ರೈಲ್ವೆ ಬ್ಯಾರಿಕೇಡ್ನಲ್ಲಿ ಸಿಲುಕಿದ ಸಲಗ (ETV Bharat) ಚಾಮರಾಜನಗರ :ರೈಲ್ವೆ ಬ್ಯಾರಿಕೇಡ್ನಲ್ಲಿ ಸಿಲುಕಿದ ಗಜರಾಜನನ್ನು ಅರಣ್ಯಾಧಿಕಾರಿಗಳು ರಕ್ಷಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವನ್ಯಜೀವಿ ವಲಯದ ಮಾವಿನಹಳ್ಳ ಎಂಬಲ್ಲಿ ನಡೆದಿದೆ.
ಅಂದಾಜು 45 ವರ್ಷದ ಗಂಡಾನೆ ಇದಾಗಿದೆ. ಎರಡು ಆನೆಗಳು ಆಹಾರಕ್ಕಾಗಿ ರೈಲ್ವೆ ಬ್ಯಾರಿಕೇಡ್ ದಾಟುವಾಗ ಒಂದಾನೆ ಸರಾಗವಾಗಿ ದಾಟಿದರೆ, ಮತ್ತೊಂದು ಆನೆ ಬ್ಯಾರಿಕೇಡ್ ಅಡಿ ಸಿಲುಕಿತ್ತು.
ಆನೆ ಸಿಲುಕಿದ ಮಾಹಿತಿ ಅರಿತ ಮದ್ದೂರು ಆರ್ಎಫ್ಒ ಪುನೀತ್ ಹಾಗೂ ತಂಡ ಅರ್ಧ ತಾಸು ಕಾರ್ಯಾಚರಣೆ ನಡೆಸಿ ರೈಲ್ವೆ ಬ್ಯಾರಿಕೇಡ್ನ್ನು ಸಡಿಲಗೊಳಿಸಿ ಆನೆಯು ಹೊರಬರುವಂತೆ ಮಾಡಿ ಬಚಾವ್ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, 'ವನ್ಯಜೀವಿಗಳ ರಕ್ಷಣೆ ಮತ್ತು ಉಳಿಸುವುದು ನಮ್ಮ ಜವಾಬ್ದಾರಿ, ಬದ್ಧತೆ'ಯಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ :ಚಾಮರಾಜನಗರ: ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮತ್ತೊಂದು ಆನೆ ಸಾವು, ಒಂದೇ ವಾರದಲ್ಲಿ ಮೂರು ಕಳೇಬರ ಪತ್ತೆ! - Elephant Carcass