ಬೆಂಗಳೂರು: ಆದಾಯಕ್ಕಿಂತಲೂ ಅಧಿಕ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ರಾಜ್ಯಾದ್ಯಂತ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ಆರೋಪಿತ ಸರ್ಕಾರಿ ಅಧಿಕಾರಿಗಳ ಕೋಟ್ಯಂತರ ರೂ ಮೌಲ್ಯದ ಆಸ್ತಿಯ ವಿವರ ಕಲೆ ಹಾಕಿದ್ದಾರೆ. 12 ಜನ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ 60 ಸ್ಥಳಗಳಲ್ಲಿ ಇಂದು ಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಆರೋಪಿತ ಅಧಿಕಾರಿಗಳ ಆಸ್ತಿ ವಿವರವನ್ನ ಬಹಿರಂಗಗೊಳಿಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ನೀಡಿರುವ ವಿವರವಾದ ಮಾಹಿತಿ ಹೀಗಿದೆ.
ಚೇತನ್ ಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ, ಮೈಸೂರು ವಿಭಾಗ: ಒಟ್ಟು 7 ಸ್ಥಳಗಳಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿದ್ದು, 2 ನಿವೇಶನಗಳು, 1 ವಾಸದ ಮನೆ, 1 ವಾಣಿಜ್ಯ ಸಂಕೀರ್ಣ, 7.69 ಎಕರೆ ಕೃಷಿ ಜಮೀನು, ಎಲ್ಲ ಸೇರಿ ಒಟ್ಟು 4.36 ಲಕ್ಷ ಮೌಲ್ಯದ ಸ್ಥಿರಾಸ್ತಿ. 58 ಲಕ್ಷ ನಗದು, 14.71 ಲಕ್ಷ ಬೆಲೆಬಾಳುವ ಚಿನ್ನಾಭರಣಗಳು, 30 ಲಕ್ಷ ಬೆಲೆಬಾಳುವ ವಾಹನಗಳು ಸೇರಿದಂತೆ 1.02 ಕೋಟಿ ಮೌಲ್ಯದ ಚರಾಸ್ತಿ ಪತ್ತೆ. ಒಟ್ಟು ಆಸ್ತಿ ಮೌಲ್ಯ 5.38 ಕೋಟಿ.
ಆನಂದ್.ಸಿ.ಎಲ್, ಕೆಎಎಸ್ (ಹಿರಿಯ ಶ್ರೇಣಿ), ಆಯುಕ್ತರು ಮಂಗಳೂರು ಮಹಾನಗರ ಪಾಲಿಕೆ:ಒಟ್ಟು 6 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, 3 ವಾಸದ ಮನೆಗಳು, 4 ಎಕರೆ 27 ಗುಂಟೆ ಕೃಷಿ ಜಮೀನು ಸೇರಿದಂತೆ 2.12 ಕೋಟಿ ಮೌಲ್ಯದ ಸ್ಥಿರಾಸ್ತಿ, 19.40 ಲಕ್ಷ ಬೆಲೆಬಾಳುವ ಚಿನ್ನಾಭರಣಗಳು, 20.50 ಬೆಲೆಬಾಳುವ ವಾಹನಗಳು, 10 ಲಕ್ಷ ಜಮೀನು ಖರೀದಿಸಲು ಮುಂಗಡ ಹಣ, ಪತ್ನಿ ಮತ್ತು ಮಕ್ಕಳ ಹೆಸರಿನ ಬ್ಯಾಂಕ್ ಖಾತೆಗಳಲ್ಲಿ 16 ಲಕ್ಷ ಠೇವಣಿ ಸೇರಿದಂತೆ ಒಟ್ಟು 65.90 ಲಕ್ಷ ಮೌಲ್ಯದ ಚರಾಸ್ತಿ ಪತ್ತೆ. ಒಟ್ಟು ಆಸ್ತಿ ಮೌಲ್ಯ 2.77 ಕೋಟಿ.
ಬಿ.ವಿ.ರಾಜಾ, ಪ್ರಥಮ ದರ್ಜೆ ಸಹಾಯಕರು, (ಭೂಸ್ವಾಧೀನಾಧಿಕಾರಿ ಕಛೇರಿ) ಕೆಐಎಡಿಬಿ, ಬೆಂಗಳೂರು:3 ಸ್ಥಳಗಳಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿದ್ದು, 1 ನಿವೇಶನ, 6 ವಾಸದ ಮನೆಗಳು ಸೇರಿದಂತೆ 4.04 ಕೋಟಿ ಮೌಲ್ಯದ ಸ್ಥಿರಾಸ್ತಿ, 7 ಸಾವಿರ ರೂ ನಗದು, 40 ಲಕ್ಷ ಬೆಲೆಬಾಳುವ ಚಿನ್ನಾಭರಣಗಳು, 32 ಲಕ್ಷ ರೂ ಬೆಲೆಬಾಳುವ ವಾಹನಗಳು, 25 ಲಕ್ಷ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಸೇರಿದಂತೆ 1.47 ಕೋಟಿ ಮೌಲ್ಯದ ಚರಾಸ್ತಿ ಪತ್ತೆ. ಒಟ್ಟು ಆಸ್ತಿ ಮೌಲ್ಯ 5.51 ಕೋಟಿ.
ರಮೇಶ್ ಕುಮಾರ್, ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ, ಬೆಂಗಳೂರು:4 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, 2 ವಾಸದ ಮನೆಗಳು ಸೇರಿದಂತೆ 2.30 ಕೋಟಿ ಮೌಲ್ಯದ ಸ್ಥಿರಾಸ್ತಿ, 31.50 ಬೆಲೆಬಾಳುವ ಚಿನ್ನಾಭರಣಗಳು, 15 ಲಕ್ಷ ಬೆಲೆಬಾಳುವ ವಾಹನಗಳು, 20 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು, 1.12 ಕೋಟಿ ಮೌಲ್ಯದ ಇತರ ವಸ್ತುಗಳು ಮತ್ತು ವೆಚ್ಚಗಳು ಸೇರಿದಂತೆ 1.78 ಕೋಟಿ ಮೌಲ್ಯದ ಚರಾಸ್ತಿ ಪತ್ತೆ. ಒಟ್ಟು ಆಸ್ತಿ ಮೌಲ್ಯ 4.08 ಕೋಟಿ.
ಅತ್ತರ್ ಅಲಿ, ಉಪ ನಿಯಂತ್ರಕರು, ಕಾನೂನು ಮಾಪನ ಶಾಸ್ತ್ರ, ಬೆಂಗಳೂರು ವಿಭಾಗ:4 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, 4 ನಿವೇಶನಗಳು, 3 ವಾಸದ ಮನೆಗಳು ಸೇರಿದಂತೆ 5.82 ಕೋಟಿ ಮೌಲ್ಯದ ಸ್ಥಿರಾಸ್ತಿ, 25.18 ಲಕ್ಷ ನಗದು, 2.08 ಕೋಟಿ ಬೆಲೆಬಾಳುವ ಚಿನ್ನಾಭರಣಗಳು, 11 ಲಕ್ಷ ಬೆಲೆಬಾಳುವ ವಾಹನಗಳು, 37.45 ಲಕ್ಷ ಬೆಲೆಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು ಸೇರಿದಂತೆ 2.8 ಕೋಟಿ ಮೌಲ್ಯದ ಚರಾಸ್ತಿ ಪತ್ತೆ.
ಒಟ್ಟು ಆಸ್ತಿ ಮೌಲ್ಯ 8.63 ಕೋಟಿ.
ಮಂಜುನಾಥ್.ಟಿ.ಆರ್, ಪ್ರಥಮ ದರ್ಜೆ ಸಹಾಯಕ, ಕಂದಾಯ ಸಹಾಯಕ ಆಯುಕ್ತರ ಕಚೇರಿ, ಬೆಂಗಳೂರು ಉತ್ತರ:4 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, 1 ನಿವೇಶನ, 1 ವಾಸದ ಮನೆ, 3.12 ಎಕರೆ ಕೃಷಿ ಜಮೀನು ಸೇರಿದಂತೆ 1.69 ಕೋಟಿ ಮೌಲ್ಯದ ಸ್ಥಿರಾಸ್ತಿ, 4 ಲಕ್ಷ ನಗದು, 67.63 ಲಕ್ಷ ಬೆಲೆಬಾಳುವ ಚಿನ್ನಾಭರಣಗಳು, 8 ಲಕ್ಷ ಬೆಲೆಬಾಳುವ ವಾಹನಗಳು, 20.12 ಲಕ್ಷ ಬೆಲೆಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು ಸೇರಿದಂತೆ 99.76 ಲಕ್ಷ ಮೌಲ್ಯದ ಚರಾಸ್ತಿ ಪತ್ತೆ. ಒಟ್ಟು ಆಸ್ತಿ ಮೌಲ್ಯ 2.68 ಕೋಟಿ.