ಕರ್ನಾಟಕ

karnataka

ETV Bharat / state

ಸ್ಟೀಲ್ ನಟ್​ಗಳಲ್ಲಿ ಅರಳಿದ ಆದಿಯೋಗಿಯ ವಿಗ್ರಹ: ದಾಖಲೆಯ ಪುಟ ಸೇರಿದ ಉಡುಪಿ ಕಲಾವಿದನ ಕೈಚಳಕ

ಉಡುಪಿಯ ಮಟ್ಟು ಗ್ರಾಮದ ಡಿಪ್ಲೋಮಾ ಪದವೀಧರರೊಬ್ಬರು ಮೈಲ್ಡ್ ಸ್ಟೀಲ್ ನಟ್ಸ್​ಗಳಿಂದ 58 ಕೆ.ಜಿ. ತೂಕದ ಆದಿಯೋಗಿಯ ವಿಗ್ರಹ ತಯಾರಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್​ ಸೇರ್ಪಡೆಯಾಗಿದ್ದಾರೆ.

By ETV Bharat Karnataka Team

Published : 4 hours ago

ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಡಿಪ್ಲೋಮಾ ಪದವೀಧರ
ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಉಡುಪಿ ಕಲಾವಿದನ ಕಲಾಕೃತಿ (ETV Bharat)

ಉಡುಪಿ:ಇಲ್ಲಿನ ಡಿಪ್ಲೋಮಾ ಪದವೀಧರರೊಬ್ಬರು ಸ್ಟೀಲ್ ನಟ್ಸ್‌ ಮೂಲಕ ದೇವರ ವಿಗ್ರಹ ರಚಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಸ್ಥಾನ ಪಡೆದಿದ್ದಾರೆ. ಜಿಲ್ಲೆಯ ಮಟ್ಟು ಗ್ರಾಮದ ಡಿಪ್ಲೋಮಾ ಪದವೀಧರ, ಕಲಾವಿದ​ ಅಮಿತ್ ಅಂಚನ್ ಅವರು ವಾಹನಗಳಲ್ಲಿ ಬಳಸುವ ಮೈಲ್ಡ್ ಸ್ಟೀಲ್ ನಟ್‌ಗಳಿಂದ ಸುಂದರವಾದ ಆದಿಯೋಗಿ ವಿಗ್ರಹ ತಯಾರಿಸಿದ್ದಾರೆ.

ರೈತ ಕುಟುಂಬದಿಂದ ಬಂದಿರುವ ಅಮಿತ್ ಅಂಚನ್ ಅವರ ತಂದೆ ಲಕ್ಷ್ಮಣ್ ಅಂಚನ್, ಅಜ್ಜ ಚಿನ್ನ ಆರ್ ಅಂಚನ್ ಕೂಡ ಕಲಾವಿದರಾಗಿದ್ದರು. ಈಗಾಗಲೇ ಹಲವು ರೀತಿಯ ಕಲಾಕೃತಿಗಳು, ಟ್ಯಾಬ್ಲೋಗಳನ್ನು ತಯಾರಿಸಿರುವ ಅಮಿತ್, ವಿಭಿನ್ನವಾಗಿ ಏನಾದರೂ ಮಾಡಬೇಕೆಂಬ ಕನಸು ಕಂಡಿದ್ದರು. ಅಮಿತ್ ಪಾಲಿಟೆಕ್ನಿಕ್​ನಲ್ಲಿ ಮೆಕಾನಿಕ್ ಡಿಪ್ಲೋಮಾ ವಿದ್ಯಾಭ್ಯಾಸ ಮಾಡಿದ್ದಾರೆ. ಇವರು ಮೊದಲು ಮಣ್ಣಿನಿಂದ ಆದಿಯೋಗಿ ಕಲಾಕೃತಿ ರಚಿಸಿ, ಅದಕ್ಕೆ ನಟ್​ಗಳನ್ನು ಜೋಡಿಸಿದ್ದಾರೆ.

ಸ್ಟೀಲ್ ನಟ್​ಗಳಿಂದ ಆದಿಯೋಗಿಯ ವಿಗ್ರಹ ತಯಾರಿಸಿದ ಕಲಾವಿದ (ETV Bharat)

"ಸುಮಾರು ಮೂರು ತಿಂಗಳ ಪರಿಶ್ರಮದಿಂದ ಈ ಕಲಾಕೃತಿ ಮೂಡಿದೆ. ಸುಮಾರು 58 ಕೆ.ಜಿ. ತೂಕವಿರುವ ಈ ಕಲಾಕೃತಿಯ ರಚನೆಗೆ 7,600 ಮೈಲ್ಡ್ ಸ್ಟೀಲ್ ನಟ್​ಗಳನ್ನು ಬಳಸಲಾಗಿದೆ" ಎಂದು ಅವರು ತಿಳಿಸಿದ್ದಾರೆ.

ಸ್ಟೀಲ್ ನಟ್​ಗಳಿಂದ ಅರಳಿದ ಆದಿಯೋಗಿ ವಿಗ್ರಹ (ETV Bhharat)

ಜಿಲ್ಲಾಧಿಕಾರಿ ಮೆಚ್ಚುಗೆ:"ಶಿವರಾತ್ರಿಯ ದಿನ ಕಟಪಾಡಿಯ ವಿಶ್ವನಾಥ ದೇವಸ್ಥಾನದಲ್ಲಿ ಆದಿಯೋಗಿ ವಿಗ್ರಹದ ಪ್ರದರ್ಶನ ನಡೆಸಲಾಗಿತ್ತು. ಜನ ಮೆಚ್ಚುಗೆ ಪಡೆದ ನಂತರ ಅವರ ಸಲಹೆಯ ಮೇರೆಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್​ಗೆ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಎರಡು ತಿಂಗಳ ಬಳಿಕ ಪ್ರಶಸ್ತಿ ಪತ್ರ ಬಂದಿರುವುದು ಊರಿಗೆ ಮಾತ್ರವಲ್ಲ ಜಿಲ್ಲೆಗೂ ಹೆಮ್ಮೆಯ ವಿಷಯವಾಗಿದೆ" ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ:ಇಂಡಿಯಾ ಬುಕ್​ ಆಫ್​​ ರೆಕಾರ್ಡ್ಸ್​​​ನಲ್ಲಿ ಸ್ಥಾನ ಪಡೆದ 3 ವರ್ಷದ ಪೋರ: ಸ್ಮರಣಶಕ್ತಿಗೆ ಸಿಕ್ತು ಬಿರುದು - super talent Telangana kid

ABOUT THE AUTHOR

...view details