ಕರ್ನಾಟಕ

karnataka

ETV Bharat / state

ಬರ ಪರಿಹಾರ ಹಣ ಬಿಡುಗಡೆಗೊಳಿಸದಿದ್ದರೆ ರಾಜ್ಯಕ್ಕೆ ಮತ ಕೇಳಲು ಬರಬೇಡಿ: ಬಿಜೆಪಿ ವಿರುದ್ಧ ಸುರ್ಜೇವಾಲಾ ಆಕ್ರೋಶ - Randeep Singh Surjewala - RANDEEP SINGH SURJEWALA

''ಬರ ಪರಿಹಾರ ಹಣ ಬಿಡುಗಡೆಗೊಳಿಸದಿದ್ದರೆ ರಾಜ್ಯಕ್ಕೆ ಮತ ಕೇಳಲು ಬರಬೇಡಿ'' ಎಂದು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕಿಡಿಕಾರಿದ್ದಾರೆ.

DROUGHT RELIEF FUND  RANDEEP SINGH SURJEWALA OUTRAGED  MANGALURU  LOK SABHA ELECTION 2024
ಬರ ಪರಿಹಾರ ಹಣ ಬಿಡುಗಡೆಗೊಳಿಸದಿದ್ದರೆ ರಾಜ್ಯಕ್ಕೆ ಮತ ಕೇಳಲು ಬರಬೇಡಿ: ಸುರ್ಜೇವಾಲ ಬಿಜೆಪಿ ವಿರುದ್ಧ ಆಕ್ರೋಶ

By ETV Bharat Karnataka Team

Published : Apr 23, 2024, 8:29 AM IST

ಮಂಗಳೂರು:''ಸುಪ್ರೀಂ ಕೋರ್ಟ್​ನಲ್ಲಿ ಕರ್ನಾಟಕ ರಾಜ್ಯದ ವಾದಕ್ಕೆ ಬೆಲೆ ಸಿಕ್ಕಿದೆ. ಮೋದಿ ಸರಕಾರ ಇಂದು ರಾತ್ರಿಯೊಳಗೆ ಬರಪರಿಹಾರ ಹಣ ಬಿಡುಗಡೆಗೊಳಿಸದಿದ್ದರೆ ರಾಜ್ಯಕ್ಕೆ ಮೋದಿ, ಅಮಿತ್ ಶಾ ಮತ ಕೇಳಲು ಬರಬೇಡಿ'' ಎಂದು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ''ಬರ ಪರಿಹಾರ ಹಣವನ್ನು ನೀಡಲು ಸುಪ್ರೀಂ ಕೋರ್ಟ್ ತಿಳಿಸಿದ್ದು ತಕ್ಷಣವೇ ನೀಡಬೇಕು. ಇದು ಕರ್ನಾಟಕದ ಜನತೆಗೆ, ಕರ್ನಾಟಕದ ರೈತ ಬಂಧುಗಳಿಗೆ ಸಂದ ಬಹುದೊಡ್ಡ ಗೆಲುವು. ಬರ ಪರಿಹಾರವನ್ನು ನಿರಾಕರಿಸುವ ಮೂಲಕ ಕರ್ನಾಟಕದ ರೈತರ ವಿರುದ್ಧ ಬಿಜೆಪಿ ಮತ್ತು ಪ್ರಧಾನಿ ಮೋದಿಯವರು ಸೇಡು ತೀರಿಸಿಕೊಳ್ಳುತ್ತಿದ್ದಾರೆ'' ಎಂದರು.

''ಕರ್ನಾಟಕ ಸರ್ಕಾರವು ಜ್ಞಾಪಕ ಪತ್ರವನ್ನು ಸಲ್ಲಿಸಿಲ್ಲ ಎಂದು ಸುಳ್ಳು ಹೇಳುವ ಮೂಲಕ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಂದ ಅನ್ಯಾಯ ನಡೆದಿದೆ. ಇದೀಗ ನ್ಯಾಯವು ಮೇಲುಗೈ ಸಾಧಿಸಬೇಕಾಯಿತು. ಹಾಗಾಗಿ ಪ್ರಧಾನಿ ಮೋದಿ ಮತ್ತು ಬಿಜೆಪಿಯ ರೈತರ ಬಗೆಗಿನ ದ್ವೇಷದ ಧೋರಣೆ ಮತ್ತು ಅವರನ್ನು ಶಿಕ್ಷಿಸಿದ್ದಕ್ಕಾಗಿ ಕರ್ನಾಟಕದ ಜನರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ನಾವು ಪ್ರಧಾನಿ ಮೋದಿಯವರಿಂದ ಉತ್ತರದಾಯಿತ್ವವನ್ನು ಕೇಳುತ್ತೇವೆ. ಕರ್ನಾಟಕದ ಪ್ರತಿಯೊಬ್ಬ ವ್ಯಕ್ತಿಯೂ ಉತ್ತರದಾಯಿತ್ವವನ್ನು ಬಯಸುತ್ತೇವೆ. ನಮಗೆ ಬರಬೇಕಾದ ಒಟ್ಟು 18,172 ಕೋಟಿ ಬರ ಪರಿಹಾರಕ್ಕಾಗಿ ನಮ್ಮ ಮನವಿ ಸಲ್ಲಿಸಲಾಗಿದೆ.

ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಇಂದು ರಾತ್ರಿಯೊಳಗೆ ಆ ಹಣವನ್ನು ಬಿಡುಗಡೆ ಮಾಡಬೇಕು ಅಥವಾ ಅವರು ಕರ್ನಾಟಕಕ್ಕೆ ಬರಬಾರದು ಎಂದು ನಾವು ಒತ್ತಾಯಿಸುತ್ತೇವೆ. ಅವರಿಗೆ ಕರ್ನಾಟಕದ ಮತ ಕೇಳುವ ಹಕ್ಕಿಲ್ಲ. ಹಾಗಾಗಿ ನಾವು ಮೋದಿ ಮತ್ತು ಅಮಿತ್ ಶಾ ಅವರಿಗೆ ಮನವಿ ಮಾಡುತ್ತೇವೆ. ಕರ್ನಾಟಕಕ್ಕೆ ಬರಬೇಡಿ. ನಮ್ಮ ಮತ ಕೇಳಬೇಡಿ. ಒಂದೋ ಇಂದು ಹಣವನ್ನು ಬಿಡುಗಡೆ ಮಾಡಿ ಅಥವಾ ನೀವು ಕರ್ನಾಟಕದ ಜನರಿಂದ ಬಹಿಷ್ಕಾರವನ್ನು ಎದುರಿಸಬೇಕಾಗುತ್ತದೆ. ನೀವು ಹೋದಲ್ಲೆಲ್ಲಾ ಜನರು ನಿಮ್ಮನ್ನು ವಿಧಾನಸಭೆಯಲ್ಲಿ ಮತ ಚಲಾಯಿಸಿದಂತೆಯೇ ಕರ್ನಾಟಕದಿಂದ ನಿಮ್ಮನ್ನು ಹೊರಹಾಕುತ್ತಾರೆ'' ಎಂದು ಗರಂ ಆದರು.

ಬರ ಪರಿಹಾರ ನೀಡದೇ ರಾಜ್ಯಕ್ಕೆ ಕಾಲಿಡಬೇಡಿ:''ನ್ಯಾಯಯುತವಾಗಿ ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಸಲ್ಲಿಸಿರುವ ಮನವಿಯನ್ನು ತಿರಸ್ಕರಿಸಿ ಪ್ರತೀಕಾರದ ನಿಲುವನ್ನು ತೋರ್ಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಬರ ಪರಿಹಾರವನ್ನು ಬಿಡುಗಡೆ ಮಾಡದೇ ಮತ ಯಾಚನೆಗಾಗಿ ಕರ್ನಾಟಕ ರಾಜ್ಯಕ್ಕೆ ಕಾಲಿಡಬಾರದು'' ಎಂದು ಕಿಡಿಕಾರಿದರು.

''2023 ಸೆ. 13 ರಂದು ರಾಜ್ಯ ಸರಕಾರ ಬರ ಘೋಷಣೆ ಮಾಡಿತ್ತು. ಸೆ.22 ರಂದು 18,172 ಕೋಟಿ ರೂ. ಬರ ಪರಿಹಾರ ನೀಡಲು ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಅದರ ಆಧಾರದಲ್ಲಿ ಅ.9 ರಂದು ಕೇಂದ್ರ ಸರಕಾರದ ತಂಡ ರಾಜ್ಯದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಅ.25 ರಂದು ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಅದರ ನಂತರ ರಾಜ್ಯದ ಸಚಿವರಿಗೆ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಭೇಟಿಗೆ ಅವಕಾಶವನ್ನೇ ನೀಡಿಲ್ಲ'' ಎಂದರು.

''ನ.25ರಂದು ರಾಜ್ಯದ ಮೂವರು ಸಚಿವರು ದೆಹಲಿಗೆ ತೆರಳಿ ಕೃಷಿ ಮತ್ತು ಗೃಹ ಸಚಿವಾಲಯದ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ್ದಾರೆ. ಡಿ.19ರಂದು ಸ್ವತಃ ಮುಖ್ಯಮಂತ್ರಿ ಪ್ರಧಾನಿ, ಅಮಿತ್ ಶಾ ಅವರನ್ನು ಭೇಟಿಯಾಗಿ ಒತ್ತಾಯಿಸಿದ್ದಾರೆ. ಆದರೂ ಈಡೇರದೇ ಇದ್ದಾಗ ದೆಹಲಿಯ ಜಂತ‌ರ್ ಮಂತರ್‌ನಲ್ಲಿ ಕರ್ನಾಟಕ ಸರಕಾರದಿಂದ ಪ್ರತಿಭಟನೆ ನಡೆದಿತ್ತು. ಆದರೆ, ಅದಕ್ಕೂ ಮನ್ನಣೆ ಸಿಗದಾಗ ವಿಧಿ ಇಲ್ಲದೆ, ಕೊನೆಯ ಅಸ್ತ್ರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು. ಸಂಪೂರ್ಣ 5 ತಿಂಗಳು ಕರ್ನಾಟಕಕ್ಕೆ ಬರ ಪರಿಹಾರ ನೀಡದೆ ಕೇಂದ್ರ ಸತಾಯಿಸಿದೆ. ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್ ಈ ವಿಚಾರಗಳನ್ನು ಒಕ್ಕೂಟ ವ್ಯವಸ್ಥೆಯಲ್ಲಿ ಸೌಹಾರ್ದಯುತವಾಗಿ ಬಗೆಹರಿಸಬೇಕಿತ್ತು ಎಂದಿದೆ. ಇದು ರಾಜ್ಯದ ರೈತರು ಹಾಗೂ ರಾಜ್ಯದ ಜನತೆಗೆ ದೊರೆತ ಬಹುದೊಡ್ಡ ವಿಜಯ'' ಎಂದು ಸುರ್ಜೇವಾಲಾ ಹೇಳಿದರು.

''ದೇಶದಲ್ಲೇ ಕರ್ನಾಟಕ ಅತಿ ಹೆಚ್ಚು ತೆರಿಗೆ ನೀಡುವ 2ನೇ ದೊಡ್ಡ ರಾಜ್ಯವಾಗಿದ್ದರೂ ರಾಜ್ಯ ನೀಡಿದ ತೆರಿಗೆ ಹಣದ ಕೇವಲ ಶೇ.13 ವಾಪಸ್ ನೀಡಿ ಕೇಂದ್ರ ದ್ವೇಷ ಸಾಧಿಸುತ್ತಿದೆ. ದೇಶದ ಅಭಿವೃದ್ಧಿ ಅತ್ಯಗತ್ಯ. ಆದರೆ, ತೆರಿಗೆ ಹಣದಲ್ಲಿ 100 ರೂ.ನಲ್ಲಿ ರಾಜ್ಯಕ್ಕೆ 13 ರೂ. ಮಾತ್ರ ಸಿಗುವುದು. ನ್ಯಾಯಯುತ ತೆರಿಗೆ ಪಾಲು ನೀಡಬೇಕಲ್ಲವೇ? ಕೇಂದ್ರದ ತಾರತಮ್ಯದಿಂದ ರಾಜ್ಯದ ಜನತೆ, ರೈತರು ಬವಣೆಪಡುವಂತಾಗಿದೆ'' ಎಂದು ರಣದೀಪ್ ಸುರ್ಜೇವಾಲಾ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:ಕಾಂಗ್ರೆಸ್ ಗ್ಯಾರಂಟಿ ಕಾರ್ಡ್​​ಗಳ ಹಂಚಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು - guarantee cards

ABOUT THE AUTHOR

...view details