನೆಕ್ಟಿಂಗ್ ದ ಡಿಸ್ಟರ್ಬ್ ಟೆರಿಟರಿಯನ್ನು ತಾಂತ್ರಿಕವಾಗಿ ಮಾಡಿದರೆ ಆಗುತ್ತದೆ. ಇದು ಒಳ್ಳೆಯ ಬೆಳವಣಿಗೆ, ಈಗ ಕಾರಿಡಾರ್ ಮಾಡಿದರೆ ಅದೇ ಟೆರಿಟರಿಯಲ್ಲಿ ಅವು ಓಡಾಡುತ್ತವೆ. ರೌಂಡ್ ಹೊಡೆದ ಹಾಗೆ ಆರು ತಿಂಗಳು ಈ ಕಡೆ ಬರುತ್ತವೆ, ಇನ್ನೊಂದು ಮೂರು ತಿಂಗಳು ಆ ಕಡೆ ಹೋಗುತ್ತವೆ. ಆಹಾರದ ವಿಷಯದಲ್ಲಿ, ಅವು ಕೂಡ ತಮ್ಮ ಸಂತಾನಭಿವೃದ್ಧಿ ಬೆಳವಣಿಗೆಯನ್ನು ನೋಡುತ್ತವೆ. ಅದನ್ನು ನಾವು ಅರ್ಥಮಾಡಿಕೊಳ್ಳುವುದು ಉತ್ತಮ ಬೆಳವಣಿಗೆ ಎಂದು ಡಾ. ಮೆಕಾಲೆ ವಿವರಿಸಿದರು.

ಆನೆಗೆ ರೇಡಿಯೋ ಕಾಲರ್ ಅಳವಡಿಸುವುದರಿಂದಾಗುವ ಅನುಕೂಲಗಳೇನು?:ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಮಾಡುವುದು ಒಂದು ಉತ್ತಮ ಬೆಳವಣಿಗೆ. ಯಾಕೆಂದರೆ ಅದರ ಮೂಲಕ ಆನೆಗಳ ಬಗ್ಗೆ ಅಧ್ಯಯನ ಮಾಡಬಹುದು ಮತ್ತು ತಿಳಿಯಬಹುದು. ಅವುಗಳ ಸಂಚಾರದ ಬಗ್ಗೆಯೂ ಗೊತ್ತಾಗುತ್ತದೆ. ಯಾಕೆಂದರೆ ರಿಲೊಕೇಷನ್ ಅಷ್ಟೊಂದು ಸುಲಭವಲ್ಲ. ಅದು ಅದರ ಟೆರಿಟರಿಯನ್ನು ಓಡಾಡಿಕೊಂಡು ಮಾಡಬೇಕು. ನಾವು ಅದನ್ನು ಗೈಡ್ ಮಾಡಲು ಆಗುವುದಿಲ್ಲ. ಅದರ ಮೆಮೊರಿ ಜನರೇಷನ್ ನಿಂದ ಜನರೇಷನ್​ಗೆ ಬದಲಾಗುತ್ತಾ ಹೋಗುತ್ತದೆ. ಇದೇ ರೂಟ್ ನಲ್ಲಿ ಹೋಗಬೇಕು, ಇದನ್ನೇ ಫಾಲೋ ಮಾಡಬೇಕು ಎಂದು ಅವರ ಪೂರ್ವಜರು ತೋರಿಸಿಕೊಟ್ಟಿರುತ್ತಾರೆ. ಆನೆಗಳು ತಮ್ಮ ಮಕ್ಕಳಿಗೆ ಇದೇ ಮಾರ್ಗದಲ್ಲಿ ಹೋಗಬೇಕು, ಈ ಸೀಸನ್ ನಲ್ಲಿ ಈ ಫುಡ್ ತಿನ್ನಬೇಕು ಎಂದು ಗೈಡ್ ಮಾಡಿರುತ್ತವೆ. ಅದರಿಂದ ಅವು ಅವುಗಳ ದಾರಿಯನ್ನು ಅನುಸರಿಸುತ್ತವೆ ಎಂದು ಅವರು ಡಾ. ಮೆಕಾಲೆ ಮಾಹಿತಿ ನೀಡಿದರು.

ಒಂಟಿ ಸಲಗ ಏಕೆ ಕಾಡಿನಿಂದ ಹೊರ ಬರುತ್ತದೆ, ಬಂಡೀಪುರ ಅರಣ್ಯ ಪ್ರದೇಶದಲ್ಲಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಟ್ರ್ಯಾಕ್ ಅಳವಡಿಕೆಗೆ ಚಿಂತನೆ ನಡೆಸುತ್ತಿರುವುದು ಎಷ್ಟು ಸರಿ?:ಒಂಟಿ ಸಲಗ ಕಾಡಿನಿಂದ ಆಚೆ ಬರುತ್ತದೆ ಎಂದರೆ ಅದರಲ್ಲೂ ಗಂಡು ಆನೆ, ಕಾಡಿನಲ್ಲಿ ತನ್ನ ವ್ಯಾಪ್ತಿ ಸವಾಲು ಆಗಿರುತ್ತವೆ. ಸೀಸನ್ ಬಂದಾಗ ಇನ್ನೊಂದು ಆನೆಗೆ ಚಾಲೆಂಜ್ ಮಾಡಲು ಅಥವಾ ಹೆಣ್ಣಾನೆ ಹುಡುಕಿಕೊಂಡು ಬಂದಿರುತ್ತವೆ. ಆ ಟಾಸ್ಕ್ ನಲ್ಲಿ ಮಾತ್ರ ಅವು ಆ ರೀತಿ ಹೊರಗೆ ಬರುತ್ತವೆ, ತನ್ನ ಕೆಲಸ ಮುಗಿದ ನಂತರ ಅವು ವಾಪಸ್ ಆಗುತ್ತವೆ. ಯಾವುದೇ ಪ್ರಾಣಿಗಳ ಗುರಿ ಅವುಗಳ ವಂಶಾಭಿವೃದ್ಧಿಯೇ ಆಗಿರುತ್ತದೆ. ಅದು ಬಿಟ್ಟು ಗ್ರಾಮೀಣ ಪ್ರದೇಶಕ್ಕೆ ಬರಬೇಕು ಎಂದುಕೊಳ್ಳುವುದಿಲ್ಲ. ಒಂದು ವೇಳೆ ಕೆಲ ಅವಾಂತರಗಳನ್ನು ಸೃಷ್ಟಿಸಿದಾಗ ಆ ಸಮಯದಲ್ಲಿ ಅವುಗಳನ್ನು ಪುಂಡಾನೆ ಎಂದು ಜನರು ಕರೆಯುತ್ತಾರೆ.

ಅವುಗಳಿಗೆ ಸ್ವಲ್ಪ ಸಮಯ ನೀಡಿ, ಅದಕ್ಕೆ ಜಾಗ ನೀಡಿ, ಅವುಗಳನ್ನು ಅವುಗಳ ಪಾಡಿಗೆ ಬಿಟ್ಟರೆ ಸ್ವಲ್ಪ ಸಮಯದ ಬಳಿಕ ಅವು ವಾಪಸ್ ಆಗುತ್ತವೆ. ಮಕ್ಕಳನ್ನು ಸಾಕುವುದು ಅಮ್ಮ, ದೊಡ್ಡಮ್ಮ , ಅಜ್ಜಿ, ಅತ್ತೆ ಹೀಗೆ ಪರಿಸರದ ಇತರ ಪ್ರಾಣಿಗಳು ಸಹ ಈ ನಿಯಮವನ್ನೇ ಅನುಸರಿಸುತ್ತವೆ. ಅವು ಸಹ ಬುದ್ಧಿವಂತಿಕೆ ಹೊಂದಿರುತ್ತವೆ. ಯಾವ ರೀತಿ ಜೀವನ ಮಾಡಬೇಕು ಎಂಬುದನ್ನು ತಮ್ಮ ಮರಿಗಳಿಗೆ ಹೇಳಿಕೊಡುತ್ತವೆ ಎಂದು ಅವರು ತಿಳಿಸಿದರು.

ನಂತರ ಅವು ಬೆಳೆದ ನಂತರ ಇನ್ನೊಂದು ಹೆಣ್ಣಾನೆಯ ಜೊತೆಗೂಡಿ ಅವುಗಳ ವಂಶಾಭಿವೃದ್ಧಿ ಮಾಡುವುದೇ ಅದರ ಗುರಿಯಾಗಿರುತ್ತದೆ. ಅದು ಪ್ರಕೃತಿ ಸಹಜ ಪ್ರಕ್ರಿಯೆ. ರೈಲ್ವೆ ಟ್ರ್ಯಾಕ್ ಮಾಡುತ್ತಿರುವುದು ಬೇರೆ ಉದ್ದೇಶಗಳಿಗೆ, ಅಭಿವೃದ್ಧಿಗೋಸ್ಕರ, ಆ ವಿಷಯ ಬಂದಾಗ ಯಾರು ಪ್ರಶ್ನೆ ಮಾಡುವುದಿಲ್ಲ. ಆದರೆ ನಾವು ಅದರ ಪರಿಣಾಮಗಳನ್ನು ಯೋಚನೆ ಮಾಡಬೇಕು. ಪ್ರಕೃತಿಯನ್ನು ಡಿಸ್ಟರ್ಬ್ ಮಾಡುತ್ತ ಕಾರಿಡಾರ್ ಗಳನ್ನು ಮಾಡುತ್ತಿದ್ದೇವೆ. ಅಸ್ಸೋಂ ನಲ್ಲಿ ರೈಲ್ವೆ ಟ್ರ್ಯಾಕ್ ಮಾಡಿದ ನಂತರ ಏನು ಪರಿಣಾಮ ಉಂಟಾಯಿತು ಎಂಬುದನ್ನು ನಾವು ನೋಡಿದ್ದೇವೆ. ಅದು ಇಲ್ಲೂ ಸಂಭವಿಸಬಹುದು. ಇದರ ಬದಲು ಬೇರೆ ಏನಾದರೂ ಅದಕ್ಕೆ ಉತ್ತಮ ಪರ್ಯಾಯ ವ್ಯವಸ್ಥೆ ಇದ್ದರೆ ಮಾಡಬಹುದು ಎಂದು ತಜ್ಞೆ ಡಾ. ಮೆಕಾಲೆ ಕಾರ್ಗೆ ಈಟಿವಿ ಭಾರತದೊಂದಿಗೆ ತಮ್ಮ ಸುದೀರ್ಘ ಚರ್ಚೆಯಲ್ಲಿ ಕಾಡಾನೆಗಳ ಬದುಕಿನ ಕುರಿತು ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡರು.

ಇದನ್ನೂ ಓದಿ:ಬಂಡೀಪುರದಲ್ಲಿ ಕಾಡಾನೆ ಸಾವು: ಉನ್ನತ ಮಟ್ಟದ ಸಮಿತಿಯಿಂದ ತನಿಖೆ

Last Updated : Feb 3, 2024, 4:42 PM IST

ABOUT THE AUTHOR

...view details