ತುಮಕೂರು:ಸೋಡಿಯಂ ಮೆಟಲ್ ಸ್ಫೋಟ ಪ್ರಕರಣದಲ್ಲಿ ಬಂಧಿತನಾಗಿದ್ದ ಡ್ರೋನ್ ಪ್ರತಾಪ್‌ಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ಇಂದು ಜೈಲಿನಿಂದ ರಿಲೀಸ್ ಆದರು. ಜೈಲಿನಿಂದ ಹೊರಬಂದು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಬೇರೆಯವರನ್ನು ಬಿಟ್ಟು ನನ್ನೊಬ್ಬನನ್ನೇ ಏಕೆ ಅರೆಸ್ಟ್ ಮಾಡಿದ್ದಾರೆ ಎಂದರು.
ದೇಶಾದ್ಯಂತ ನೂರಾರು ಎಕ್ಸ್‌ಪರಿಮೆಂಟ್ ಪೋಸ್ಟ್ ಮಾಡಿದ್ದಾರೆ. ಮೊಬೈಲ್ ಕೊಟ್ಟರೆ ತೋರಿಸುತ್ತೇನೆ. ಅವ್ರನ್ನೆಲ್ಲಾ ಯಾಕೆ ಅರೆಸ್ಟ್ ಮಾಡಿಲ್ಲ?. ನನ್ನೊಬ್ಬನನ್ನೇ ಏಕೆ ಅರೆಸ್ಟ್ ಮಾಡಿದ್ದಾರೆ? ಎಂದು ಕೇಳಿದರು.
ಹೊರದೇಶದಲ್ಲಿರಬಹುದು, ನಮ್ಮ ದೇಶದಲ್ಲಿರಬಹುದು. ಐಪಿಸಿ ದೇಶದಲ್ಲಿ ಎಲ್ಲರಿಗೂ ಒಂದೇ. ಕಾನೂನು ಎಲ್ಲರಿಗೂ ಒಂದೇ. ಕೆ.ಜಿಗಟ್ಟಲೆ ಸೋಡಿಯಂ ಉಪಯೋಗಿಸಿ ಬೇರೆಯವರೆಲ್ಲಾ ಸೈನ್ಸ್ ಎಕ್ಸ್‌ಪರಿಮೆಂಟ್ ಮಾಡಿದ್ದಾರೆ ಎಂದ ಹೇಳಿದರು.