ಕರ್ನಾಟಕ

karnataka

ETV Bharat / state

ಈ ಟಿವಿ ಭಾರತ್ ಫಲಶ್ರುತಿ: ಪುಸ್ತಕ ಪ್ರೇಮಿ ಸಯ್ಯದ್​ ಇಸಾಕ್‌​ಗೆ ಚೆಕ್​​ ಜೊತೆಗೆ, ವಿದ್ಯುತ್​​ ಬಿಲ್, ಪತ್ರಿಕೆಗೆ ದಾನಿಗಳ ನೆರವು

ಶುಕ್ರವಾರ ಈಟಿವಿ ಭಾರತ್​ ದಲ್ಲಿ ಮೈಸೂರಿನ ಪುಸ್ತಕಪ್ರೇಮಿ ಸಯ್ಯದ್​ ಇಸಾಕ್‌ ಅವರ ಸಂಕಷ್ಟದ ಬಗ್ಗೆ ಸುದ್ದಿ ಪ್ರಕಟಿಸಲಾಗಿತ್ತು. ಈ ಬೆನ್ನಲ್ಲೇ ದಾನಿಗಳು ಗ್ರಂಥಾಲಯಕ್ಕೆ ಭೇಟಿ ನೀಡಿ ಇಸಾಕ್‌ ಅವರಿಗೆ ಆರ್ಥಿಕ ಬೆಂಬಲ ನೀಡಿದ್ದಾರೆ.

ಪುಸ್ತಕ ಪ್ರೇಮಿ ಸಯ್ಯದ್​ ಇಸಾಕ್‌​ಗೆ ಚೆಕ್​​ ಜೊತೆಗೆ, ವಿದ್ಯುತ್​​ ಬಿಲ್, ಪತ್ರಿಕೆಗೆ ದಾನಿಗಳ ನೆರವು
ಪುಸ್ತಕ ಪ್ರೇಮಿ ಸಯ್ಯದ್​ ಇಸಾಕ್‌​ಗೆ ಚೆಕ್​​ ಜೊತೆಗೆ, ವಿದ್ಯುತ್​​ ಬಿಲ್, ಪತ್ರಿಕೆಗೆ ದಾನಿಗಳ ನೆರವು (ETV Bharat)

By ETV Bharat Karnataka Team

Published : 5 hours ago

ಮೈಸೂರು: ಆರೋಗ್ಯ ಹಾಗೂ ಹಣಕಾಸು ಸಮಸ್ಯೆಯಿಂದ ಗ್ರಂಥಾಲಯ ನಿರ್ವಹಣೆಗೆ ಕಷ್ಟಪಡುತ್ತಿರುವ ಪುಸ್ತಕ ಪ್ರೇಮಿ ಸಯ್ಯದ್​ ಇಸಾಕ್‌​ಗೆ ದಾನಿಗಳು 5 ಸಾವಿರ ರೂ, ಚೆಕ್​ ನೀಡಿದ್ದು, ಇನ್ನು ಮುಂದೆಯೂ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಪುಸ್ತಕ ಪ್ರೇಮಿ ಸಯ್ಯದ್​ ಇಸಾಕ್‌​ಗೆ ಗ್ರಂಥಾಲಯದಲ್ಲಿನ ಹಣಕಾಸಿನ ಮುಗ್ಗಟ್ಟಿನ ಬಗ್ಗೆ ಶುಕ್ರವಾರ ಈಟಿವಿ ಭಾರತ್ ವೆಬ್​ಸೈಟ್​ ಸುದ್ದಿ ಪ್ರಕಟಿಸಿತ್ತು. ಇದರ ಫಲಶ್ರುತಿಯಿಂದಾಗಿ ದಾನಿಗಳು 5 ಸಾವಿರ ರೂ. ಚೆಕ್ ಜತೆಗೆ ಇಸಾಕ್​ಗೆ ಸಹಾಯದ ಭರವಸೆ ನೀಡಿದ್ದಾರೆ.

ರಾಜೀವ್ ನಗರದಲ್ಲಿ ಸಯ್ಯದ್​ ಇಸಾಕ್‌ ಅವರು 14 ವರ್ಷಗಳ ಹಿಂದೆ ಕಷ್ಟ ಪಟ್ಟು ಪ್ರಾರಂಭಿಸಿರುವ, ಗ್ರಂಥಾಲಯ ಮುಚ್ಚುವ ಆತಂಕದ ಹಿನ್ನೆಲೆಯಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಹಾಗೂ ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷ ಜಿ. ರಾಘವೇಂದ್ರ, ಕೆಎಂಪಿ ಕೆ ಚಾರಿಟಬಲ್​​​​​ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಮಹಾನ್ ಶ್ರೇಯಸ್ ಹಾಗೂ ಮತ್ತಿತರರು ಗ್ರಂಥಾಲಯಕ್ಕೆ ಭೇಟಿ ನೀಡಿ ಗ್ರಂಥಾಲಯದ ವಿದ್ಯುತ್​​ ಬಿಲ್​ ಹಾಗೂ ಪತ್ರಿಕೆಗೆ ಸಹಾಯ ಮಾಡಿದರು.

ಪುಸ್ತಕ ಪ್ರೇಮಿ ಸಯ್ಯದ್​ ಇಸಾಕ್‌​ಗೆ ಚೆಕ್​​ ಜೊತೆಗೆ, ವಿದ್ಯುತ್​​ ಬಿಲ್, ಪತ್ರಿಕೆಗೆ ದಾನಿಗಳ ನೆರವು (ETV Bharat)

ಈ ವೇಳೆ ಸಯ್ಯದ್​ ಇಸಾಕ್‌​ ಭಾವುಕರಾಗಿ ಮಾತನಾಡಿ, "ಲೈಬ್ರರಿ ಉಳಿಸಿಕೊಡಿ ಎಂದು ಮನವಿ ಮಾಡಿದರು. ಮೊದಲು ನನಗೆ ಶಕ್ತಿ ಇತ್ತು, ದುಡಿದು ಈ ಗ್ರಂಥಾಲಯ ನಡೆಸುತ್ತಾ ಇದ್ದೆ. ಈಗ ಒಂದೂವರೆ ತಿಂಗಳಿನಿಂದ ನನಗೆ ಆರೋಗ್ಯ ಸರಿ ಇಲ್ಲ. ಎರಡು ತಿಂಗಳಿನಿಂದ ಕರೆಂಟ್ ಬಿಲ್ ಕಟ್ಟಲಾಗಿಲ್ಲ. ಪ್ರತಿ ತಿಂಗಳು 1,200, 1500 ರೂ. ಬಿಲ್ ಬರುತ್ತದೆ. ಪತ್ರಿಕೆ ಬಿಲ್ ಕಟ್ಟಲಾಗಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.

ಈ ಗ್ರಂಥಾಲಯ ಶಾಶ್ವತವಾಗಿ ಉಳಿಯಬೇಕುಂಬುದು ನನ್ನ ಆಸೆ:"ಇಂದು ನಾನು ಇದ್ದೇನೆ, ನಾಳೆ ಹೋಗುತ್ತೇನೆ. ಆದರೆ, ಈ ಗ್ರಂಥಾಲಯ ಶಾಶ್ವತವಾಗಿ ಉಳಿಯಬೇಕು ಎಂಬುದು ನನ್ನ ಮಹಾದಾಸೆ. ಗ್ರಂಥಾಲಯ ಪ್ರಾರಂಭವಾಗಿ 14 ವರ್ಷ ತುಂಬಿದೆ. ಮಕ್ಕಳು ವಿದ್ಯಾರ್ಥಿಗಳು ದೊಡ್ಡವರು ಬಂದು ಇಲ್ಲಿ ಓದುತ್ತಾರೆ. ಕೆಲವರು ಪುಸ್ತಕಗಳನ್ನು ಮನೆಗೆ ಕೊಂಡೊಯ್ದು ಓದುತ್ತಾರೆ. ವಾಪಸ್​​ ತಂದು ಕೊಡುತ್ತಾರೆ, ಕೆಲವರು ತರದಿದ್ದರೆ ನಾನೇ ಅಂತವರ ಮನೆಗೆ ಹೋಗಿ ವಾಪಸು ತರುತ್ತೇನೆ. ಎಲ್ಲರಿಂದಲೂ ಆಧಾರ್ ಕಾರ್ಡ್ ತೆಗೆದುಕೊಂಡು ಪುಸ್ತಕ ಕೊಡುತ್ತೇನೆ" ಎಂದು ತಿಳಿಸಿದರು.

"ಕನ್ನಡ ಭಾಷೆಯನ್ನು ಉಳಿಸಬೇಕು - ಬೆಳೆಸಬೇಕು, ಕನ್ನಡದ ನೆಲದಲ್ಲಿ ನಾವು ಕನ್ನಡ ಭಾಷೆಯನ್ನು ಮರೆತರೆ ಕನ್ನಡ ಉಳಿಯುವುದಾದರೂ ಹೇಗೆ? ಎಂದು ಕಳವಳ ವ್ಯಕ್ತಪಡಿಸಿದರು. ಇಲ್ಲಿ 13 ವಾರ್ಡ್ ಗಳಿವೆ. ಆದರೆ, ಒಂದೂ ಗ್ರಂಥಾಲಯ ಇಲ್ಲ, ನನ್ನ ಗ್ರಂಥಾಲಯ ಸುಟ್ಟು ಹೋದಾಗ ಯಾವುದೇ ಸರ್ಕಾರ ಸಹಾಯ ಮಾಡಲಿಲ್ಲ. ಈ ಭಾಗದ ಶಾಸಕ ತನ್ವೀರ್ ಸೇಠ್ ಅವರಿಗೆ ಒಮ್ಮೆ ಗ್ರಂಥಾಲಯಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದೇನೆ. ಆದರೆ ಇದುವರೆಗೆ ಬರಲಿಲ್ಲ. ಅದೇ ರೀತಿ ಯಾವ ಕಾರ್ಪೊರೇಟರ್ ಕೂಡ ಇಲ್ಲಿಗೆ ಬಂದಿಲ್ಲ" ಎಂದು ಅತೀವ ಬೇಸರ ವ್ಯಕ್ತಪಡಿಸಿದರು. "ಗ್ರಂಥಾಲಯಕ್ಕೆ ಬಹಳಷ್ಟು ಜನ ಸಹಾಯ ಮಾಡಿದ್ದಾರೆ. ಅದನ್ನು ನಾನು ಎಂದಿಗೂ ಮರೆಯುವುದಿಲ್ಲ" ಎಂದು ಸಯ್ಯದ್​ ಇಸಾಕ್‌ ಕೃತಜ್ಞತೆ ಸಲ್ಲಿಸಿದರು.

ಈ ವೇಳೆ ಜೀವದಾರ ರಕ್ತನಿಧಿ ಕೇಂದ್ರದ ಗಿರೀಶ್ ಅವರು ಮಾತನಾಡಿ, "ಗ್ರಂಥಾಲಯಕ್ಕೆ ಪ್ರತಿ ತಿಂಗಳು ಎರಡು ಪತ್ರಿಕೆಯನ್ನು ತಮ್ಮ ಸಂಸ್ಥೆ ವತಿಯಿಂದ ತರಿಸಿಕೊಡುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ:ಮೈಸೂರಿನ ಪುಸ್ತಕಪ್ರೇಮಿ ಸಯ್ಯದ್​ ಇಸಾಕ್‌ ಅವರಿಗೆ ಗ್ರಂಥಾಲಯ ನಿರ್ವಹಣೆಗೆ ಹಣಕಾಸು ಮುಗ್ಗಟ್ಟು

ABOUT THE AUTHOR

...view details