ಬೆಂಗಳೂರು: ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಇಂದು ಚಾಲಕ ರಹಿತ ಮೆಟ್ರೋ ರೈಲಿನ ತಪಾಸಣೆಯನ್ನು ನಡೆಸಲಾಯಿತು. ದಕ್ಷಿಣ ವಲಯದ ರೈಲ್ವೆ ಸುರಕ್ಷತಾ ಆಯುಕ್ತರು ಮತ್ತು ತಜ್ಞರ ತಂಡ ಹಲವಾರು ಪರೀಕ್ಷೆಗಳನ್ನು ನಡೆಸಿತು.
ಚಾಲಕ ರಹಿತ ಮೆಟ್ರೋ ರೈಲಿನ ತಪಾಸಣೆ ಯಶಸ್ವಿಯಾಗಿದ್ದರ ಬಗ್ಗೆ ನಮ್ಮ ಮೆಟ್ರೋ ಆಡಳಿತ ಮಂಡಳಿ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇದು ಡ್ರೈವರ್ ಲೆಸ್ ಮೆಟ್ರೋ ಚಾಲನೆಗೆ ರೈಲ್ವೆ ಸಚಿವಾಲುದ ಅನುಮೋದನೆ ಪಡೆಯುವ ಪ್ರಥಮ ಹೆಜ್ಜೆಯಾಗಿದೆ ಎಂದು ತಿಳಿಸಿದೆ.
ಮೆಟ್ರೋದ ಹಳದಿ ಮಾರ್ಗದಲ್ಲಿ ಬರುವ ಆರ್.ವಿ.ರಸ್ತೆ - ಬೊಮ್ಮಸಂದ್ರ ನಿಲ್ದಾಣಗಳ ನಡುವೆ ಚಾಲಕ ರಹಿತ ಮೆಟ್ರೋ ರೈಲನ್ನು ಚಲಾಯಿಸಿ, ತಪಾಸಣೆ ನಡೆಸಲಾಗಿದೆ. ರೋಲಿಂಗ್ ಸ್ಟಾಕ್/ರೈಲು ರೈಲ್ವೆ ಮಂಡಳಿಯ ಅನುಮೋದನೆ ಪಡೆದು ಹಳದಿ ಮಾರ್ಗದ ಸಂಕೇತ ವ್ಯವಸ್ಥೆಯ ಪರೀಕ್ಷೆಗಳನ್ನು ಪೂರ್ಣಗೊಳಿಸಲಾಗುತ್ತದೆ. ನಂತರ ರೈಲ್ವೆ ಸುರಕ್ಷತಾ ಆಯುಕ್ತರು ಮತ್ತು ತಜ್ನರ ತಂಡವು ಮೆಟ್ರೋ ಮಾರ್ಗದ ರೀಚ್-5 ರ ಹಳದಿ ಲೈನ್ನಲ್ಲಿ ಸಂಪೂರ್ಣ ತಪಾಸಣೆ ನಡೆಸಲು ಮತ್ತೊಮ್ಮೆ ಪರೀಕ್ಷೆಗೆ ಆಹ್ವಾನಿಸಲಾಗುವುದೆಂದು ಮೆಟ್ರೋ ಸಂಸ್ಥೆ ತಿಳಿಸಿದೆ.