ಕರ್ನಾಟಕ

karnataka

ETV Bharat / state

ಪೆನ್​ಡ್ರೈವ್​ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ: ಡಿಕೆಶಿ - D K Shivakumar - D K SHIVAKUMAR

ಹಾಸನ ಪೆನ್​ಡ್ರೈವ್ ಪ್ರಕರಣ ರಾಜಕೀಯ ನಾಯಕರ ಕೆಸರೆರಚಾಟಕ್ಕೆ ಕಾರಣವಾಗಿದೆ.

DCM DK SIVAKUMAR  LASHED OUT  HD KUMARASWAMY  BENGALURU
ಡಿಸಿಎಂ ಡಿಕೆ ಶಿವಕುಮಾರ್​ ಹೇಳಿದರು.

By ETV Bharat Karnataka Team

Published : Apr 30, 2024, 4:54 PM IST

ಡಿಸಿಎಂ ಡಿಕೆ ಶಿವಕುಮಾರ್​ ಹೇಳಿಕೆ

ಬೆಂಗಳೂರು:ಪೆನ್​ಡ್ರೈವ್​ನಂತಹ ಚಿಲ್ಲರೆ ಕೆಲಸವನ್ನು ನಾನು ಮಾಡುವುದಿಲ್ಲ. ನಾನೇನಿದ್ದರೂ ಚುನಾವಣೆಯಲ್ಲಿ ಎದುರಿಸುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಸದಾಶಿವನಗರ ನಿವಾಸದಲ್ಲಿ ಇಂದು ಮಾತನಾಡಿದ ಅವರು, ನಾನು ಪೆನ್​ಡ್ರೈವ್ ಇದೆ ಎಂದು ಹೆದರಿಸಲ್ಲ. ಅಸೆಂಬ್ಲಿಗೆ ಬನ್ನಿ ಎಂದು ಕರೆದಿದ್ದೇನೆ‌. ಇದು ಹಳೆ ವಿಡಿಯೋ ಎಂದು ರೇವಣ್ಣ ಹೇಳಿದ್ದಾರೆ. ಆ ಮೂಲಕ ಅವರೇ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಪ್ರಜ್ವಲ್ ಕುಟುಂಬ ಸದಸ್ಯ ಅಲ್ಲ ಅಂತ ಹೇಳಿದ್ರೆ ಹೇಗೆ ಒಪ್ಪಲು ಆಗುತ್ತದೆ?. ಹೆಚ್.ಡಿ.ಎಂದರೆ ಏನು?. ಹೆಚ್.​ಡಿ.ರೇವಣ್ಣ ಎಂದರೆ ಹೊಳೆನರಸೀಪುರ ದೇವೇಗೌಡರ‌ ಮಗ ಅಂತ. ಹೆಚ್​.ಡಿ.ಕುಮಾರಸ್ವಾಮಿ ಎಂದರೆ ಹೊಳೆನರಸೀಪುರ ದೇವೇಗೌಡರ‌ ಮಗ ಅಂತ ಎಂದು ವ್ಯಂಗ್ಯವಾಡಿದರು.

ಪಕ್ಷದಿಂದ ವಜಾ ಕಣ್ಣೊರೆಸುವ ನಾಟಕ: ಪಕ್ಷದಿಂದ ವಜಾ ಮಾಡಲಿ ಇಲ್ಲವೇ ಒಳಗಿಟ್ಟುಕೊಳ್ಳಲಿ‌. ಅದೆಲ್ಲಾ ಕಣ್ಣೊರೆಸುವ ನಾಟಕ. ರಾಜಕಾರಣದಲ್ಲಿ ನನಗೂ ಗೊತ್ತಿದೆ ಅಮಾನತು ಏನು ಅನ್ನೋದು ಎಂದರು.

ಅಶೋಕ್ ಬೆನ್ನುಮೂಳೆ ಇಲ್ಲದ ನಾಯಕ:ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವಾಗ ಯಾರು ಜೊತೆಗಿದ್ದರು. ಯಾರು ಯಾರಿಗೆ ಕರೆ ಮಾಡಿದ್ದರು? ಈ ಪ್ರಶ್ನೆಗಳನ್ನು ಅವರಿಗೆ ಕೇಳಿ. ಈ ವಿಚಾರದಲ್ಲಿ ಬಿಜೆಪಿಯವರ ಸ್ಟ್ಯಾಂಡ್ ಹೇಳಬೇಕು. ಪ್ರಹ್ಲಾದ್ ಜೋಶಿ, ಸುನೀಲ್ ಕುಮಾರ್, ಯತ್ನಾಳ್, ಬೊಮ್ಮಾಯಿ, ಶೋಭಕ್ಕ ಯಾಕೆ ಮಾತಾಡುತ್ತಿಲ್ಲ?. ವಿಪಕ್ಷ ನಾಯಕ ಆರ್.ಅಶೋಕ್ ಓರ್ವ ಬೆನ್ನುಮೂಳೆ ಇಲ್ಲದ ನಾಯಕ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಜೆಡಿಎಸ್ ಪಕ್ಷದಿಂದ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅಮಾನತು: ಕಾಂಗ್ರೆಸ್​ ವಿರುದ್ಧ ಹೆಚ್​ಡಿಕೆ ವಾಗ್ದಾಳಿ - REVANNA SUSPEND FROM JDS

ABOUT THE AUTHOR

...view details