ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ 2500 ಎಲೆಕ್ಟ್ರಾನಿಕ್​ ವೆಹಿಕಲ್​ ಚಾರ್ಜಿಂಗ್​ ಕೇಂದ್ರಗಳ ಸ್ಥಾಪನೆ; ಸಿಎಂ ಮಹತ್ವದ ಘೋಷಣೆ

ರಾಜ್ಯದಲ್ಲಿ ಎಲೆಕ್ಟ್ರಾನಿಕ್​ ವೆಹಿಕಲ್​ ಚಾರ್ಜಿಂಗ್​ ಕೇಂದ್ರಗಳನ್ನು ಸ್ಥಾಪಿಸಲು ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿದೆ. ಕೃಷಿ ಪಂಪ್​ಸೆಟ್​ ಫೀಡರ್​ ಸೌರೀಕರಣ ಯೋಜನೆ ಹಂತ-2 ಅನ್ನು ವಿಸ್ತರಿಸಲಾಗಿದೆ.

By ETV Bharat Karnataka Team

Published : Feb 16, 2024, 12:39 PM IST

Updated : Feb 16, 2024, 2:01 PM IST

ಎಲೆಕ್ಟ್ರಾನಿಕ್​ ವೆಹಿಕಲ್​ ಚಾರ್ಜಿಂಗ್​ ಕೇಂದ್ರ ಸ್ಥಾಪನೆ
ಎಲೆಕ್ಟ್ರಾನಿಕ್​ ವೆಹಿಕಲ್​ ಚಾರ್ಜಿಂಗ್​ ಕೇಂದ್ರ ಸ್ಥಾಪನೆ

ಬೆಂಗಳೂರು:ರಾಜ್ಯಾದ್ಯಂತ 2500 ಎಲೆಕ್ಟ್ರಾನಿಕ್​ ವೆಹಿಕಲ್​ ಚಾರ್ಜಿಂಗ್​ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಬಜೆಟ್​ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಡೀಸೆಲ್​ ಚಾಲಿತ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ಎಲೆಕ್ಟ್ರಾನಿಕ್​ ವೆಹಿಕಲ್​ಗಳ ಉತ್ತೇಜನಕ್ಕೆ ಅಗತ್ಯವಾಗಿರುವ ಚಾರ್ಜಿಂಗ್​ ಕೇಂದ್ರಗಳನ್ನು ರಾಜ್ಯದ ವಿವಿಧೆಡೆ ಆರಂಭಿಸಲು ಸರ್ಕಾರ ಯೋಜನೆ ರೂಪಿಸಿದೆ. ಅದರಂತೆ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ 2500 ಇವಿ ಚಾರ್ಜಿಂಗ್​ ಸೆಂಟರ್​ಗಳನ್ನು ತೆರೆಯಲು ಬಜೆಟ್​ನಲ್ಲಿ ಘೋಷಿಸಲಾಗಿದೆ. ಇದಲ್ಲದೇ, ವಿದ್ಯುತ್​ ಸರಬರಾಜು ಕಂಪನಿಗಳ ಮೂಲಕ 35 ಕೋಟಿ ರೂಪಾಯಿ ವೆಚ್ಚದಲ್ಲಿ 100 ಚಾರ್ಜಿಂಗ್​ ಕೇಂದ್ರಗಳನ್ನು ಪ್ರತ್ಯೇಕವಾಗಿ ಆರಂಭಿಸಲು ಸರ್ಕಾರ ಚಿಂತಿಸಿದೆ.

ಕೃಷಿ ಪಂಪ್​ಸೆಟ್​ಗಳಿಗೆ ಸರಬರಾಜು ಮಾಡುವ ವಿದ್ಯುತ್​ ಪ್ರಮಾಣ ಹೆಚ್ಚಳವಾಗಿರುವ ಕಾರಣ, ಕೃಷಿ ಪಂಪ್​ಸೆಟ್​ ಫೀಡರ್​ ಸೌರೀಕರಣ ಯೋಜನೆ ಹಂತ-2 ಅನ್ನು ವಿಸ್ತರಿಸಲಾಗಿದೆ. ಅದರಂತೆ 1192 ಮೆಗಾ ವ್ಯಾಟ್​ ವಿದ್ಯುತ್​ ಅನ್ನು ಸೌರ ಯೋಜನೆಯ ಮೂಲಕ ಉತ್ಪಾದನೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ 4.30 ಲಕ್ಷ ಐಪಿ ಸೆಟ್​ಗಳನ್ನು ಸೌರೀಕರಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

10 ಯೂನಿಟ್​ ಹೆಚ್ಚುವರಿ ವಿದ್ಯುತ್​:ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಕುಟೀರ ಜ್ಯೋತಿ, ಅಮೃತ ಜ್ಯೋತಿ ಹಾಗೂ ಭಾಗ್ಯ ಜ್ಯೋತಿ ಸೇರ್ಪಡೆಗೊಳಿಸಲಾಗಿದ್ದು, 48 ಯೂನಿಟ್ ಒಳಗಿನ ಸರಾಸರಿ ಬಳಕೆಗೆ ಶೇ.10 ರಷ್ಟು ಹೆಚ್ಚುವರಿ ವಿದ್ಯುತ್ ಬದಲಿಗೆ 10 ಯೂನಿಟ್​ಗಳಷ್ಟು ಹೆಚ್ಚುವರಿ ವಿದ್ಯುತ್ ಒದಗಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ‌.

ಗೃಹ ವಿದ್ಯುತ್ ಬಳಕೆದಾರರಿಗೆ 200 ಯೂನಿಟ್​ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಗ್ಯಾರಂಟಿ ಯೋಜನೆಯನ್ನ ಜುಲೈ 1ರಿಂದ ಅನ್ವಯವಾಗುವಂತೆ 1.65 ಕೋಟಿ ಗ್ರಾಹಕರು ನೋಂದಾಯಿಸಿದ್ದು ಅಂದಾಜು 5 ಕೋಟಿಯಷ್ಟು ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ.‌

ಮುಂದಿನ ಏಳು ವರ್ಷಗಳಲ್ಲಿ ಇಂಧನ ವಲಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ಮೂಲಕ ವಿದ್ಯುತ್ ಉತ್ಪಾದನೆಯ ಸ್ಥಾಪಿತ ಸಾಮರ್ಥ್ಯವನ್ನ 32,000 ಮೆಗಾವ್ಯಾಟ್​ನಿಂದ 60,000 ಮೆಗಾವ್ಯಾಟ್​ಗಳಿಗೆ ಹೆಚ್ಚಿಸಲಾಗುವುದು.

ಸೋಲಾರ್​ ಪಂಪ್​ಗಳ ಸ್ಥಾಪನೆ:ರೈತರನ್ನ ಸ್ವಾವಲಂಗಳನ್ನಾಗಿ PM-KUSUM Component -B ಯೋಜನೆಯಡಿ 1,174 ಕೋಟಿ ರೂ.ಅಂದಾಜು ವೆಚ್ಚದಲ್ಲಿ 40,000 ಜಾಲಮುಕ್ತ (ಆಫ್ ಗ್ರೀಡ್) ಸೋಲಾರ್ ಪಂಪ್​ಸೆಟ್​ಗಳನ್ನು ಸ್ಥಾಪಿಸಲಾಗುತ್ತಿದೆ. ಇದಕ್ಕೆ ಕೇಂದ್ರದ ಪಾಲು ಶೇ.30ರಷ್ಟಿದ್ದು ರಾಜ್ಯ ಸರ್ಕಾರದಿಂದ ನೀಡುವ ಸಹಾಯಧನವನ್ನ ಶೇ.30ರಿಂದ ಶೇ‌.50ಕ್ಕೆ ಹೆಚ್ಚಿಸಲಾಗಿದೆ. ಸೋಲಾರ್​ ಪಂಪ್​ಗಳ ಸ್ಥಾಪನೆಗೆ ನೀಡಲಾಗುತ್ತಿರುವ ಸಹಾಯಧನ 30 ರಿಂದ 50ಕ್ಕೆ ಹೆಚ್ಚಿಸಲಾಗಿದೆ.

ಕೃಷಿ ಪಂಪ್​ ಸೆಟ್​ ಫೀಡರ್​ ಸೌರಿಕರಣ ಯೋಜನೆಯ ಎರಡನೇ ಹಂತದಲ್ಲಿ 1192 ಮೆಗಾವ್ಯಾಟ್​ ಸೌರ ಯೋಜನೆ ಅನುಷ್ಠಾನಕ್ಕಾಗಿ 4.3 ಲಕ್ಷ ಐಪಿ ಸೆಟ್​ ಸೌರೀಕರಣಕ್ಕೆ ಒತ್ತು ನೀಡಲು‌ ಮುಂದಾಗಿದೆ. ಎಸ್ಕಾಂ ವ್ಯಾಪ್ತಿಯ ಆಯ್ದ ಹಿಂದುಳಿದ ಗ್ರಾಮದಲ್ಲಿ ಪ್ರಾಯೋಗಿಕವಾಗಿ ಮೈಕ್ರೋಗ್ರೀಡ್​ ವ್ಯವಸ್ಥೆ ಮೂಲಕ ಶೇಖರಣೆ ಹೊಂದಿದ 500 ಕಿ.ವ್ಯಾ ಸಾಮರ್ಥ್ಯದ ಸೌರ ಘಟಕ ಸ್ಥಾಪನೆ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು ನಗರ ಸುತ್ತಮುತ್ತಲಿನ ವಿದ್ಯುತ್​ ಬೇಡಿಕೆ ನೀಗಿಸಲು ಸಾರ್ವಜನಿಕ- ಖಾಸಗಿ ಸಹಭಾಗಿತ್ವದಡಿ (ಪಿಪಿಪಿ) ಸಬ್​ ಸ್ಟೇಷನ್​ಗಳ ಉನ್ನತೀಕರಣ, ಪಿಪಿಪಿ ಸಹಭಾಗಿತ್ವದಲ್ಲಿ 2500 ಇವಿ ಚಾರ್ಜಿಂಗ್​ ಕೇಂದ್ರ ಸ್ಥಾಪನೆ, ವಿದ್ಯುತ್​ ಸರಬರಾಜು ಕಂಪನಿಗಳ ಮೂಲಕ 35 ಕೋಟಿ ವೆಚ್ಚದಲ್ಲಿ 100 ಚಾರ್ಜಿಂಗ್​ ಕೇಂದ್ರ ಸ್ಥಾಪಿಸುವುದಾಗಿ ಆಯವ್ಯಯದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:ಎಲೆಕ್ಟ್ರಿಕ್​ ವಾಹನಗಳಿಗೆ ಹೆಚ್ಚುತ್ತಿದೆ ಬೇಡಿಕೆ.. ಆದರೆ ಇನ್ನೂ ಸಿದ್ಧವಾಗಿಲ್ಲ ಮಾರ್ಗಸೂಚಿ!

Last Updated : Feb 16, 2024, 2:01 PM IST

ABOUT THE AUTHOR

...view details